ಪಬ್ ಜಿ ಆಡಬೇಡವೆಂದು ತಂದೆ ಗದರಿಸಿದ್ದಕ್ಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ 17 ವರ್ಷದ ಯುವಕ
ಗುಜರಾತ್, ಸೆಪ್ಟೆಂಬರ್03: ಗುಜರಾತ್‌ನ ಆನಂದ್ ಜಿಲ್ಲೆಯಲ್ಲಿ ಪಬ್ ಜಿ ಚಟಕ್ಕೆ ಸಂಬಂಧಿಸಿದಂತೆ 17 ವರ್ಷದ ಯುವಕ ತನ್ನ ತಂದೆ ಖಂಡಿಸಿದರೆಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
11 ನೇ ತರಗತಿ ವಿದ್ಯಾರ್ಥಿ ಮಂಗಳವಾರ ಮಧ್ಯಾಹ್ನ ಉಮ್ರೆತ್ ತಾಲ್ಲೂಕಿನ ಸುರೇಲಿ ಗ್ರಾಮದಲ್ಲಿರುವ ತನ್ನ ಜಮೀನಿನಲ್ಲಿ ಕೀಟನಾಶಕವನ್ನು ಸೇವಿಸಿದ್ದಾನೆ ಎಂದು ಉಮ್ರೆತ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಪಿ ಕೆ ಸೋಧಾ ತಿಳಿಸಿದ್ದಾರೆ.
ಶಿಕ್ಷಕನಾಗಿರುವ ಹುಡುಗನ ತಂದೆ ತನ್ನ ಮೊಬೈಲ್ ಫೋನ್‌ನಲ್ಲಿ ಪಬ್ ಜಿ ಆಡಿದಕ್ಕೆ ಗಂಟೆಗಟ್ಟಲೆ ಗದರಿಸಿದ್ದರು ಮತ್ತು ಮೊಬೈಲ್ ಅನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ತಂದೆ ಗದರಿದಕ್ಕೆ ಅಸಮಾಧಾನಗೊಂಡ ಆತ ತಮ್ಮ ಜಮೀನಿಗೆ ಹೋಗಿ ಕೀಟನಾಶಕವನ್ನು ಸೇವಿಸಿದ್ದಾನೆ ಎಂದು ಅವರು ಹೇಳಿದರು.
ಜಮೀನಿನಿಂದ ಹಿಂತಿರುಗಿದ ಬಳಿಕ ಆತ ವಾಂತಿ ಮಾಡಲು ಪ್ರಾರಂಭಿಸಿದ್ದು, ಬಾಲಕನ ಪೋಷಕರು ಆತ ಆತ್ಮಹತ್ಯೆಗೆ ಪ್ರಯತ್ನಿಸಿರುವುದನ್ನು ತಿಳಿದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ, ಅಲ್ಲಿ ಆತ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಆಕಸ್ಮಿಕ ಸಾವಿನ ಪ್ರಕರಣ ದಾಖಲಾಗಿದೆ ಎಂದು ಅವರು ಹೇಳಿದರು.
ಪ್ರಾಸಂಗಿಕವಾಗಿ, ರಾಷ್ಟ್ರದ ಸಾರ್ವಭೌಮತ್ವ, ಸಮಗ್ರತೆ ಮತ್ತು ರಕ್ಷಣೆಗೆ ಪೂರ್ವಾಗ್ರಹ ಪೀಡಿತವೆಂದು ಹೇಳಿರುವ ಪಬ್ ಜಿ ಸೇರಿದಂತೆ 118 ಚೀನಾ ಮೊಬೈಲ್ ಅಪ್ಲಿಕೇಶನ್‌ಗಳನ್ನು ಕೇಂದ್ರವು ಬುಧವಾರ ನಿಷೇಧಿಸಿದೆ.








