ಬೆಂಗಳೂರು: ರಾಜ್ಯದಲ್ಲಿ ಜನಪ್ರತಿನಿಧಿಗಳಿಗೆ ಕೊರೊನಾ ಸಂಕಷ್ಟ ತಪ್ಪದಂತಾಗಿದೆ. ಸಿಎಂ ಬಿಎಸ್ ವೈ, ಡಿಕೆಶಿ, ಶ್ರೀರಾಮುಲು, ಸಿದ್ದರಾಮಯ್ಯ ಹೀಗೆ ಘಟಾನುಘಟಿಗಳಿಗೂ ಕೊರೊನಾ ಸಂಕಷ್ಟ ತಪ್ಪಿಲ್ಲ. ಇದರ ಬೆನ್ನಲ್ಲೇ ಇದೀಗ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಈ ಕುರಿತಂತೆ ಟ್ವಿಟ್ ಮಾಡಿರುವ ನಳೀನ್ ಕುಮಾರ್ ಕಟೀಲ್ ಅವರು, ನಾನು #COVID ಪರೀಕ್ಷೆಗೆ ಒಳಗಾಗಿದ್ದು ವರದಿಯಲ್ಲಿ ಪಾಸಿಟಿವ್ ಎಂದು ಬಂದಿದೆ. ರೋಗಲಕ್ಷಣಗಳಿಲ್ಲದಿದ್ದರೂ ವೈದ್ಯರ ಸಲಹೆಯ ಮೇರೆಗೆ ಆಸ್ಪತ್ರೆಗೆ ದಾಖಲಾಗಿದ್ದೇನೆ. ನಿಮ್ಮ ಶುಭಾಶಯಗಳು ಮತ್ತು ಆಶೀರ್ವಾದಗಳೊಂದಿಗೆ ಶೀಘ್ರದಲ್ಲೇ ಹಿಂತಿರುಗುವ ವಿಶ್ವಾಸವಿದೆ. ನನ್ನೊಂದಿಗೆ ಸಂಪರ್ಕಕ್ಕೆ ಬಂದ ಎಲ್ಲರೂ ಜಾಗರೂಕರಾಗಿರಿ ಎಂದು ಮನವಿ ಮಾಡುತ್ತೇನೆ ಎಂದಿದ್ದಾರೆ.
ಶ್ರೀ ಅನ್ನಪೂರ್ಣೆಶ್ವರಿ ಜ್ಯೋತಿಷ್ಯ ಪೀಠಂ
ಶ್ರೀ ಮಹಾ ಕಾಲ ಭೈರವ
ದೈವಜ್ಞ ಪಂಡಿತ್ ಗಜೇಂದ್ರ ಅವಧಾನಿಗಳು
ವಿಳಾಸ – ಡಿವಿಜಿ ರೋಡ್, ಬಸವನಗುಡಿ ಬೆಂಗಳೂರು
ಸರ್ವ ಸಮಸ್ಯೆಗಳಿಗೆ ಗುರುಗಳನ್ನು ಒಮ್ಮೆ ಭೇಟಿ ಕೊಡಿ
ಸಂಪರ್ಕಿಸಿ – 9538175275








