ಗದಗ: ಎಸ್‍ಎಸ್‍ಎಲ್‍ಸಿ ಫಲಿತಾಂಶ ವೇಳೆ ಮೂರು ಅಂಕಗಳಿಂದ ಫಸ್ಟ್ rankನಿಂದ ಗದಗ ಜಿಲ್ಲೆಯ ವಿದ್ಯಾರ್ಥಿನಿಯೊಬ್ಬಳು ವಂಚಿತಳಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗದಗ ಜಿಲ್ಲೆಯ ರೋಣ ತಾಲೂಕಿನ ನರೇಗಲ್ಲ ಪಟ್ಟಣದ ವೈದ್ಯ ಡಾ.ಜಿ.ಕೆ ಕಾಳೆ ಅವರ ಮೊಮ್ಮಗಳು ಶ್ರೇಯಾ ಡೊಂಗ್ರೆ 3 ಅಂಕಗಳಿಂದ ಫಸ್ಟ್ rankನಿಂದ ವಂಚಿತಳಾದ ವಿದ್ಯಾರ್ಥಿನಿ. ಶ್ರೇಯಾ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪಟ್ಟಣದ ಸೆಂಟ್ ಮೆರೀಸ್ ಆಂಗ್ಲ ಶಾಲೆಯಲ್ಲಿ ಓದುತ್ತಿದ್ದಳು.
ಎಸ್‍ಎಸ್‍ಎಲ್‍ಸಿ ಫಲಿತಾಂಶ ಬಂದಾಗ ಶ್ರೇಯಾಗೆ 625 ಅಂಕಗಳಿಗೆ 622 ಅಂಕಗಳು ಬಂದಿದ್ದವು. ಆದರೆ, ಅದರಲ್ಲೂ ಇಂಗ್ಲಿಷ್ ಪತ್ರಿಕೆಯಲ್ಲಿ 100ಕ್ಕೆ 97 ಅಂಕಗಳು ಬಂದಿವೆ. ಆದರೆ, ಅನುಮಾನಗೊಂಡ ವಿದ್ಯಾರ್ಥಿನಿ ಇಂಗ್ಲಿಷ್ ಉತ್ತರ ಪತ್ರಿಕೆಯ ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ದಳು. ಮರು ಮೌಲ್ಯಮಾಪನದ ಫಲಿತಾಂಶ ಬಂದಾಗ ಎಲ್ಲರಿಗೂ ಅಚ್ಚರಿ ಕಾದಿತ್ತು. ಇಂಗ್ಲಿಷ್ ಪತ್ರಿಕೆಯಲ್ಲೂ ಶ್ರೇಯಾ ಡೊಂಗ್ರೆಗೆ 100ಕ್ಕೆ 100 ಅಂಕಗಳು ಬಂದಿವೆ.
ಇದರಿಂದ ಶ್ರೇಯಾ 625ಕ್ಕೆ 625 ಅಂಕಗಳನ್ನು ಪಡೆದು ಫಸ್ಟ್ rank ಪಡೆದ ವಿದ್ಯಾರ್ಥಿಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾಳೆ. ಮೌಲ್ಯಮಾಪಕರು ಮಾಡಿದ ಯಡವಟ್ಟಿನಿಂದ ವಿದ್ಯಾರ್ಥಿನಿ ಫಸ್ಟ್ rankನಿಂದ ವಂಚಿಳಾಗಿರುವುದು ಪೋಷಕರಲ್ಲಿ ಬೇಸರ ಬೇಸರ ತರಿಸಿದೆ.
ಅಲ್ಲು ಅರ್ಜುನ್ ನ್ಯಾಯಾಂಗ ಬಂಧನ ಆದೇಶದ ಬೆನ್ನಲ್ಲೇ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್
ಥಿಯೇಟರ್ ಬಳಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಅವರನ್ನ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲು ಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಈ ಪ್ರಕರಣಕ್ಕೆ...