ನವದೆಹಲಿ : ಚಿಕ್ಕವರಿಂದ ಹಿಡಿದು ಯುವಕರಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡಿ ವಿಶ್ವಾದ್ಯಂತ ಅತ್ಯಂತ ಜನಪ್ರಯಿಯತೆ ಗಳಿಸಿದ್ದ ಆನ್ ಲೈನ್ ಗೇಮ್ ಪಬ್ ಜಿ ಗೆ ಭಾರತದಲ್ಲಿ ಎಳ್ಳುನೀರು ಬಿಡಲಾಗಿದೆ. ಭಾರತದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ವ್ಯಾಪಕವಾಗಿ ಜನಪ್ರಿಯವಾದ ಆಟ PUBG ಸೇರಿದಂತೆ 100 ಕ್ಕೂ ಹೆಚ್ಚು ಚೈನಾ ಮೂಲದ ಮೊಬೈಲ್ ಅಪ್ಲಿಕೇಶನ್ಗಳಿಗೆ ತಿಲಾಂಜಲಿ ಇಟ್ಟಿದೆ.
ಒಟ್ಟು 118 ಆಯಪ್ ಗಳನ್ನು ಭಾರತದಲ್ಲಿ ನಿಷೇಧಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಈ ಹಿಂದೆಯೂ ಚೀನಾದ ವಿರುದ್ಧ ಆರ್ಥಿಕ ಸಮರ ಸಾರಿದ್ದ ಭಾರತ ಸರ್ಕಾರ ಬರೋಬ್ಬರಿ 89 ಆಪ್ ಗಳನ್ನು ಬಾನ್ ಮಾಡಿ ಕೆಂಪು ಡ್ರ್ಯಾಗನ್ ಶಾಕ್ ಕೊಟ್ಟಿದ್ದು. ಇನ್ನೂವರೆಗೂ ಆ ಶಾಕ್ ನಿಂದ ಚೀನಾ ಚೇತರಿಸಿಕೊಂಡಿಲ್ಲ. ಅಷ್ಟರಲ್ಲೇ ಭಾರತದ ನಿರ್ಧಾರದಿಂದ ಚೀನಾಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.








