ಚೆನ್ನೈ: ರಾಮನಾಥಪುರಂ ಜಿಲ್ಲೆಯ ವಾಲಿನೋಕ್ಕಂ ಬೀಚ್ ನಲ್ಲಿ ಬಂಡೆಯಾಕಾರದ ಬೃಹತ್ ತಿಮಿಂಗಿಲವೊಂದು ಪತ್ತೆಯಾಗಿದ್ದು, ಅದನ್ನು ನೋಡಲು ಜನರು ಮುಗಿಬಿದ್ದಿದ್ದಾರೆ.
ಬೀಚ್ ನಲ್ಲಿ ಬೃಹತ್ ತಿಮಿಂಗಿಲವನ್ನು ಕಂಡ ಜನರು ಅದನ್ನು ನೋಡಲು ಹತ್ತಿರ ಹೋಗಿದ್ದಾರೆ. ಆದ್ರೆ ಆ ತಿಮಿಂಗಿಲ ಮೃತಪಟ್ಟಿರುವುದು ತಿಳಿದು ಬಂದಿದೆ. ತಿಮಿಂಗಿಲಕ್ಕೆ ಸಮುದ್ರದಲ್ಲಿ ಹಡಗು ಡಿಕ್ಕಿ ಹೊಡೆದಿರಬಹುದು. ತಿಮಿಂಗಿಲದ ವಯಸ್ಸನ್ನು ಲೆಕ್ಕಹಾಕಲು ಸಾಧ್ಯವಾಗುತ್ತಿಲ್ಲ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
‘ನಾವು ಇದೀಗ ತಿಮಿಂಗಿಲದ ಮರಣೋತ್ತರ ಪರೀಕ್ಷೆಯನ್ನು ಮುಗಿಸಿದ್ದೇವೆ. ತಿಮಿಂಗಿಲಕ್ಕೆ ದೊಡ್ಡ ಹಡಗು ಹೊಡೆದಿರಬಹದು ಎಂದು ಶಂಕಿಸಿದ್ದೇವೆ. ಆದರೆ ತಿಮಿಂಗಿಲ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ’ ಎಂದು ಅರಣ್ಯ ಅಧಿಕಾರಿ ಸಿಕ್ಕಾಂತರ್ ಬಾಷಾ ತಿಳಿಸಿದ್ದಾರೆ.
ಶ್ರೀ ಅನ್ನಪೂರ್ಣೆಶ್ವರಿ ಜ್ಯೋತಿಷ್ಯ ಪೀಠಂ
ಶ್ರೀ ಮಹಾ ಕಾಲ ಭೈರವ
ದೈವಜ್ಞ ಪಂಡಿತ್ ಗಜೇಂದ್ರ ಅವಧಾನಿಗಳು
ವಿಳಾಸ – ಡಿವಿಜಿ ರೋಡ್, ಬಸವನಗುಡಿ ಬೆಂಗಳೂರು
ಸರ್ವ ಸಮಸ್ಯೆಗಳಿಗೆ ಗುರುಗಳನ್ನು ಒಮ್ಮೆ ಭೇಟಿ ಕೊಡಿ
ಸಂಪರ್ಕಿಸಿ – 9538175275








