ಲೋಕದ ಡೊಂಕ ತಿದ್ದುವ ಪತ್ರಕರ್ತರ ಅವಸ್ಥೆಗೆ ಸಾಕ್ಷಿ ಈ ನಿದರ್ಶನ: ಈ ಪತ್ರಕರ್ತನಿಗೆ ನೆರವಾಗಿ ಪ್ಲೀಸ್!
ಬೆಂಗಳೂರು, ಸೆಪ್ಟೆಂಬರ್04: ಕೊರೋನಾ ವೈರಸ್ ಬಿಕ್ಕಟ್ಟು ದೇಶದ ಅರ್ಥಿಕತೆಗೆ ಮಾತ್ರ ಮರ್ಮಾಘಾತ ನೀಡಿಲ್ಲ. ಅದೆಷ್ಟೋ ಜನರ ಬದುಕಿನ ಕನಸನ್ನು ಕಸಿದುಕೊಂಡಿದೆ. ಬಡ ಕುಟುಂಬಗಳನ್ನು ಒಪ್ಪತ್ತಿನ ಕೂಳಿಗೂ ಗತಿಯಿಲ್ಲದೆ ಬೀದಿಗೆ ಬರುವಂತೆ ಮಾಡಿದೆ. ಇಡೀ ಸಂಸಾರದ ಹೊಣೆಯನ್ನು ಹೊತ್ತಿದ್ದ ಕೈ ಕೆಲಸವನ್ನು ಕಳೆದುಕೊಂಡು ಮುಂದೇನು ಎಂದು ಕಂಗಾಲಾಗುವಂತೆ ಮಾಡಿದೆ.
ಇವರು ಅಣ್ಣಪ್ಪ. ದಾವಣಗೆರೆ ಬಳಿಯ ಹೊಸಕುಂದವಾಡದ ನಿವಾಸಿ. ವೃತ್ತಿಯಲ್ಲಿ ಪತ್ರಿಕಾ ವರದಿಗಾರರು. ಸಂಜೆ ವಾಣಿ ಪತ್ರಿಕೆ ವರದಿಗಾರರಾಗಿದ್ದ ಇವರು ಕೊರೋನಾ ಬಿಕ್ಕಟ್ಟಿನಿಂದಾಗಿ ಕೆಲಸ ಕಳೆದುಕೊಂಡವರು. ಇದೀಗ ಅವರ ಬದುಕು ಅಕ್ಷರಶಃ ಕಣ್ಣೀರಿನಲ್ಲಿ ಮುಳುಗಿದೆ. ತನ್ನ 9 ತಿಂಗಳ ಕರುಳ ಕುಡಿ ತನ್ನ ಕಣ್ಣೆದುರೇ ಸಾವು ಬದುಕಿನ ಹೋರಾಟ ನಡೆಸುತ್ತಿದ್ದರೆ, ಅಸಹಾಯಕ ಪರಿಸ್ಥಿತಿಯಲ್ಲೂ ಮಗುವನ್ನು ಉಳಿಸಿಕೊಳ್ಳಲು ಅವರು ದೊಡ್ಡ ಹೋರಾಟವನ್ನೇ ನಡೆಸುತ್ತಿದ್ದಾರೆ.
ಈ ಮಗುವಿನ ಬದುಕು ಮುರುಟಿ ಹೋಗದಿರಲು ನಮ್ಮೆಲ್ಲರ ನೆರವಿನ ಅಗತ್ಯವಿದೆ. ಸಹಾಯದ ಅಪೇಕ್ಷೆಯೊಂದಿಗೆ pic.twitter.com/x7jGm4p9UN
— Saakshatv-videos (@Saakshatv_video) September 4, 2020
ಅವರ 9 ತಿಂಗಳ ಕಂದಮ್ಮ ಮನಸ್ವಿ ರೋಗ ನಿರೋಧಕ ಶಕ್ತಿ (COMBINED IMMUNODEFICIENCY) ಇಲ್ಲದೇ ಬದುಕಿಗಾಗಿ ಹೋರಾಟ ನಡೆಸುತ್ತಿದ್ದಾಳೆ. ತನ್ನ ಮಗುವನ್ನು ಹೇಗಾದರೂ ಬದುಕಿಸಿಕೊಳ್ಳಬೇಕು ಎಂದು ಪಣತೊಟ್ಟಿರುವ ಅಣ್ಣಪ್ಪ
ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಒಂದು ತಿಂಗಳಿನಿಂದ ನಿತ್ಯವೂ ಹತ್ತು ಸಾವಿರ ರೂಪಾಯಿಯನ್ನು ಕೇವಲ ಔಷಧಿಗಾಗಿ ನೀಡುತ್ತಿದ್ದಾರೆ. ವೈದ್ಯರು ಮಗುವಿಗೆ BONE MORROW TRONSPLANT ಮಾಡಬೇಕೆಂದು ತಿಳಿಸಿದ್ದು, ಅದರ ವೆಚ್ಚ ಸುಮಾರು 20 ರಿಂದ 25 ಲಕ್ಷ ರೂಪಾಯಿಯಾಗಬಹುದು ಎಂದಿದ್ದಾರೆ. ಆದರೆ ಅಷ್ಟೊಂದು ದೊಡ್ಡ ಮೊತ್ತವನ್ನು ಹೊಂದಿಸುವುದು ಕೆಲಸವನ್ನೂ ಕಳೆದುಕೊಂಡಿರುವ ಅಣ್ಣಪ್ಪ ಅವರಿಗೆ ಅಸಾಧ್ಯವೇ ಸರಿ. ಆ ಮಗುವಿನ ಬದುಕು ಮುರುಟಿ ಹೋಗದಿರಲು ನಮ್ಮೆಲ್ಲರ ನೆರವಿನ ಅಗತ್ಯವಿದೆ. ಸಹಾಯದ ಅಪೇಕ್ಷೆಯೊಂದಿಗೆ ಅಣ್ಣಪ್ಪ ಸಹೃದಯ ಸಮಾಜದ ಮುಂದೆ ನಿಂತಿದ್ದಾರೆ.
ಸಹಾಯ ಮಾಡಲು ಇಚ್ಛಿಸುವ ದಾನಿಗಳು
ಅಣ್ಣಪ್ಪ ಹೊಸಕುಂದವಾಡ ನಂಬರ್ 8660625034 ಯನ್ನು ಸಂಪರ್ಕಿಸಬಹುದು.
ಅಥವಾ
ಈ ಕೆಳಗಿನ ಖಾತೆಗೆ ಸಹಾಯ ಧನವನ್ನು ಜಮೆ ಮಾಡಬಹುದು.
A/c : 2223330011389981
Account name : Annappa
Ifsc code : RATNOVAAPIS








