ಕಾಂಗ್ರೆಸ್‌ನಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಸ್ಪರ್ಧಿಸಬಲ್ಲಂತಹ ನಾಯಕರು ಇಲ್ಲ: ಸಂಜಯ್ ರಾವತ್
ಮುಂಬೈ, ಅಗಸ್ಟ್31: ಹಿರಿಯ ಶಿವಸೇನೆ ಮುಖಂಡ ಸಂಜಯ್ ರಾವತ್ ಅವರು ಪಕ್ಷದ ಮುಖವಾಣಿ ಸಾಮ್ನಾ ಸಾಪ್ತಾಹಿಕ ಅಂಕಣದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ದೃಢವಾಗಿ ನಿಲ್ಲಬಲ್ಲ ನಾಯಕನ ಕೊರತೆಯಿದೆ ಎಂದು ಭಾನುವಾರ ಹೇಳಿಕೊಂಡಿದ್ದಾರೆ.
ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕತ್ವವನ್ನು ವಹಿಸಿಕೊಳ್ಳುವುದನ್ನು ತಡೆಯುವುದು ಪಕ್ಷದ ಅಳಿವಿನಂಚಿಗೆ ಕಾರಣವಾಗುತ್ತದೆ ಎಂದಿರುವ ಶಿವಸೇನೆ ಸಂಸದ ಸಂಜಯ್ ರಾವತ್, ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಪೂರ್ಣ ಶಕ್ತಿಯಿಂದ ನಿಲ್ಲಬಲ್ಲ ನಾಯಕ ಕಾಂಗ್ರೆಸ್ ನಲ್ಲಿ ಇಲ್ಲ ಎಂದು ಹೇಳಿದ್ದಾರೆ.
23 ಕಾಂಗ್ರೆಸ್ ನಾಯಕರು ಸೋನಿಯಾ ಗಾಂಧಿಗೆ ಬರೆದ ಪತ್ರವನ್ನು ಉಲ್ಲೇಖಿಸಿದ ರಾವತ್, ಈ ನಾಯಕರು ಯಾರು ಸಕ್ರಿಯರಾಗುವುದನ್ನು ತಡೆಯುತ್ತಿದ್ದಾರೆ ಎಂದು ಆಶ್ಚರ್ಯಪಟ್ಟರು. ಕಾಂಗ್ರೆಸ್ ಅಧ್ಯಕ್ಷರಾಗಿ ಗಾಂಧಿಯೇತರರು ಇರುವುದು ಒಳ್ಳೆಯದು, ಆದರೆ ಆ 23 ನಾಯಕರಲ್ಲಿ ಯಾರಿಗೂ ಅಧ್ಯಕ್ಷರಾಗುವ ಸಾಮರ್ಥ್ಯವಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆಗೆ ಶಿವಸೇನಾ ಪಕ್ಷವು ಮಹಾರಾಷ್ಟ್ರದ ಆಡಳಿತ ಮೈತ್ರಿಕೂಟದ ಒಂದು ಘಟಕವಾಗಿದೆ ಎಂದಿರುವ ರಾವತ್ ಮಾಜಿ ಕಾಂಗ್ರೆಸ್ ನಾಯಕರು ಮಂಡಿಸಿದ ಪ್ರಾದೇಶಿಕ ಪಕ್ಷಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ಇನ್ನೂ ಭಾರತದಾದ್ಯಂತ ಅಸ್ತಿತ್ವದಲ್ಲಿದೆ ಆದರೆ ವಿಭಿನ್ನ ಮುಖವಾಡಗಳನ್ನು ಹೊಂದಿದೆ. ಈ ಮುಖವಾಡಗಳನ್ನು ಎಸೆದರೆ ಅದು ಪ್ರಮುಖ ರಾಜಕೀಯ ಪಕ್ಷವಾಗಿ ಹೊರಹೊಮ್ಮಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.








