ಬಿ.ಮಾಧವಚಾರ್ ಅವರಿಂದ ಆರಂಭಗೊಂಡು ಇಸಾಮಿಯ ಅವರವರೆಗೂ ಸಜ್ಜನ ರಾಜಕಾರಣವೊಂದು ನೆಲಯೂರಿದ್ದ ಭದ್ರಾವತಿ ವಿಧಾನಸಭಾ ಕ್ಷೇತ್ರ, 1994 ರ ಹೊತ್ತಿಗೆ ಅವೆಲ್ಲವನ್ನೂ ಕಳೆದುಕೊಂಡಿತ್ತು. ವಿಐಎಸ್ಎಲ್ ಕಾರ್ಮಿಕ ನಾಯಕರಾಗಿ ತಮ್ಮದೇ ದೊಡ್ಡ ಪ್ರಭಾವ , ಶಕ್ತಿ ಬೆಳೆಸಿಕೊಂಡಿದ್ದ ಎಂ.ಜೆ ಅಪ್ಪಾಜಿ ಗೌಡ ಅವರು 1994 ರ ವಿಧಾನ ಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆಲ್ಲುವುದರ ಮೂಲಕ ರಾಜಕೀಯ ಪರಿಭಾಷೆಯನ್ನೆ ಬದಲಿಸಿಬಿಟ್ಟಿದ್ದರು.
ಭದ್ರಾವತಿಯಂತ ಲೇಬರ್ ಲ್ಯಾಂಡ್ ಗೆ ಆಕ್ರಮಣಕಾರಿ ರಾಜಕಾರಣವೊಂದು ಮೈಗೂಡಿಸಿಕೊಳ್ಳುವುದು ಅಗತ್ಯವಿತ್ತೇನೋ. ಆ ಕಾಲ ಬಂದೇ ಬಿಟ್ಟಿತ್ತು. ಕಾರ್ಮಿಕ ನಾಯಕನೆಂಬ ಪ್ರಭಾವಳಿ, ತನ್ನ ಹಿಂದೆ ಇದ್ದ ಕಾರ್ಮಿಕರ, ಜಾತಿ ಸಮುದಾಯದ ತೋಳ್ಬಲದ ಫಲವೇನೊ ಎಂಬಂತೆ ಅಪ್ಪಾಜಿ 1994 ರಲ್ಲಿ ಜನತಾದಳದ ಬಿ.ಪಿ ಶಿವಕುಮಾರ್ ಎಂಬ ಸಜ್ಜನ ನಾಯಕನೆದುರು 21 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದು ಇಡೀ ರಾಜ್ಯವೇ ತನ್ನತ್ತ ನೋಡುವಂತೆ ಮಾಡಿದರು. ಈ ಗೆಲುವಿನ ರಣೋತ್ಸಾಹ ಎಷ್ಟರ ಮಟ್ಟಿಗೆ ಮಿತಿ ಮೀರಿತ್ತು ಎಂದರೆ ಅವರ ಹಿಂಬಾಲಕ ಪಡೆ ಅಕ್ಷರಶಃ ತಮ್ಮ ರಾಜಕೀಯ ವಿರೋಧಿಗಳ ಮತ್ತು ತಮಗೆ ಮತ ನೀಡದ ಹಳ್ಳಿಗಳಲ್ಲಿ ಉಪಟಳ ವಿಟ್ಟಿತ್ತು.
ಭದ್ರಾವತಿಯಿಂದ ಪ್ರಕಟಗೊಳ್ಳುತ್ತಿದ್ದ ‘ಭುವನವಾರ್ತೆ’ , ಶಿವಮೊಗ್ಗದಿಂದ ಪ್ರಕಟಗೊಳ್ಳುತ್ತಿದ್ದ ‘ಸಹ್ಯಾದ್ರಿ’ ಕನ್ನಡ ದಿನಪತ್ರಿಕೆಗಳಲ್ಲಿ ವರದಿಗಾರನಾಗಿದ್ದ ನಾನು ಅಪ್ಪಾಜಿ ಮತ್ತವರ ಹಿಂಬಾಲಕ ಗ್ಯಾಂಗ್ ನ ಹಾವಳಿಯನ್ನು ನಿರಂತರವಾಗಿ ಬೈಲೈನ್ ವರದಿ ಮಾಡಲಾರಂಭಿಸಿದೆ. ಇದು ಅಪ್ಪಾಜಿ ಮತ್ತವರ ಬೆಂಬಲಿಗರಿಗೆ ಅಪಥ್ಯವಾಯಿತು. ಪತ್ರಿಕೆಗಳ ಸಂಪಾದಕರಿಗೆ ಬೆದರಿಕೆಗಳು ಬಂದಿದ್ದೂ ಆಯಿತು. ನನ್ನ ಹುಡುಕಾಟವೂ ನಡೆದಿತ್ತು.
ಅಂತಿಮವಾಗಿ ಅಪ್ಪಾಜಿ ಪತ್ರಿಕೆಗಳಲ್ಲಿ ಬಂದ ವರದಿಗೆ ಸ್ಪಷ್ಟೀಕರಣ ನೀಡಬೇಕೆಂಬ ಉದ್ದೇಶದಿಂದ(?) ಭದ್ರಾವತಿಯ pwd guest house ನಲ್ಲಿ ಪ್ರೆಸ್ ಮೀಟ್ ಗೆ ಆಹ್ವಾನಿಸಿದರು. ಪತ್ರಿಕಾಗೋಷ್ಟಿ ನಾನೇ ಹೋಗಬೇಕೆಂಬ ಸೂಚನೆಯನ್ನು ನಮ್ಮ ಸಂಪಾದಕರು ನೀಡಿದ್ದರಿಂದ ಭದ್ರಾವತಿಯ ಪತ್ರಕರ್ತ ಗೆಳಯರ ಜೊತೆ ನಾನು ಪಿಡ್ಲಯ ಗೆಸ್ಟ್ ತಲುಪಿದೆ. ಅಪ್ಪಾಜಿ ಅವರ ಒಂದಿಬ್ಬರು ಹಿಂಬಾಲಕರು ಸ್ಥಳದಲ್ಲಿದ್ದರೂ ಪತ್ರಕರ್ತರನ್ನು ಕೆಕ್ಕರಿಸಿ ‘ಅಣ್ಣಾ ಬರ‍್ತಾರೆ ಇರಿ..’ ಎಂದು ಅಪ್ಪಣೆ ಕೊಟ್ಟರು. ಒಬ್ಬೊಬ್ಬರಾಗಿ, ಒಂದೊಂದು ಗುಂಪಾಗಿ ಬರಲಾರಂಭಿಸಿದ ಅಪ್ಪಾಜಿ ಹಿಂಬಾಲಕರು ಬಂದವರೆಲ್ಲಾ ನನ್ನನ್ನು ಮುಗಿಸಿಯೆ ಬಿಡುವಂತೆಯೂ ಮತ್ತು ಇತರೆ ಪತ್ರಕರ್ತರ ಮುಖ ನೋಡಿಕೊಂಡು ಅಡ್ಡಾಡುತ್ತಿದ್ದರು. ಸಮಯ ಮೀರುತ್ತಿದ್ದರೂ ಅಪ್ಪಾಜಿ ಬರುವ ಯಾವ ಲಕ್ಷಣವೂ ಕಾಣುತ್ತಿರಲಿಲ್ಲ. ನಾವುಗಳು ವಾಪಾಸ್ ಹೋಗಲು ಅವರ ಹಿಂಬಾಲಕರು ಬಿಡುತ್ತಿರಲಿಲ್ಲ.
ಅಂತೂ ರಾತ್ರಿ 8.30 ಕ್ಕೆ ಐದಾರು ಕಾರುಗಳೊಂದಿಗೆ ಭರ್ರನೆ ಧೂಳೆಬ್ಬಿಸಿಕೊಂಡು ಬಂದ ಅಪ್ಪಾಜಿ ಪ್ರೆಸ್‌ಮೀಟ್ ಗೆ ಕೂರುತ್ತಲೆ ವಿಶೇಷವಾಗಿ “ಯಾರೋ ರವಿಕುಮಾರ್ ಅದು ?” ಎಂದು ಕತ್ತಲಲ್ಲೂ ಕೆಂಪಾಗಿದ್ದ ಕಣ್ಣುಗಳನ್ನು ಟೇಬಲ್ ನ ಸುತ್ತಾ ಹೊರಳಾಡಿಸಿದರು. ಏಗ್ ಸೇಪ್ ಟೇಬಲ್ ನ ಇನ್ನೊಂದು ತುದಿಗೆ ಶಾಸಕ ಅಪ್ಪಾಜಿ ಅವರಿಗೆ ಪ್ರತಿನಾಯಕನೇನೋ ಎಂಬಂತೆ ಹಮ್ಮಿನಿಂದಲೇ ಕುಳಿತಿದ್ದ ನನ್ನನ್ನು ಪತ್ರಕರ್ತ ಗೆಳೆಯ ದಯಾನಂದ್ ಪರಿಚಯ ಮಾಡಿಕೊಟ್ಟರು. ಅಪ್ಪಾಜಿ ಪತ್ರಕರ್ತರಿಗೆ ಪಾಠ ಮಾಡಲು ಶುರು ಮಾಡಿಬಿಟ್ಟರು, ಏಕವಚನ, ಬಹುವಚನ, ಬೆದರಿಕೆ ಎಲ್ಲವೂ ಸುರಿಮಳೆಯಾದವು. ನನಗೂ ಅವರಿಗೂ ಮಾತಿನ ಚಕಮಕಿಯೇ ನಡೆಯಲಾರಂಭಿಸಿತು. ‘ಇಂಡಿಫೆಂಡೆಂಟ್ ಆಗಿ ಅರ್ಧಕ್ಕರ್ಧ ಲೀಡ್ ನಲ್ಲಿ ಗೆದ್ದಿದಿನಿ, ನನ್ನ ವಿರುದ್ದ ನೇ ಬರಿತೀಯಾ ಹುಷಾರ್!’ ಎಂದರು. ನಾನು ನಾನೋ ದೈಹಿಕವಾಗಿ ಹಿಡಿಯಷ್ಟಿದ್ದೆ. ಆದರೆ ಪತ್ರಕರ್ತ ಎಂಬ ಜೋಷ್ ಕಡಿಮೆ ಏನಿರಲಿಲ್ಲ.
ಅಪ್ಪಾಜಿ ನಾಲಿಗೆ ನಾಲಿಗೆ ಕೊಟ್ಟು ಜಿದ್ದಿಗೆ ಬಿದ್ದವನಂತೆ ವಾದಕ್ಕಿಳಿದು ಬಿಟ್ಟಿದ್ದೆ. ಪತ್ರಿಕಾಗೋಷ್ಟಿ ಜಗಳಗೋಷ್ಟಿಯಾಗಿ ಪರಿವರ್ತನೆ ಗೊಂಡಿತು. ಅಪ್ಪಾಜಿ ಮಾತುಗಳಿಗೆಲ್ಲಾ ಉಧೋ ಉಧೋ ಅನ್ನುತ್ತಿದ್ದ ನಮ್ಮ ಸುತ್ತಾ ಠಳಾಯಿಸಿದ್ದ ಅವರ ಹಿಂಬಾಲಕ ಪಡೆ ಒಮ್ಮೊಮ್ಮೆ ತೋಳೇರಿಸಿಕೊಂಡು ನನ್ನ ಮೇಲೆ ಬರಲು ನುಗ್ಗಾಡುತ್ತಿದ್ದರು. ಅಪ್ಪಾಜಿ ಅವರ ಆಪ್ತರೇ ಅಗಿದ್ದ ಕರುಣಾಮೂರ್ತಿ, ಕರಿಯಪ್ಪ ಎಂಬ ಸಣ್ಣ ನಾಯಕರುಗಳು ಸಮಾಧಾನದ ಪಾತ್ರ ವಹಿಸಿ ಹಿಂಬಾಲಕರಿಂದ ನನ್ನ ರಕ್ಷಣೆ ಮಾಡುತ್ತಿದ್ದರು. ! ರಾತ್ರಿ ಹನ್ನೊಂದು ಆದರೂ ಅಪ್ಪಾಜಿಗೂ ನನಗೂ ಜಗಳ ಕೊನೆಗೊಳ್ಳಲಿಲ್ಲ. ಜನರ ಮೇಲಿನ ದಬ್ಬಾಳಿಕೆ ಗೆ ನೀವು ಶಾಸಕರಾಗಿರುವುದಲ್ಲ, ಸೇಡು ಬಿಟ್ಟು ಜನರ ಕೆಲಸ ಮಾಡಿ ಎಂಬುದು ನನ್ನ ವಾದವಾಗಿತ್ತು. ಅವರ ವಾದ ಅವರದ್ದಾಯಿತು. ನನ್ನ ವಾದ ನನ್ನದಾಯಿತು, ಕೊನೆಗೆ ಹೇಗೋ ಸಭೆ ಯಿಂದ ಹೊರಬರುವುದು ತೀರ‍್ಮಾನಿಸಿ ಹೊರಟಾಗ “ಬಾಡೂಟ ಮಾಡ್ಕೋಂಗಿ ಬರೋದ್ ಬಂದಿದಿರಾ” ಎಂಬ ಆದೇಶವೂ ಅಪ್ಪಾಜಿ ಹಿಂಬಾಲಕರಿಂದ ಬೆದರಿಕೆ ರೂಪದಲ್ಲೇ ಹೊರಬಿದ್ದಿತು. ಹಂಗಿನ ಊಟ ಅರಗುವುದು ಕಷ್ಟ ಎಂದು ಬಿಟ್ಟು ಹೊರಟೆ ಬಿಟ್ಟೆವು. ಅಪ್ಪಾಜಿ ಪಡೆ ನನ್ನನ್ನು ತಿಂದು ಮುಗಿಸಿಬಿಡುವಂತೆ ನೋಡುತ್ತಿತ್ತು. ಪತ್ರಕರ್ತ ಗೆಳೆಯರಾದ ದಯಾನಂದ್, ಗಂಗಾನಾಯ್ಕ್ , ಶಿವಶಂಕರ್ ನನ್ನನ್ನು ಬಸ್ ನಿಲ್ದಾಣದವರೆಗೂ ಎಸ್ಕಾರ್ಟ್(?) ಮಾಡಿ ಬಸ್ಸಿಗೆ ಹತ್ತಿಸಿ ಸುರಕ್ಷಿತವಾಗಿ ಶಿವಮೊಗ್ಗ ಕ್ಕೆ ಬೀಳ್ಕೊಟ್ಟರು.
ಅಪ್ಪಾಜಿ ಮತ್ತವರ ಬೆಂಬಲಿಗರ ಬೆದರಿಕೆಗಳ ನಡುವೆಯೂ ನಾನು ಪತ್ರಕರ್ತನಾಗಿ ಅವರ ಜನವಿರೋಧಿ ಕೃತ್ಯಗಳನ್ನು ಖಂಡಿಸುತ್ತಲೇ , ಜನಪರ ಕೆಲಸಗಳನ್ನು ಜನರ ಮುಂದಿಡುವುದು ನಡೆದೆ ಇತ್ತು. ಕಾಲ ಉರುಳಿದಂತೆ ಪತ್ರಕರ್ತರ ಸಂಘದ ಮತ್ತು ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ನಾನು ಮತ್ತು ಅಪ್ಪಾಜಿ ಅನೇಕ ಸಭೆ,ಸಮಾರಂಭಗಳಲ್ಲಿ ಒಂದೇ ವೇದಿಕೆಯಲ್ಲಿ ಭೇಟಿಯಾಗುವುದು ನಡೆದೇ ಇತ್ತು , ನಾನು ಅವರ ನೆನಪಿನಲ್ಲಿ ಅಚ್ಚಾಗಿ ಹೋಗಿದ್ದೆ. ಅಪ್ಪಾಜಿ ಕ್ರಮೇಣ ಮಾಗುತ್ತಾ ಬಂದರು. ಎದುರಿಗೆ ಸಿಕ್ಕಾಗಲೆಲ್ಲಾ “ನೀವು ಬಾರೀ ಘಾಟಿ ಇದಿರಪ್ಪ, ನಿಮ್ಮಂತಹ ಯಂಗ್ ಸ್ಟರ್ಸ್ ಪ್ರೆಸ್ ಪೀಲ್ಡ್ ನಲ್ಲಿರಬೇಕು ರವಿಕುಮಾರ್” ಎಂದು ಪ್ರೀತಿಯಿಂದ ಕೈ ಕುಲುಕುತ್ತಿದ್ದರು. ಭದ್ರಾವತಿಯ ಪತ್ರಿಕಾ ಭವನಕ್ಕೆ ಉದಾರವಾಗಿ ಅನುದಾನ ನೀಡಿದರು. ಅವರೊಳಗಿದ್ದ ಪ್ಯೂಢಲ್ ಪಾತ್ರವೊಂದು ಕರಗಿ ಹೋಗಿತ್ತು. ಎಂತಹ ಬಡವನೂ ಮನೆ ಬಾಗಿಲಿಗೆ ಬಂದು ಕಣ್ಣೀರಿಟ್ಟರೆ ಜೇಬಿಗೆ ಕೈ ಹಾಕಿ ಸಿಕ್ಕಿದಷ್ಟು ಕೊಟ್ಟು ಕಳುಹಿಸುವ ಕಾರುಣ್ಯವೊಂದು ಅಪ್ಪಾಜಿಯೊಳಗೆ ಸದಾ ಕಡಿದಾಡುತ್ತಿತ್ತು. ಈ ಅಪ್ಪಾಜಿಗೊಂದು ಸಿದ್ದಾಂತವಿತ್ತು ಅದು ಬಡವರ .ನೊಂದವರ ಪರವಾದದ್ದು ಮಾತ್ರವೇ ಆಗಿತ್ತು.
ತನಗೆ ಈ ಹಿಂದೆ ಹೃದಯ ಚಿಕಿತ್ಸೆ ಆಗಿರುವ ಮತ್ತು ವಯಸ್ಸಿನ ಸಾಮರ್ಥ್ಯದ ಸೂಕ್ಷ್ಮತೆಯನ್ನು ಲೆಕ್ಕಿಸದ ಅಪ್ಪಾಜಿ ಕೆಲವು ದಿನಗಳ ಹಿಂದೆಯಷ್ಟೆ ಕೋವಿಡ್ ಸೋಂಕಿತ ತನ್ನ ಕ್ಷೇತ್ರದ ಬಡವ ನೊಬ್ಬನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ನಿರಾಕರಿಸಿದರೆಂದು ಸಿಟ್ಟಿಗೆದ್ದು ಆಸ್ಪತ್ರೆಯ ಮುಂದೆ ಚಕ್ಕಲಮಕ್ಕಲ ಹಾಕಿಕೊಂಡು ಧರಣಿ ಕುಳಿತು ಗುಡುಗಿದ್ದ ಅಪ್ಪಾಜಿ ತಮ್ಮನ್ನು ತಾವೇ ಸಾವಿಗೆ ಒಡ್ಡಿಕೊಂಡು ಬಿಟ್ಟರು. ಅಪ್ಪಾಜಿ ಇಂದು ಇಲ್ಲ ಎಂದು ಗೊತ್ತಾದಾಗ ನಾನು ಘಾಸಿಗೊಂಡೆ. 1994 ರ ಅಪ್ಪಾಜಿ ಮತ್ತು 2020ರ ಅಪ್ಪಾಜಿ ಎಂಬ ಎರಡು ಪಾತ್ರಗಳನ್ನು ಕಳೆದುಕೊಂಡ ಸಂಕಟ ಮಾತ್ರ ಉಳಿದಿದೆ.
ಲೇಖನ:-
ಎನ್.ರವಿಕುಮಾರ್ ಟೆಲೆಕ್ಸ್
ಖ್ಯಾತ ಪತ್ರಕರ್ತರು
ಶಿವಮೊಗ್ಗ
ಓಂ ಶ್ರೀ, ದುರ್ಗಾ ಪರಮೇಶ್ವರಿ ದೇವಾಲಯದ, ಅಷ್ಟ ದಿಗ್ಬಂಧನ ಸಹಸ್ರ ದಿವ್ಯ ಮಂಡಲದ ಪ್ರಖ್ಯಾತ, ಗುರು ವಿನ ಗುರು ದೈವ, ಆಚಾರ್ಯರಾದ, ಡಾ! ಪ್ರಹ್ಲಾದ್ ಪಾಟೀಲ್, from gold medalist (ಗೋಲ್ಡ್ ಮೆಡಲಿಸ್ಟ್,) 38 ವರ್ಷ ಅನುಭವ ವುಳ್ಳ ಪ್ರಖ್ಯಾತ, ದೈವ, ದೀನರು ಅಶ್ವದಳ, ಶಕ್ತಿಪೀಠ, ಸಾಮರ್ಥ್ಯದ, ಸುಳಿವಿನ, ಅಂತರ, ಭಾವನೆಗಳ ತಂತ್ರ ವಿದ್ಯೆ ಯಿಂದ ಈ ಕ್ಷೇತ್ರದಲ್ಲಿ, ಪರಿಹಾರ, ಶತಸಿದ್ಧ (ಹಂಡ್ರೆಡ್ ಪರ್ಸೆಂಟ್) 100%, ನಂಬರ್ ವನ್ ವಶೀಕರಣ, ಸ್ಪೆಷಲಿಸ್ಟ್, ಸ್ತ್ರೀ-ಪುರುಷ ವಶೀಕರಣ, ಮಾಟ ಮಂತ್ರ, ಮೋಡಿ ವಿದ್ಯೆ, ಪ್ರೀತಿಯಲ್ಲಿ ನಂಬಿ ಮೋಸ, ಗಂಡ-ಹೆಂಡತಿಯರ ಗುಪ್ತ ಸಮಸ್ಯೆ, ಇನ್ನೊಬ್ಬರ ಹತ್ತಿರ, ಹೇಳಿಕೊಳ್ಳಲಾಗದೆ, ಮನನೊಂದು, ಕಷ್ಟ ಸಂಕಷ್ಟಗಳಿಗೆ, ಗುರಿಯಾಗಿ, ಜೀವನವೇ ಬೇಡವೆನಿಸಿದಾಗ, ಈ ಕ್ಷೇತ್ರದಿಂದ, ನೊಂದ, ಸ್ತ್ರೀಯರಿಗೆ, ಸಂಕಷ್ಟಗಳ, ದಾರಿದೀಪ,, ಈ ಕ್ಷೇತ್ರದಿಂದ, ಪರಿಹಾರ ಕಟ್ಟಿಟ್ಟ ಬುತ್ತಿ,,, ಮೊಬೈಲ್ ಸಂಖ್ಯೆ 9606712450