ತಿರುವನಂತಪುರಂ : ಬಸ್ ಹತ್ತಲು ಹೋಗಿ ರಸ್ತೆಯಲ್ಲಿ ಬಿದ್ದು ಆರು ತಿಂಗಳ ಗರ್ಭಿಣಿ ಮೃತಪಟ್ಟಿರುವ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ. 27 ವರ್ಷದ ದಿವ್ಯಾ ಮೃತ ದುರ್ದೈವಿಯಾಗಿದ್ದು, ಇವರು ಕಣ್ಣೂರಿನ ಆಸ್ಟರ್ ಮಿಮ್ಸ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು.
ದಿವ್ಯಾ ತಮ್ಮ ಮನೆಯ ಸಮೀಪವಿರುವ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಕೆಲಸಕ್ಕೆ ತೆರಳಲು ದಿವ್ಯಾ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸುವಂತೆ ಕೈ ತೋರಿಸಿದ್ದಾರೆ. ಆಗ ಬಸ್ ಕೆಲ ಮೀಟರ್ ಮುಂದೆ ಹೋಗಿ ನಿಲ್ಲಿಸಿದೆ. ಆಗ ಬಸ್ಸಿನ ಕಡೆ ಓಡಿದ್ದಾರೆ. ಆಗ ರಸ್ತೆ ಮೇಲೆ ಬಿದ್ದಿದ್ದಾರೆ. ಇದನ್ನು ಕಂಡ ದಿವ್ಯಾಳ ಪತಿ ವಿನು ತಕ್ಷಣ ಸ್ಥಳೀಯರ ಸಹಾಯದಿಂದ ದಿವ್ಯಾರನ್ನು ಆಸ್ಪತ್ರೆಗೆ ಕರೆದುಕೊಂಡಿದ್ದಾರೆ. ಆದ್ರೆ ಅಷ್ಟರಲ್ಲಿಯೇ ದಿವ್ಯಾ ಮೃತಪಟ್ಟಿದ್ದಾರೆ.








