ತನ್ನ ಪ್ರೀತಿಯ ಅಮ್ಮನ ಇಚ್ಛೆಯಂತೆ ಅವರ ಕಣ್ಣು ಮತ್ತು ಮೃತ ದೇಹವನ್ನು ಆಸ್ಪತ್ರೆಗೆ ದಾನ ಮಾಡಿದ ಸಚಿವ ಹರ್ಷವರ್ಧನ್
ಹೊಸದಿಲ್ಲಿ, ಸೆಪ್ಟೆಂಬರ್07: ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರ ತಾಯಿ ಭಾನುವಾರ ಬೆಳಗ್ಗೆ ನಿಧನರಾಗಿದ್ದಾರೆ. ಸಚಿವ ಹರ್ಷವರ್ಧನ್ ಟ್ವೀಟ್ ಮಾಡಿ, ತಮ್ಮ ತಾಯಿ ಮೃತಪಟ್ಟಿರುವ ಮಾಹಿತಿಯನ್ನು ನೀಡಿದ್ದಾರೆ.
ಯಾವುದೇ ಅಂತ್ಯಕ್ರಿಯೆ ಇರುವುದಿಲ್ಲ ಎಂದು ಸಚಿವ ಹರ್ಷವರ್ಧನ್ ತಿಳಿಸಿದ್ದು, ತಾಯಿಯ ಇಚ್ಛೆಯಂತೆ, ಭಾನುವಾರ ಮಧ್ಯಾಹ್ನ 3 ಗಂಟೆಗೆ ಅವರ ಮೃತದೇಹವನ್ನು ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿಗೆ ಹಸ್ತಾಂತರಿಸಿದ್ದಾರೆ. ಅವರ ಮರಣದ ನಂತರ, ತಾಯಿಯ ಇಚ್ಛೆಯಂತೆ ದೆಹಲಿಯ ಏಮ್ಸ್ ಆಸ್ಪತ್ರೆಗೆ ಕಣ್ಣುಗಳನ್ನು ದಾನ ಮಾಡಿದ್ದಾರೆ.
ಭಾನುವಾರ ಬೆಳಗ್ಗೆ ತಾಯಿಯನ್ನು ಕಳೆದುಕೊಂಡ ಸಚಿವರು, ಅಮ್ಮ ನೀವು ಹಿಂತಿರುಗಿ!
ನನ್ನ ಪ್ರೀತಿಯ ಅಮ್ಮ ಇಂದು ಹೃದಯ ಸ್ತಂಭನದಿಂದ ನಿಧನರಾದರು. ಅವರದ್ದು ಉನ್ನತ ವ್ಯಕ್ತಿತ್ವ. ನನಗೆ ನನ್ನ ತಾಯಿ ಮಾರ್ಗದರ್ಶಿ ಮತ್ತು ತತ್ವಜ್ಞಾನಿಯಾಗಿದ್ದರು. ಅವರ ಪವಿತ್ರಾತ್ಮಕ್ಕೆ ಶಾಂತಿ ಸಿಗಲಿ ಎಂದು ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ.
Heartbroken to inform that my dearest person on earth, my Mother, has left for heavenly abode.
She was 89 & suffered a cardiac arrest today morning.
A towering personality, my guide & philosopher, she has left a void in my life that none can fill.
May her pious soul find peace. pic.twitter.com/wCAm0P74OC— Dr Harsh Vardhan (@drharshvardhan) September 6, 2020