ಬೆಂಗಳೂರು: ಬಾಲಿವುಡ್‍ನಂತೆ ಸ್ಯಾಂಡಲ್‍ವುಡ್ ನಟ-ನಟಿಯರಿಗೂ ಡ್ರಗ್ಸ್ ಮಾಫಿಯಾದ ನಂಟಿದೆ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಬರಗಿ, ಬಾಲಿವುಡ್ ನಟ ಸುಶಾಂತ್ ಸಿಂಗ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಮ್ಯಾನೇಜರ್ ಶೃತಿ ಮೋದಿ ಅರೆಸ್ಟ್ ಮಾಡಲಾಗಿದೆ. ವಿಚಾರರಣೆ ವೇಳೆ ಶೃತಿ ಇಮ್ತಿಯಾಜ್ ಖಾತ್ರಿ ಹೆಸರು ಹೇಳಿದ್ದಾರೆ. ಇಮ್ತಿಯಾಜ್ ಖಾತ್ರಿ ಡ್ರಗ್ಸ್ ದಂಧೆಕೋರ ಎಂದು ಆರೋಪಿಸಿದ್ದಾರೆ.
ಇಮ್ತಿಯಾಜ್ ಖಾತ್ರಿ, ಸಲ್ಮಾನ್ ಖಾನ್‍ಗೆ ಇರುವ ನಂಟೇನು, ಖಾತ್ರಿಗೂ-ಸುಶ್ಮಿತಾ ಸೇನ್‍ಗೂ ಇರುವ ಸಂಪರ್ಕ ಏನು ಎಂದು ಪ್ರಶ್ನಿಸಿರುವ ಸಂಬರಗಿ, ಇಮ್ತಿಯಾನ್ ಒಬ್ಬ ಖಾತ್ರಿ ಡ್ರಗ್ಸ್ ದಂಧೆಕೋರ. 2017ರಲ್ಲಿ ಇಮ್ತಿಯಾಜ್ ಖಾತ್ರಿ ಹುಟ್ಟುಹಬ್ಬಕ್ಕೆ ಕನ್ನಡ ಚಿತ್ರರಂಗದ ಯಾವ-ಯಾಟ ನಟಿ-ನಟಿಯರು ಮುಂಬೈಗೆ ಹೋಗಿದ್ದಾರೆ ಎಂದು ವಾಣಿಜ್ಯ ಮಂಡಳಿ ಹೇಳಲಿ ಎಂದು ಸವಾಲು ಹಾಕಿದ್ದಾರೆ.
ಜೆಡಿಎಸ್ ಮುಖಂಡ ಹಾಗೂ ಈಗಿನ ಕಾಂಗ್ರೆಸ್ ಶಾಸಕರು ಬೆಂಗಳೂರಿನಲ್ಲಿ ಆಯೋಜಿಸಿದ್ದ ಪಾರ್ಟಿಗೆ ಇಮ್ತಿಯಾಜ್ ಖಾತ್ರಿ ಬಂದಿದ್ದ. ಬೆಂಗಳೂರಿಗೆ ಇಮ್ತಿಯಾಜ್ ಖಾತ್ರಿ ಬಂದಾಗ ಪಾರ್ಟಿಯಲ್ಲಿ ಸ್ಯಾಂಡಲ್‍ವುಡ್‍ನ ಯಾವ ಯಾವ ನಟ-ನಟಿಯರು ಹೋಗಿದ್ದರು ಎಂಬುದು ನನಗೆ ಗೊತ್ತಿದೆ. ಹಾಗಾದರೆ ಇದುವರೆಗೂ ವಾಣಿಜ್ಯ ಮಂಡಳಿ ಕ್ರಮಕೈಗೊಂಡಿದೆಯೇ ಎಂದು ಪ್ರಶಾಂತ್ ಸಂಬರಗಿ ಪ್ರಶ್ನಿಸಿದ್ದಾರೆ.