ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಮಾಫಿಯಾ ನಂಟಿರುವ ವಿಚಾರಕ್ಕೆ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಹಾಗೂ ಸಂಜನಾ ಹಾವು ಮುಂಗಸಿಯಂತೆ ಕಿತ್ತಾಡುತ್ತಿರುವ ವಿಚಾರ ಹೊಸತೇನಲ್ಲ. ಆದ್ರೆ ವಾಗ್ದಾಳಿ ನಡೆಸುತ್ತಲೇ ಇರುವ ಸಂಬರಗಿಯನ್ನ ಕಾಂಟ್ರವರ್ಸಿ ಕ್ವೀನ್ ಸಂಜನಾ ನಾಯಿ, ಹಂದಿಗೆ ಹೋಲಿಸಿದ ಬೆನ್ನಲ್ಲೇ ಪ್ರಶಾಂತ್ ಹೊಸದೊಂದು ಬಾಂಬ್ ಸಿಡಿಸಿದ್ದಾರೆ. ನನ್ನ ಬಗ್ಗೆ ಟೀಕಿಸುವ ನಟಿ ಸಂಜನಾ ಗಲ್ರಾನಿ ಅವರು ಈ ಬಗ್ಗೆ ಹೇಳಬೇಕು ಎಂದಿರುವ ಸಂಬರಗಿ ಜೂನ್ 8, 2019ರಂದು ಶಾಸಕ ಜಮೀರ್ ಅಹ್ಮದ್ ಖಾನ್ ಹಾಗೂ ನಟಿ ಸಂಜನಾ ಕೊಲಂಬೋದ ಕ್ಯಾಸಿನೋ ಒಂದರಲ್ಲಿ ಕಾಣಿಸಿಕೊಂಡಿದ್ದರು. ಈ ಬಗ್ಗೆ ಏನ್ ಹೇಳ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಅವರು, ಶಾಸಕ ಜಮೀರ್ ಅಹ್ಮದ್ ಖಾನ್ ಹಾಗೂ ನಟಿ ಸಂಜನಾ ನಡುವಿನ ನಂಟೇನು.? ನನ್ನ ಪ್ರಶ್ನೆಗೆ ಸಂಜನಾ ಗಲ್ರಾನಿ ಉತ್ತರಿಸಲಿ. 2019ರಲ್ಲಿ ಶ್ರೀಲಂಕಾಗೆ ಜಮೀರ್, ಸಂಜನಾ ಭೇಟಿ ಮಾಡಿದ್ದರು. 2019ರ ಜೂನ್ 8ರಂದು ಇಬ್ಬರೂ ಕೊಲಂಬೋಗೆ ಭೇಟಿ ಮಾಡಿದ್ದರು. ಕೊಲಂಬೋದ ಕ್ಯಾಸಿನೋದಲ್ಲಿ ಇಬ್ಬರು ಭಾಗಿಯಾಗಿದ್ದರು. ಶಾಸಕರು ಅಪಾರ ಹಣ ಕಳೆದುಕೊಂಡಿದ್ದಾರೆ. ನನ್ನ ಹಿತೈಷಿಗಳೇ ಅವರಿಬ್ಬರನ್ನು ನೋಡಿದ್ದಾರೆ ಎಂಬುದಾಗಿ ಹೊಸ ಬಾಂಬ್ ಸಿಡಿಸಿದ್ದಾರೆ. ಸಂಬರಗಿ ಹೇಳಿಕೆ ಇದೀಗ ಭಾರೀ ಕುತೂಹಲ ಮೂಡಿಸಿದ್ದು, ಪ್ರಕರಣ ರಾಜಕೀಯ ತಿರುವು ಪಡೆದುಕೊಳ್ಳಲಿದ್ಯಾ ಎಂಬ ಚರ್ಚೆಗಳು ಆರಂಭವಾಗಿದೆ.








