ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಸರ್ಕಾರಿ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ವಿಚಾರದಲ್ಲಿ ಗೊಂದಲ ಉಂಟಾಗಿತ್ತು. ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಕರ ಲಭ್ಯತೆಯನ್ನು ತೋರಿಸಲು, ಮಂಗಳವಾರ ಸದನದಲ್ಲಿ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ ಅವರು ಶಿಕ್ಷಕರ ವರ್ಗಾವಣೆ ನಿಯಂತ್ರಣ 2020 ವಿಧೇಯಕ ಮಂಡಿಸಿದ್ದರು. ವರ್ಗಾವಣೆಗೆ ಸಾಕಷ್ಟು ಜನ ಶಿಕ್ಷಕರು ಅರ್ಜಿ ಸಲ್ಲಿಸಿದ್ದರು. ಸಚಿವ ಸುರೇಶ್ ಕುಮಾರ ಮಂಡಿಸಿದ ವಿಧೇಯಕ ವರ್ಗಾವಣೆ ಆಗಬೇಕಾದರೆ ಬೇಕಾಗಿರುವ ಅರ್ಹತೆಗಳನ್ನು ತಿಳಿಸುತ್ತದೆ.
ಶಿಕ್ಷಕರ ವರ್ಗಾವಣೆ ನಿಯಂತ್ರಣ 2020 ವಿಧೇಯಕದಲ್ಲಿ ಏನಿದೆ
ಒಂದೇ ಶಾಲೆಯಲ್ಲಿ ಕನಿಷ್ಠ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ ಶಿಕ್ಷಕರು ಮಾತ್ರ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಲು ಅರ್ಹರು. ರೊಟೇಷನ್ ಪದ್ಥತಿ ಅನುಸರಿಸಲು ವಲಯವಾರು ವರ್ಗಾವಣೆಗಳನ್ನು ಜಾರಿ ಮಾಡಲಾಗಿದೆ. 50 ವರ್ಷ ದಾಟಿದ ಶಿಕ್ಷಕಿಯರು ಮತ್ತು 55 ವರ್ಷ ದಾಟಿದ ಶಿಕ್ಷಕರಿಗೆ ವಲಯವಾರು ವರ್ಗಾವಣೆಗಳಿಂದ ವಿನಾಯಿತಿ ನೀಡಲಾಗಿದೆ. ವರ್ಗಾವಣೆ ಸಂಬ0ಧಿಸಿದ ಮ್ಯನ್ಯುಯಲ್ ಕೌನ್ಸೆಲಿಂಗ್ ನಿಷೇಧಿಸಲಾಗಿದೆ. ಗಣಕೀಕೃತ ಕೌನ್ಸಲಿಂಗ್ ಮೂಲಕ ಮಾತ್ರ ವರ್ಗಾವಣೆ ಪ್ರಕ್ರಿಯೆ ನಡೆಸಬೇಕು ಎಂದು ವಿಧೇಯಕದಲ್ಲಿ ಹೇಳಲಾಗಿದೆ.
ಸಾರ್ವತ್ರಿಕ ಕೌನ್ಸೆಲಿಂಗ್ ಮುಗಿದ ಬಳಿಕವೂ ರಾಜ್ಯ ಸರ್ಕಾರದ ನಿರ್ದೇಶನದ ಮೇರಗೆ ವಿಶೇಷ ಸನ್ನಿವೇಶಗಳಲ್ಲಿ ವರ್ಗಾವಣೆ ಮಾಡಲು ಮಸೂದೆಯಲ್ಲಿ ಅವಕಾಶ ನೀಡಲಾಗಿದೆ. ಅಲ್ಲದೆ ಕೌನ್ಸೆಲಿಂಗ್ ಪ್ರಕಿಯೆಯಲ್ಲಿ ಶಿಕ್ಷಕರು ಒಂದು ಸ್ಥಳವನ್ನು ಆಯ್ಕೆ ಮಾಡಬೇಕು. ಸ್ಥಳ ಆಯ್ಕೆ ಮಾಡದಿದ್ದರೇ, ಯಾವುದೇ ಶಾಲೆಯಲ್ಲಿ ವಿಧ್ಯಾರ್ಥಿಗಳ ಶಿಕ್ಷಕರ ಅನುಪಾತ ಸರಿ ಇಲ್ಲವಾದಲ್ಲಿ, ಅಥಾವ ಸರ್ಕಾರದ ಇತರ ಕಾರಣಗಳಿದ್ದಲ್ಲಿ, ಕನಿಷ್ಠ ಸೇವಾವಧಿ ಪೂರ್ನಗೊಳಿಸಿದ ಯಾವುದೇ ಶಿಕ್ಷಕರನ್ನು ಬೇಕಾಗಿರುವ ಸ್ಥಳಕ್ಕೆ ವರ್ಗಾವಣೆ ಮಾಡಬಹುದು ಎಂದು ಮಸೂದೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಸಮರ್ಪಕ ಮರು ಹಂಚಿಕೆ ಮತ್ತು ವಲಯವಾರು ವರ್ಗಾವಣೆಗಳಲ್ಲಿ ಯಾವುದೇ ಶಿಕ್ಷಕರು ವರ್ಗಾವಣೆ ಮಾಡುವುದು ಇದ್ದರೇ, ಶಿಕ್ಷಕರ ಕನಿಷ್ಠ ಸೇವೆಯನ್ನು ಪರಿಗಣಿಸುವಾಗ, ಹಿಂದಿನ ಶಾಲೆಯಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಬಹುದು.
ಕರ್ನಾಟಕ ಸಿವಿಲ್ ಸೇವೆಗಳ ನಿಯಮ 1957ರ ಅಡಿಯಲ್ಲಿ ದಂಡನೆಗೆ ಗುರಿಯಾಗಿರುವ ಮತ್ತು ಕಾನೂನು ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ಶಿಕ್ಷಕರನ್ನು ಸಿ. ವಲಯದ ಯಾವುದೇ ಖಾಲಿ ಜಾಗಕ್ಕೆ ವರ್ಗಾವಣೆ ಮಾಡಬುದು ಎಂದು ಮಸೂದೆಯಲ್ಲಿ ಉಲ್ಲೇಖ ಮಾಡಲಾಗಿದೆ
ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು, ವರ್ಗಾವಣೆ ಪಡೆಯಬೇಕಾದರೇ ಕನಿಷ್ಠ ಹತ್ತು ವರ್ಷ ಸೇವೆ ಸಲ್ಲಿಸಿರಬೇಕು.
ಪತಿ ಮತ್ತು ಪತ್ನಿ ವರ್ಗಾವಣೆಗೆ ಅಸ್ತು ಎಂದ ಮಸೂದೆ
ಸರ್ಕಾರಿ ವಲಯದಲ್ಲಿ ಪತಿ, ಪತ್ನಿ ಬೇರೆ ಬೇರೆ ಊರುಗಳಲ್ಲಿ ಸೇವೆ ಸಲ್ಲಿಸುವುದು ಸಾಮಾನ್ಯವಾಗಿದೆ. ಆದರೆ ಈ ಮಸೂದೆ ಅತಂಹ ದಂಪತಿಗಳೆ ಒಂದೇ ತಾಲೂಕಿನಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ. ಶಿಕ್ಷಕರು ತಮ್ಮ ಅಥಾವ ಪತಿ ಕಾರ್ಯನಿರ್ವಹಿಸುತ್ತಿರುವ ತಾಲೂಕಿ ವರ್ಗಾವಣೆ ಪಡೆಯಲು ಅರ್ಜಿ ಸಲ್ಲಿಸಬಹುದು.
ವರ್ಗಾವಣೆ ಪ್ರಕಿಯೆ ನಡೆಯುವಾಗ ಸಹಜವಾಗಿ ಕೆಲ ಕುಂದುಕೊರತೆ ಕಂಡು ಬರುತ್ತವೆ. ಲಿಖಿತ ದೂರುಗಳು ಬಂದರೆ ಅವುಗಳನ್ನು ಪರಿಶೀಲಿಸಲು ಅಧಿಕಾರಿಯೊಬ್ಬರನ್ನು ನೇಮಿಸುವಂತೆ ಮಸೂದೆಯಲ್ಲಿ ತಿಳಿಸಲಾಗಿದೆ. ನೇಮಕವಾದ ಅಧಿಕಾರಿಯು ಸಲ್ಲಿಕೆಯಾದ ದೂರುಗಳನ್ನು ಪರಿಶೀಲಿಸಿ, 7 ದಿನಗಳ ಒಳಗೆ ಆದೇಶ ಹೊರಡಿಸಬೇಕು. ಈ ಆದೇಶದ ಬಗ್ಗೆ ಏನಾದರು ತಕರಾರು ಇದ್ದರೆ, ಶಿಕ್ಷಕರು ಬೆಳಗಾವಿ, ಧಾರವಾಡ, ಕಲಬರುಗಿ, ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರಿಗೆ ಮೇಲ್ಮನವಿ ಸಲ್ಲಿಸಲು ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಯಾರಿಗಿಲ್ಲ ವರ್ಗಾವಣೆ
• ಶಿಕ್ಷಕರು, ಅವರ ಪತ್ನಿ ಅಥಾವ ಪತಿ, ಮಕ್ಕಳು ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರೆ. ಆ ತಾಲೂಕಿನಲ್ಲಿ ಚಿಕಿತ್ಸೆ ಸಿಗದಿದ್ದರೆ.
• ಶಿಕ್ಷಕರು ಅವರ ಪತ್ನಿ ಅಥಾವ ಪತಿ, ಮಕ್ಕಳು ಯಾರಾದರೂ ಅಂಗವಿಕಲರಾಗಿದ್ದರೆ
• 12 ವರ್ಷದೊಳಗಿನ ಅವಲಂಬಿತ ಮಕ್ಕಳನ್ನು ಹೊಂದಿರುವ ವಿಧವೆ, ವಿಧುರ, ಅಥಾವ ವಿಚ್ಛೇದಿತ ಶಿಕ್ಷಕ, ಶಿಕ್ಷಕಿಯರಿಗೆ
• ಶಿಕ್ಷಕರ ಸೇನೆ ಅಥಾವ ಅರೆ ಸೇನಾ ಪಡೆಯಲ್ಲಿ ಕೆಲಸ ನಿರ್ವಹಿಸುತ್ತಿರುವ, ನಿವೃತಿ ಹೊಂದಿರುವ ಸೈನಿಕರು ಅಥಾವ ಶಾಶ್ವತ ಅಂಗವೈಕಲ್ಯಗೊಳಗಾದ, ಮೃತಪಟ್ಟ ಸೈನಿಕರ ಪತಿ ಅಥಾವ ಪತ್ನಿಯಾಗಿದ್ದರೇ
• ಶಿಕ್ಷಕರು ರಾಜ್ಯ ಕೇಂದ್ರ ಸರ್ಕಾರ ಅಥಾವ ಅನುದಾನಿತ ಶೈಕ್ಷಣಿಕ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪತಿ ಹಾಗೂ ಪತ್ನಿ ಆಗಿದ್ದರೆ
• 50 ವರ್ಷ ದಾಟಿದ ಶಿಕ್ಷಕಿಯರು ಮತ್ತು 55 ವರ್ಷ ದಾಟಿದ ಶಿಕ್ಷಕರಿಗೆ ವರ್ಗಾವಣೆ ವಿನಾಯಿತಿ
• ಗರ್ಭಿಣಿ ಇಲ್ಲವೇ, ಒಂದು ವರ್ಷದೊಳಗಿನ ಮಗುವನ್ನು ಹೊಂದಿರುವ ಶಿಕ್ಷಕಿ