ಬೆಂಗಳೂರು : ಕೊರೊನಾ ಬಗ್ಗೆ ಅರಿವು ಮೂಡಿಸಲು ಕೇಂದ್ರ ಸರ್ಕಾರ ಎಲ್ಲಾ ದೂರವಾಣಿ ಕರೆಗಳ ಆರಂಭದಲ್ಲಿ ಮುನ್ನೆಚ್ಚರಿಕಾ ಸಂದೇಶ ನೀಡುತ್ತಿದೆ. ಈ ಕುರಿತು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದು, ದೇಶದ ಆರ್ಥಿಕ ವ್ಯವಸ್ಥೆ ಮತ್ತಷ್ಟು ಹದಗೆಟ್ಟಿದೆ. ಸಮಸ್ಯೆ ಇರುವೆಡೆ ಕ್ರಮ ಕೈಗೊಳ್ಳಬೇಕೇ ಹೊರತು ಈ ರೀತಿ ಸಾಮೂಹಿಕವಾಗಿ ಜನರನ್ನು ಹೆದರಿಸುವುದು ಸಲ್ಲದು ಎಂದು ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಡಿ.ಕೆ.ಶಿವಕುಮಾರ್, “ಎಮ್ಮೆಗೆ ಜ್ವರ ಬಂದರೆ ಎತ್ತಿಗೆ ಬರೆ” ಹಾಕಿದಂತಾಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಲ್ಲ ದೂರವಾಣಿ ಕರೆಗಳ ಆರಂಭದಲ್ಲಿ ನೀಡುತ್ತಿರುವ ಕೊರೊನಾ ಕುರಿತ ಮುನ್ನೆಚ್ಚರಿಕೆ ಸಂದೇಶ”.
“ದೇಶದ ಜನ ಕೊರೊನಾ ವೈರಸ್ ನಿಂದ ತಲ್ಲಣಿಸಿ ಹೋಗಿದ್ದಾರೆ. ಹಣ್ಣು, ತರಕಾರಿಯಿಂದ ಹಿಡಿದು ಷೇರುಗಳವರೆಗೆ ಸರ್ವಮಾರುಕಟ್ಟೆಯೂ ಪಾತಾಳಕ್ಕೆ ಕುಸಿದಿದೆ” ಎಂದು ಕೇಂದ್ರದ ವಿರುದ್ಧ ಟ್ರಬಲ್ ಶೂಟರ್ ಗುಡುಗಿದ್ದಾರೆ.









