ಚಿಕ್ಕೋಡಿ : ಹಾವು-ಮುಂಗಸಿ ಕಿತ್ತಾಟದ ವೇಳೆ ಹಂದಿಗಳು ಮತ್ತು ಕಾಗೆಗಳು ನಾಗರಹಾವಿನ ರಕ್ಷಣೆ ನಿಂತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಚಿಕ್ಕೋಡಿಯ ನಿಪ್ಪಾಣಿ ತಾಲೂಕಿನಲ್ಲಿ ಈ ಘಟನೆ ನಡೆದಿದೆ. ಹಾವು – ಮುಂಗಸಿಯ ಕಿತ್ತಾಟದ ದೃಶ್ಯಗಳನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ವಿಡಿಯೋದಲ್ಲಿ ಹೆಡೆಎತ್ತಿ ನಿಂತಿದ್ದ ನಾಗರಹಾವಿಗೆ ಮುಂಗುಸಿಯೊಂದು ಕಚ್ಚುತ್ತಿದೆ. ಆ ಮುಂಗುಸಿ ಹಾವಿನ ಹೆಡೆಗೆ ಎರಡ್ಮೂರು ಬಾರಿ ಕಚ್ಚುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಿರೋ ಹಂದಿಗಳು ಹಾಗೂ ಕಾಗೆಗಳು ಹಾವನ್ನು ರಕ್ಷಿಸಲು ಪ್ರಯತ್ನಿಸಿವೆ.
S








