ADVERTISEMENT
Friday, July 3, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಭಾರತೀಯ ಸೇನೆಯಲ್ಲಿ ಬಾಂಬ್ ತಯಾರಕನ ಮಗನೊಬ್ಬನ ಸಂಘರ್ಷಪೂರ್ಣ ಕ್ರಿಕೆಟ್ ಜರ್ನಿ

admin by admin
August 31, 2020
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ಭಾರತೀಯ ಸೇನೆಯಲ್ಲಿ ಬಾಂಬ್ ತಯಾರಕನ ಮಗನೊಬ್ಬನ ಸಂಘರ್ಷಪೂರ್ಣ ಕ್ರಿಕೆಟ್ ಜರ್ನಿ:

ಅದೊಂದು ಕಡು ಬಡತನದ ಕುಟುಂಬ. ಆ ಕುಟುಂಬದ ಸದಸ್ಯರ ಒಟ್ಟು ಸಂಖ್ಯೆ ಎಂಟು. ಅಪ್ಪ -ಅಮ್ಮ, ಐವರು ಗಂಡು ಮಕ್ಕಳು ಮತ್ತು ಓರ್ವ ಹೆಣ್ಣು ಮಗಳು. ಈ ಕುಟುಂಬದ ತಿಂಗಳ ವರಮಾನ ಕೇವಲ ಹತ್ತು ಸಾವಿರ ರೂಪಾಯಿ. ಈ ಹತ್ತು ಸಾವಿರ ರೂಪಾಯಿನಲ್ಲಿ ಆರು ಮಕ್ಕಳ ಶಿಕ್ಷಣದ ಜೊತೆ ಮನೆಯ ಖರ್ಚು ವೆಚ್ಚ ಎಲ್ಲವನ್ನೂ ನೋಡಿಕೊಳ್ಳಬೇಕು. ಅದ್ರಲ್ಲೂ ಒಬ್ಬ ಮಗ ಕ್ರಿಕೆಟ್ ಅಕಾಡೆಮಿಗೆ ಸೇರಿಕೊಂಡಿದ್ದ. ಮಗನ ಪ್ರತಿಭೆಯನ್ನು ಕಣ್ಣಾರೆ ನೋಡುತ್ತಿದ್ದ ಅಪ್ಪನಿಗೆ ಮಗನ ಕ್ರಿಕೆಟ್ ಪ್ರತಿಭೆಯನ್ನು ಕಮರಿ ಹೋಗುವಂತೆ ಮಾಡುವುದು ಇಷ್ಟವಿರಲಿಲ್ಲ. ಅದಕ್ಕಾಗಿಯೇ ಪ್ರತಿ ತಿಂಗಳು 5 ಸಾವಿರ ರೂಪಾಯಿಯಿಂದ 8 ಸಾವಿರ ರೂಪಾಯಿ ಕ್ರಿಕೆಟ್ ಅಕಾಡೆಮಿಗೆ ಕಟ್ಟುತ್ತಿದ್ದ ಅಪ್ಪ, ಮಗನ ಕ್ರಿಕೆಟ್ ಬದುಕಿಗೆ ಭದ್ರ ಅಡಿಪಾಯ ಹಾಕಿದ್ದ. ಹೀಗೆ ಸುಮಾರು ಎಂಟು ವರ್ಷ ಇದೇ ರೀತಿ ಕಷ್ಟಪಟ್ಟು ದುಡಿಯುತ್ತಾ ಮನೆಯ ಖರ್ಚು ವೆಚ್ಚಗಳನ್ನು ಭರಿಸುತ್ತಿದ್ದ ಆ ಅಪ್ಪನ ತ್ಯಾಗ, ಬದ್ಧತೆಗೆ ಮಗ ಈಗಂತೂ ತಕ್ಕ ಪ್ರತಿಫಲವನ್ನು ನೀಡಿದ್ದಾನೆ.
ಇದು ಟೀಮ್ ಇಂಡಿಯಾದ ಸ್ಟಾರ್ ಆಟಗಾರನಾಗಿದ್ದ ಸುರೇಶ್ ರೈನಾ ಅವರ ಬದುಕಿನ ಕಥೆ.

Related posts

ಕಿವಿಯಲ್ಲಿ ದಾಸವಾಳ ಇಟ್ಟುಕೊಂಡಿದ್ದೀವಾ? ನಾಯಿಗಳ ಸಂಖ್ಯೆಗಿಂತ ಸಂತಾನಹರಣ ಚಿಕಿತ್ಸೆಯೇ ಹೆಚ್ಚು!: ಅಧಿಕಾರಿಗಳ ಬೆವರಿಳಿಸಿದ ಸಚಿವ ಕೃಷ್ಣಭೈರೇಗೌಡ- ಅಂಕಿಅಂಶಗಳ ಗೋಲ್ಮಾಲ್ ಕಂಡು ಸಚಿವರು ಗರಂ!

ಬೀದಿಬದಿ ವ್ಯಾಪಾರಿಗಳ ತೆರವು ಇಲ್ಲ, ಕೇವಲ ಸ್ಥಳಾಂತರ: ಸಚಿವ ಕೃಷ್ಣ ಬೈರೇಗೌಡ ಯೂಟರ್ನ್, ಜುಲೈ 10ರಿಂದ ಅನಾಥ ವಾಹನಗಳ ಸಫಾಯಿ ಶುರು

July 3, 2026
ವಿಧಿ-ವಿಧಾನವಿಲ್ಲದ ಹಿಂದೂ ವಿವಾಹ ಮಾನ್ಯವಲ್ಲ: ಗುಜರಾತ್ ಹೈಕೋರ್ಟ್

ವಿಧಿ-ವಿಧಾನವಿಲ್ಲದ ಹಿಂದೂ ವಿವಾಹ ಮಾನ್ಯವಲ್ಲ: ಗುಜರಾತ್ ಹೈಕೋರ್ಟ್

July 3, 2026

ಪ್ರತಿಭೆ ಯಾರಪ್ಪನ ಸ್ವತ್ತು ಅಲ್ಲ. ಎಷ್ಟೇ ಬಡತನವಿರಲಿ, ಎಷ್ಟೇ ಕಷ್ಟವಿರಲಿ. ಪ್ರತಿಭೆಗೆ ಒಂದಲ್ಲ ಒಂದು ದಿನ ಅವಕಾಶ ಸಿಕ್ಕಿಯೇ ಸಿಗುತ್ತದೆ ಎಂಬುದು ಸುರೇಶ್ ರೈನಾ ಜೀವನದ ಚಿತ್ರಣವೇ ಉತ್ತಮ ನಿದರ್ಶನ. ಸುರೇಶ್ ರೈನಾ ಅವರ ತಂದೆ ತ್ರಿಲೋಕ್ ಚಂದ್ ರೈನಾ, ಮಿಲಿಟರಿ ಅಧಿಕಾರಿ. ಬಾಂಬ್ ತಯಾರಿಕೆಯಲ್ಲಿ ನಿಪುಣರಾಗಿದ್ದರು. ಆದ್ರೆ ಅವರಿಗೆ ಸಿಗುತ್ತಿದ್ದ ಸಂಬಳ ಮಾತ್ರ ಹತ್ತು ಸಾವಿರ ರೂಪಾಯಿ. ಈ ಹತ್ತು ಸಾವಿರ ರೂಪಾಯಿ ಮಗ ಸುರೇಶ್ ರೈನಾ ಕ್ರಿಕೆಟ್ ಬದುಕಿಗೆ ಉತ್ತೇಜನ ನೀಡಲು ಸಾಕಾಗುತ್ತಿರಲಿಲ್ಲ. ಆದ್ರೂ ಮಗನ ಕ್ರಿಕೆಟ್ ಆಸೆಗೆ ತ್ರಿಲೋಕ್ ಚಂದ್ ಅಡ್ಡಿಪಡಿಸಲಿಲ್ಲ. ಆದ್ರೆ ಎರಡು ದಶಕಗಳ ನಂತ್ರ ಎಲ್ಲವೂ ಬದಲಾಗಿ ಹೋಯ್ತು. ಅಪ್ಪನ ಕಷ್ಟದ ದಿನಗಳನ್ನು ದೂರ ಮಾಡಿದ್ದ ಸುರೇಶ್ ರೈನಾ ವಿಶ್ವ ಕ್ರಿಕೆಟ್ ನಲ್ಲಿ ಅಪ್ರತಿಮ ಸಾಧನೆ ಮಾಡಿ ಈ ಸಂಸಾರವನ್ನು ನೆಮ್ಮದಿಯಿಂದ ಜೀವನ ಸಾಗಿಸುವಂತೆ ಮಾಡಿದ್ದಾರೆ.

ಸುರೇಶ್ ರೈನಾ ಅವರ ನಿಕ್ ನೇಮ್ ಸೋನು. ಇವ್ರು ಮೂಲತಃ ಜಮ್ಮು ಕಾಶ್ಮೀರದವರು. 1990ರಲ್ಲಿ ಕಾಶ್ಮೀರಿ ಪಂಡಿತರನ್ನು ಕೊಲೆ ಮಾಡಲಾಗುತ್ತಿತ್ತು. ಹೀಗಾಗಿ ಕುಟುಂಬದ ರಕ್ಷಣೆಗಾಗಿ ತ್ರಿಲೋಕ್ ಚಂದ್ ಅವರು ಜಮ್ಮು ಕಾಶ್ಮೀರವನ್ನು ಬಿಟ್ಟು ಉತ್ತರ ಪ್ರದೇಶಕ್ಕೆ ವಲಸೆ ಬಂದ್ರು. ಜಮ್ಮು ಕಾಶ್ಮೀರದ ರೈನಾವಾರಿಯಿಂದ ರೈನಾ ಕುಟುಂಬ ಉತ್ತರ ಪ್ರದೇಶದ ಗಾಝಿಯಾಬಾದ್‍ನ ಮುರುದ್‍ನಗರದಲ್ಲಿ ಜೀವನ ಸಾಗಿಸಲು ಶುರು ಮಾಡಿದ್ದರು. ಸುರೇಶ್ ರೈನಾ ತಂದೆ ತ್ರಿಲೋಕ್ ಚಂದ್ ಅವರು ಹಳೆಯ ದಿನಗಳನ್ನು ನೆನಪು ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಅದ್ರ ಬಗ್ಗೆ ಅವರು ಮಾತನಾಡುವುದು ಇಲ್ಲ. ಕಾಶ್ಮೀರದಲ್ಲಿ ಬ್ರಾಹ್ಮಣರನ್ನು ಯಾವ ರೀತಿ ಕೊಲೆ ಮಾಡಲಾಗುತ್ತಿತು, ಸೈನಿಕರು ಯಾವ ರೀತಿ ಹುತಾತ್ಮರಾಗುತ್ತಿದ್ದರು ಎಂಬುದನ್ನು ತ್ರಿಲೋಕ್ ಚಂದ್ ಅವರು ಕಣ್ಣಾರೆ ನೋಡಿದ್ದರು. ಹೀಗಾಗಿ ಅವರು ಹಿಂದಿನ ಬದುಕಿನ ಬಗ್ಗೆ ಏನನ್ನು ಹೇಳುತ್ತಿಲ್ಲ. ಅದು ಅವರಿಗೆ ಇಷ್ಟವೂ ಇಲ್ಲವಂತೆ.

ಇನ್ನು 1998ರಲ್ಲಿ ಸುರೇಶ್ ರೈನಾ ಅವರ ಅದೃಷ್ಟವೇ ಬದಲಾಗಿ ಹೋಯ್ತು. ಲಕ್ನೋದಲ್ಲಿರುವ ಗುರು ಗೋವಿಂದ್ ಸಿಂಗ್ ಸ್ಪೋರ್ಟ್ ಕಾಲೇಜ್‍ಗೆ ರೈನಾ ಸೇರಿಕೊಂಡಿದ್ದರು. ಅಲ್ಲಿ ವಾರ್ಷಿಕ ಶುಲ್ಕವಾಗಿ ಐದು ಸಾವಿರ ಕಟ್ಟಬೇಕಾಗಿತ್ತು. ಇಲ್ಲಿ ರೈನಾ ಅವರು ಕ್ರಿಕೆಟ್ ಆಟದ ಜೊತೆ ಶಿಕ್ಷಣಕ್ಕೂ ಆದ್ಯತೆ ನೀಡಿದ್ರು. ಆರು ವರ್ಷಗಳ ಸತತ ಪರಿಶ್ರಮದಿಂದ ರೈನಾ ಗ್ರೆಗ್ ಚಾಪೆಲ್ ಅವರ ಕಣ್ಣಿಗೆ ಬಿದ್ದರು. ಆ ನಂತರ ಹಿಂತಿರುಗಿ ನೋಡಲೇ ಇಲ್ಲ. 2005ರಲ್ಲಿ ಟೀಮ್ ಇಂಡಿಯಗೆ ಎಂಟ್ರಿಯಾದ್ರು. ನಾಯಕ ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿದ್ರು. ಹಾಗೇ ಒಡನಾಡಿ, ಆಪ್ತ ಮಿತ್ರ ಧೋನಿಯ ಬೆಂಬಲದಿಂದ ಟೀಮ್ ಇಂಡಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು.

ಎಡಗೈ ಬ್ಯಾಟಿಂಗ್ ಮೂಲಕ ಅಬ್ಬರಿಸುತ್ತಿದ್ದ ರೈನಾ ಹಲವು ಪಂದ್ಯಗಳನ್ನು ಏಕಾಂಗಿಯಾಗಿ ಗೆಲ್ಲಿಸಿಕೊಟ್ಟಿದ್ದಾರೆ. ಅದ್ಭುತ ಫೀಲ್ಡಿಂಗ್, ಪಾರ್ಟ್ ಟೈಮ್ ಬೌಲರ್ ಮೂಲಕವೂ ಗಮನ ಸೆಳೆದಿದ್ದರು. ಅಲ್ಲದೆ ಮೂರು ಮಾದರಿಯ ಕ್ರಿಕೆಟ್ ನಲ್ಲಿ ಶತಕ ಸಿಡಿಸಿದ್ದ ಹಿರಿಮೆಯೂ ಇವರದ್ದಾಗಿದೆ. ಇದೀಗ ತನ್ನ 33ರ ಹರೆಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದ್ದಾರೆ.

ಹಾಗೇ 2020ರ ಐಪಿಎಲ್‍ಗೆ ಸಕತ್ ತಯಾರಿ ಕೂಡ ಮಾಡಿಕೊಂಡಿದ್ದರು. ಆದ್ರೆ ಅಚ್ಚರಿಯ ರೀತಿಯಲ್ಲಿ ವೈಯಕ್ತಿಕ ಕಾರಣ ನೀಡಿ ಐಪಿಎಲ್ ಟೂರ್ನಿಯಿಂದ ಹೊರನಡೆದಿದ್ದಾರೆ. ತನ್ನ ಸೋದರತ್ತೆಯ ಕುಟುಂಬದ ಮೇಲೆ ಅನಾಮಿಕರು ಭೀಕರ ದಾಳಿ ನಡೆಸಿರುವುದು ಐಪಿಎಲ್ ನಿಂದ ಹೊರನಡೆಯಲು ಕಾರಣ ಅಂತ ಹೇಳಲಾಗುತ್ತಿದೆ. ಆದ್ರೆ ಇನ್ನೊಂದು ಮೂಲಗಳ ಪ್ರಕಾರ, ಸುರೇಶ್ ರೈನಾ ಅವರಿಗೆ ಸಿಎಸ್‍ಕೆ ನೀಡಿರುವ ಹೊಟೇಲ್ ವ್ಯವಸ್ಥೆಯ ಬಗ್ಗೆ ಅಸಮಾಧಾನ ಹೊಂದಿರುವ ಕಾರಣ ಅವರು ಐಪಿಎಲ್ ನಿಂದ ಹೊರನಡೆದಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.

ಅದೇನೇ ಇರಲಿ, ಸುರೇಶ್ ರೈನಾ ಅವರಿಗೆ ಜಮ್ಮು ಕಾಶ್ಮೀರದ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ. ಇತ್ತೀಚೆಗಷ್ಟೇ ಜಮ್ಮು ಕಾಶ್ಮೀರ ಕ್ರಿಕೆಟ್ ಬಗ್ಗೆಯೂ ಮಾತನಾಡಿದ್ದಾರೆ. ಅದೇ ರೀತಿ ಮೂರು ಬಾರಿ ಎಒಸಿಗೂ ಭೇಟಿ ಕೊಟ್ಟಿದ್ದಾರೆ. ಧೋನಿ ಜೊತೆಯಾಗಿ ಎಲ್‍ಓಸಿಗೆ ಭೇಟಿ ನೀಡಿರುವ ವಿಚಾರ ಅವರ ಮನೆಯವರಿಗೆ ಗೊತ್ತಿಲ್ಲ. ಅಲ್ಲಿ ಅವರ ಕಮಾಂಡೋ ಅಧಿಕಾರಿಗಳಾಗಿರುವ ಸ್ನೇಹಿತರನ್ನು ಭೇಟಿ ಮಾಡಿದ್ದಾರೆ. ಒಟ್ಟಿನಲ್ಲಿ ಕಷ್ಟದ ದಿನಗಳಲ್ಲಿ ಜೀವನ ಸಾಗಿಸಿಕೊಂಡು ಅಂತಾರಾಷ್ಟ್ರೀಯ ಮಟ್ಟದ ಸ್ಟಾರ್ ಕ್ರಿಕೆಟಿನಾಗಿ ರೂಪುಗೊಂಡಿರುವ ಸೋನು ಸಾಧನೆಗೆ ಸಲಾಂ ಅನ್ನಲೇಬೇಕು. ಹಾಗೇ ಸುರೇಶ್ ರೈನಾ ಅವರ ಕ್ರಿಕೆಟ್ ಬದುಕನ್ನು ಸುಂದರವಾಗಿ ರೂಪಿಸಿರುವ ತ್ರಿಲೋಕ್ ಚಂದ್ ರೈನಾ ಅವರ ಬಗ್ಗೆ ಹೆಮ್ಮೆ ಅನ್ನಿಸುತ್ತಿದೆ.

Tags: #Military officer Trilokchand Raina#uttara pradeshaCricketjammu kashmirarainaSuresh Rainateam indiaworld cricket
ShareTweetSendShare
Join us on:

Related Posts

ಕಿವಿಯಲ್ಲಿ ದಾಸವಾಳ ಇಟ್ಟುಕೊಂಡಿದ್ದೀವಾ? ನಾಯಿಗಳ ಸಂಖ್ಯೆಗಿಂತ ಸಂತಾನಹರಣ ಚಿಕಿತ್ಸೆಯೇ ಹೆಚ್ಚು!: ಅಧಿಕಾರಿಗಳ ಬೆವರಿಳಿಸಿದ ಸಚಿವ ಕೃಷ್ಣಭೈರೇಗೌಡ- ಅಂಕಿಅಂಶಗಳ ಗೋಲ್ಮಾಲ್ ಕಂಡು ಸಚಿವರು ಗರಂ!

ಬೀದಿಬದಿ ವ್ಯಾಪಾರಿಗಳ ತೆರವು ಇಲ್ಲ, ಕೇವಲ ಸ್ಥಳಾಂತರ: ಸಚಿವ ಕೃಷ್ಣ ಬೈರೇಗೌಡ ಯೂಟರ್ನ್, ಜುಲೈ 10ರಿಂದ ಅನಾಥ ವಾಹನಗಳ ಸಫಾಯಿ ಶುರು

by Shwetha
July 3, 2026
0

ಬೆಂಗಳೂರು: ಸಿಲಿಕಾನ್ ಸಿಟಿಯ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ವಿಚಾರದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಮಹತ್ವದ ಯೂಟರ್ನ್ ತೆಗೆದುಕೊಂಡಿದ್ದಾರೆ. ಗ್ರೇಟರ್ ಬೆಂಗಳೂರು...

ವಿಧಿ-ವಿಧಾನವಿಲ್ಲದ ಹಿಂದೂ ವಿವಾಹ ಮಾನ್ಯವಲ್ಲ: ಗುಜರಾತ್ ಹೈಕೋರ್ಟ್

ವಿಧಿ-ವಿಧಾನವಿಲ್ಲದ ಹಿಂದೂ ವಿವಾಹ ಮಾನ್ಯವಲ್ಲ: ಗುಜರಾತ್ ಹೈಕೋರ್ಟ್

by Shwetha
July 3, 2026
0

ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪೊಂದರಲ್ಲಿ, ಕೇವಲ ವಿವಾಹ ನೋಂದಣಿ ಮಾಡಿಕೊಂಡರೆ ಮಾತ್ರ ಹಿಂದೂ ವಿವಾಹವು ಕಾನೂನುಬದ್ಧವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿಗಳಾದ ಇಲೇಶ್ ವೋರಾ ಮತ್ತು ಆ‌ರ್.ಟಿ. ವಚ್ಛಾನಿ...

ಬಸ್ ಪ್ರಯಾಣಿಕರಿಗೆ ದರ ಏರಿಕೆ ಬಿಸಿ: ಸಾರಿಗೆ ಸಂಸ್ಥೆಗಳ ಉಳಿವಿಗೆ ದರ ಏರಿಕೆ ಅನಿವಾರ್ಯ – ಡಿಕೆ ಶಿವಕುಮಾರ್

ಖಾಸಗಿ ಲೇಔಟ್ ರಸ್ತೆಗಳು ಇನ್ಮುಂದೆ ಸರ್ಕಾರಿ ಸ್ವತ್ತು: ಲೇಔಟ್ ರಸ್ತೆಗಳ ಮೇಲೆ ಖಾಸಗಿ ಹಕ್ಕಿಗೆ ಬ್ರೇಕ್ ಹಾಕಿದ ರಾಜ್ಯ ಸರ್ಕಾರ

by Shwetha
July 3, 2026
0

ಬೆಂಗಳೂರು: ರಾಜ್ಯದ ರಿಯಲ್ ಎಸ್ಟೇಟ್ ಮತ್ತು ನಗರ ಪ್ರದೇಶದ ಪಾದಚಾರಿ ಹಿತದೃಷ್ಟಿಯಿಂದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಎರಡು ಅತ್ಯಂತ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಇನ್ಮುಂದೆ ಖಾಸಗಿ...

ವಿಜಯ್ ಸರ್ಕಾರ ಅಸ್ಥಿರಗೊಳಿಸುವ ಸಂಚು ಆರೋಪ; 6 ಮಂದಿ ಬಂಧನ

ವಿಜಯ್ ಸರ್ಕಾರ ಅಸ್ಥಿರಗೊಳಿಸುವ ಸಂಚು ಆರೋಪ; 6 ಮಂದಿ ಬಂಧನ

by Shwetha
July 3, 2026
0

ಮುಖ್ಯಮಂತ್ರಿ ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರವನ್ನು ಅಸ್ಥಿರಗೊಳಿಸಲು ಸಂಚು ರೂಪಿಸಲಾಗಿದೆ ಎಂಬ ಆರೋಪದಡಿ ಮಹತ್ವದ ಬೆಳವಣಿಗೆ ನಡೆದಿದೆ. ವರದಿಗಳ ಪ್ರಕಾರ, ವಿಧಾನಸಭೆಯ ಸ್ಪೀಕರ್ ವಿರುದ್ಧದ ಅವಿಶ್ವಾಸ...

30 ದಿನ ಜೈಲಿನಲ್ಲಿದ್ದರೆ ಅಧಿಕಾರ ಗೋವಿಂದ -ಜೈಲಿನಿಂದ ಆಡಳಿತ ನಡೆಸುವ ಆಟಕ್ಕೆ ಬೀಳಲಿದೆ ಬ್ರೇಕ್:30 ದಿನ ಜೈಲಿನಲ್ಲಿದ್ದರೆ ಸಿಎಂ ಮತ್ತು ಪ್ರಧಾನಿ ಪಟ್ಟಕ್ಕೆ ಕುತ್ತು;ವಿರೋಧ ಪಕ್ಷಗಳ ನಿದ್ದೆಗೆಡಿಸಿದ ಕೇಂದ್ರದ ಹೊಸ ಪ್ಲಾನ್

30 ದಿನ ಜೈಲಿನಲ್ಲಿದ್ದರೆ ಅಧಿಕಾರ ಗೋವಿಂದ -ಜೈಲಿನಿಂದ ಆಡಳಿತ ನಡೆಸುವ ಆಟಕ್ಕೆ ಬೀಳಲಿದೆ ಬ್ರೇಕ್:30 ದಿನ ಜೈಲಿನಲ್ಲಿದ್ದರೆ ಸಿಎಂ ಮತ್ತು ಪ್ರಧಾನಿ ಪಟ್ಟಕ್ಕೆ ಕುತ್ತು;ವಿರೋಧ ಪಕ್ಷಗಳ ನಿದ್ದೆಗೆಡಿಸಿದ ಕೇಂದ್ರದ ಹೊಸ ಪ್ಲಾನ್

by Shwetha
July 3, 2026
0

ನವದೆಹಲಿ: ಭ್ರಷ್ಟಾಚಾರ ಅಥವಾ ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲುಕಿ ಜೈಲು ಪಾಲಾಗುವ ಉನ್ನತ ಹುದ್ದೆಯಲ್ಲಿರುವವರಿಗೆ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಲು ಮುಂದಾಗಿದೆ. ಯಾವುದೇ ಸಚಿವರು, ಮುಖ್ಯಮಂತ್ರಿ ಅಥವಾ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram