ಗೃಹ ಸಚಿವ ಅಮಿತ್ ಶಾ ಗುಣಮುಖ – ಏಮ್ಸ್ ಆಸ್ಪತ್ರೆಯಿಂದ ಬಿಡುಗಡೆ
ಹೊಸದಿಲ್ಲಿ, ಅಗಸ್ಟ್31: ಕೋವಿಡ್ ನಂತರದ ಚಿಕಿತ್ಸೆಗಾಗಿ ಆಗಸ್ಟ್ 18 ರಂದು ನವದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಗೆ ದಾಖಲಾಗಿದ್ದ ಗೃಹ ಸಚಿವ ಅಮಿತ್ ಶಾ ಅವರು ಇಂದು ಬೆಳಗ್ಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಸೋಮವಾರ ತಿಳಿಸಿದೆ.
ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ನವದೆಹಲಿಯ ಏಮ್ಸ್ ನಲ್ಲಿ ಕೋವಿಡ್ ನಂತರದ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಅವರು ಚೇತರಿಸಿಕೊಂಡಿದ್ದಾರೆ ಮತ್ತು ಅಲ್ಪಾವಧಿಯಲ್ಲಿಯೇ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಏಮ್ಸ್ ಶನಿವಾರ (ಆಗಸ್ಟ್ 29) ಹೇಳಿಕೆ ನೀಡಿತ್ತು.
https://twitter.com/AmitShah/status/1300268408345366528
ಆಗಸ್ಟ್ 2 ರಂದು, 55 ವರ್ಷದ ಅಮಿತ್ ಶಾ ಅವರಿಗೆ ಕೋವಿಡ್ -19 ಸೋಂಕು ದೃಢಪಟ್ಟಿತ್ತು. ಅವರು ಮೆಡಂತಾ ಆಸ್ಪತ್ರೆಯಲ್ಲಿ ಕೊರೋನವೈರಸ್ ಸೋಂಕಿಗೆ ಚಿಕಿತ್ಸೆ ಪಡೆದು ಗುಣಮುಖರಾದ ನಂತರ ಶಾ ಅವರನ್ನು ಬಿಡುಗಡೆ ಮಾಡಲಾಗಿತ್ತು. ಡಿಸ್ಚಾರ್ಜ್ ಆದ ಕೆಲವು ದಿನಗಳ ನಂತರ ಆಯಾಸ ಮತ್ತು ಮೈಕೈ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಗಸ್ಟ್ 18 ರಂದು ಅಮಿತ್ ಷಾ ಅವರನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಏಮ್ಸ್) ದಾಖಲು ಮಾಡಲಾಗಿತ್ತು. ಇದೀಗ ಅವರು ಸಂಪೂರ್ಣವಾಗಿ ಗುಣಮುಖರಾಗಿದ್ದು, ಸೋಮವಾರ ಬೆಳಗ್ಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಮತ್ತು ದೇಶವಾಸಿಗಳಿಗೆ ಟ್ವೀಟ್ ಮೂಲಕ ಓಣಂ ಶುಭಾಶಯ ಕೋರಿದ್ದಾರೆ








