ತುಮಕೂರು: ಸ್ಯಾಂಡಲ್ವುಡ್ನ ಡ್ರಗ್ಸ್ ಮಾಫಿಯಾ ವಿಚಾರ ನನಗೆ ಗೊತ್ತಿಲ್ಲ. ಗೊತ್ತಿಲ್ಲದ ವಿಚಾರದ ಬಗ್ಗೆ ನಾನು ಏಕೆ ಮಾತನಾಡಲಿ ಎಂದು ಹೇಳುವ ಮೂಲಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ನಾಳೆ ತಮ್ಮ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ತುಮಕೂರಿನ ಸಿದ್ದಗಂಗಾಮಠಕ್ಕೆ ಭೇಟಿ ನೀಡಿದ ಸುದೀಪ್, ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ಪೂಜೆ ಸಲ್ಲಿಸಿದರು. ಸುದೀಪ್ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸಾಥ್ ನೀಡಿದರು.
ಗದ್ದುಗೆ ದರ್ಶನ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುದೀಪ್, ಗೊತ್ತಿಲ್ಲದ ವಿಚಾರದ ಬಗ್ಗೆ ನಾನೇಕೆ ಎಕ್ಸ್ಪರ್ಟ್ ಆಗಲಿ. ಗೊತ್ತಿಲ್ಲದ ವಿಚಾರದ ಬಗ್ಗೆ ಮಾತನಾಡುವುದು ತಪ್ಪು. ಈ ವಿಚಾರದಲ್ಲಿ ಚಿತ್ರರಂಗದ ಯಾರ ಬಗ್ಗೆಯೂ ನಾನು ಟೀಕಿಸಲ್ಲ. ಚಿತ್ರರಂಗವನ್ನು ಎಲ್ಲರೂ ಸೇರಿ ಕಟ್ಟಿದ್ದಾರೆ. ಯಾವುದೋ ಒಂದು ವಿಚಾರದ ಮುಂದಿಟ್ಟುಕೊಂಡು ಇಡೀ ಚಿತ್ರರಂಗದ ಮೇಲೆ ದೂಷಣೆ ಮಾಡುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.
ಸಾಮಾಜಿಕ ಕೆಲಸಗಳಲ್ಲಿ ನಾನು ತೊಡಸಿಕೊಂಡಿದ್ದೇನೆ. ನನ್ನ ಅಭಿಮಾನಿಗಳು ನನಗಿಂತ 10 ಪಟ್ಟು ಕೆಲಸ ಮಾಡುತ್ತಾರೆ. ನನಗೆ ರಾಜಕೀಯ ಪಾರ್ಟಿಗಳ ಬಗ್ಗೆ ಗೊತ್ತು. ಆದರೆ ಕ್ಲಬ್, ಪಬ್ ಸೇರಿದಂತೆ ಬೇರೆ ಪಾರ್ಟಿಗಳ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ ಎಂದರು.
ಖುಷಿಯಾಗಿರಲು ಜನರು ಸೇರಿ ಪಾರ್ಟಿ ಮಾಡುತ್ತಾರೆ. ಕಲಿಯುವವರು ಹೇಗಾದರು ಕಲಿಯುತ್ತಾರೆ, ಯಾವುದೂ ಹೇಳಿಕೊಟ್ಟು ಬರುವುದಿಲ್ಲ. ಬದುಕಿನ ಅನುಭವದಿಂದ ಎಲ್ಲಾ ಕಲಿಯುತ್ತಾರೆ. ಯಾರನ್ನೂ ಯಾರು ಹೇಳಿ ಕೇಳಿ ಕಲಿಯುವುದಿಲ್ಲ ಎಂದು ತಿಳಿಸಿದ್ದಾರೆ.
ಚಿರು ಸರ್ಜಾ ವಿಚಾರ ಕೆದಕುವುದು ಬೇಡ
ಚಿರಂಜೀವಿ ಸರ್ಜಾ ಬಗ್ಗೆ ಇಂದ್ರಜಿತ್ ಲಂಕೇಶ್ ಮಾತನಾಡಿರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಿಚ್ಚ ಸುದೀಪ್, ಚಿರಂಜೀವಿ ಸರ್ಜಾ ನನಗೆ ಬೇಕಾದ ಹುಡುಗ. ಚಿರು ಸರ್ಜಾ ನನ್ನ ತಮ್ಮನ ತರಹ ಇದ್ದ. ಈಗ ಚಿರು ಸರ್ಜಾ ವಿಚಾರ ಕೆದಕುವುದು ಬೇಡ ಎಂದು ಮನವಿ ಮಾಡಿದರು.
******
ಕೇರಳ ಮತ್ತು ಕೊಳ್ಳೇಗಾಲದ ಮಹಾ ವಶೀಕರಣ ಮಾಂತ್ರಿಕರು ಮತ್ತು ತಾಂತ್ರಿಕರು ಪಂಡಿತ್ ಸಂತೋಷ್ ಆಚಾರ್ಯ ಗುರೂಜಿ
ಇವರು ನಿಮ್ಮ ಸಮಸ್ಯೆಗಳಾದ ವಶೀಕರಣ, ವಿವಾಹ, ಸಂತಾನ, ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಹೋಗಿದ್ರೆ, ಇಷ್ಟ ಪಟ್ಟ ಪುರುಷ ಮತ್ತು ಸ್ತ್ರಿ ನಿಮ್ಮ ವಶ ಆಗಬೇಕಾದರೆ ಮತ್ತು ಲೈಂಗಿಕ ಸಮಸ್ಯೆ, ಸಾಲಬಾಧೆ, ಗುಪ್ತ ಸಮಸ್ಯೆಗಳಿಗೆ ಕೇರಳದ ಭದ್ರಕಾಳಿ ದೇವಿ ಶಕ್ತಿಯಿಂದ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ದೂರವಾಣಿ ಸಂಖ್ಯೆ 9901005534
ಕರೆ ಅಥವಾ ವಾಟ್ಸಾಪ್ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.








