ADVERTISEMENT
Sunday, July 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ನಟಿ ಸಂಜನಾ ಗಲ್ರಾನಿಗೆ ಆಪ್ತರೇ ಮುಳುವಾದ್ರಾ..!

admin by admin
September 8, 2020
in Cinema, Newsbeat, Samagra karnataka, ರಾಜ್ಯ
Share on FacebookShare on TwitterShare on WhatsappShare on Telegram

ಬೆಂಗಳೂರು: ಡ್ರಗ್ಸ್ ಮಾಫಿಯಾ ಜಾಲದಲ್ಲಿ ಸಿಸಿಬಿ ದಾಳಿಗೆ ಒಳಗಾಗಿರುವ ನಟಿ ಸಂಜನಾ ಗಲ್ರಾನಿಗೆ ಆಪ್ತರೇ ಮುಳುವಾದ್ರಾ ಎಂಬ ಚರ್ಚೆ ನಡೆಯುತ್ತಿದೆ.
ಈ ಆಪ್ತರು ಆಯೋಜನೆ ಮಾಡುತ್ತಿದ್ದ ಹೈ-ಫೈ ಪಾರ್ಟಿಗಳಿಗೆ ಸಂಜನಾ ಗಲ್ರಾನಿಯೇ ಮುಖ್ಯ ಅಟ್ರಾಕ್ಷನ್ ಆಗಿದ್ದರು. ಸಂಜನಾ ಗಲ್ರಾನಿ ಮುಂದಿಟ್ಟುಕೊಂಡು ಪಾರ್ಟಿಗಳಲ್ಲಿ ಡ್ರಗ್ಸ್ ದಂಧೆ ನಡೆಸುತ್ತಿರುವ ಬಗ್ಗೆ ಸಿಸಿಬಿಗೆ ಮಾಹಿತಿ ಸಿಕ್ಕಿದೆ. ಹೀಗಾಗಿ ಸಂಜನಾಗೂ ಡ್ರಗ್ಸ್ ದಂಧೆಯ ನಂಟು ಇರಬಹುದು. ಸಂಜನಾಗೆ ಗೊತ್ತಿಲ್ಲದೆ ಈ ಪಾರ್ಟಿಗಳಲ್ಲಿ ಡ್ರಗ್ಸ್ ದಂಧೆ ಮಾಡಲು ಸಾಧ್ಯವೇ ಇಲ್ಲ. ಒಂದಲ್ಲ, ಎರಡಲ್ಲ..ಆಪ್ತರು ಆಯೋಜಿಸುವ ಹತ್ತಾರು ಪಾರ್ಟಿಗಳಲ್ಲಿ ನಟಿ ಸಂಜನಾ ಇರುತ್ತಿದ್ದರು. ಹೀಗಾಗಿ ಡ್ರಗ್ಸ್ ಜಾಲದಲ್ಲಿ ಸಂಜನಾ ಗಲ್ರಾನಿಯ ಪಾತ್ರವೂ ಇರಬಹುದು ಎಂಬುದು ಸಿಸಿಬಿ ಪೊಲೀಸರ ಲೆಕ್ಕಾಚಾರವಾಗಿದೆ ಎನ್ನಲಾಗಿದೆ.

ಸಂಜನಾಗೆ ಕಂಟಕರಾದ ಆಪ್ತರು ಯಾರ್ಯಾರು..?
ನಿಯಾಸ್ ಅಹಮದ್
ಸಂಜನಾ ಡ್ರಗ್ ಜಾಲದ ಸೂತ್ರದಾರನೇ ನಿಯಾಸ್ ಅಹಮದ್. ಮಲಯಾಳಂ ನಟನಾದ ನಿಯಾಸ್ ಅಹಮದ್, ಕಲ್ಕಿ ಸೇರಿದಂತೆ ಕೆಲ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯ ಮಾಡಿದ್ದಾನೆ. ಡ್ರಗ್ ಪೆಡ್ಲರ್ ಜತೆ ನಿಯಾಸ್ ಅಹಮದ್ ನೇರ ಸಂಪರ್ಕ ಹೊಂದಿದ್ದ.
2 ದಿನದ ಹಿಂದೆ ನಿಯಾಸ್ ಅಹಮದ್‍ನನ್ನು ಸಿಸಿಬಿ ಬಂಧಿಸಿ ವಿಚಾರಣೆ ನಡೆಸಿದಾಗ ಸಂಜನಾ ಹೆಸರು ಬಾಯ್ಬಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಸಂಜನಾ ಮನೆ ಮೇಲೆ ದಾಳಿ ಮಾಡಲಾಗಿದೆ ಎನ್ನಲಾಗಿದೆ.
ಮತ್ತೊಬ್ಬ ಡ್ರಗ್ ಪೆಡ್ಲರ್ ಆಫ್ರಿಕನ್ ಪ್ರಜೆ ಲೂಮಾ ಪೆಪ್ಪರ್ ಜೊತೆಗೂ ನಿಯಾಸ್ ಸಂಪರ್ಕ ಹೊಂದಿದ್ದ. ಲೂಮಾ ಪೆಪ್ಪರ್‍ನಿಂದ ನಿಯಾಸ್ ಅಹಮದ್ ಡ್ರಗ್ಸ್ ಖರೀದಿ ಮಾಡಿ ಪಾರ್ಟಿಗಳಲ್ಲಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
360 ಮಾಡೆಲ್ ಮ್ಯಾನೇಜ್‍ಮೆಂಟ್ ಹೆಸರಿನಲ್ಲಿ ನಿಯಾಸ್ ಅಹಮದ್ ಪಾರ್ಟಿ ಆಯೋಜಿಸುತ್ತಿದ್ದ. ಈ ಕಂಪನಿಯ ಎಂಡಿ ಆಗಿದ್ದಳು ಪೃಥ್ವಿಶೆಟ್ಟಿ. ಇತ್ತೀಚೆಗೆ ಎನ್-95 ಮಾಸ್ಕ್ ತಯಾರಿಸಿ ಬಿಡುಗಡೆ ಮಾಡಿದ್ದ.

Related posts

ಸತೀಶ್ ಜಾರಕಿಹೊಳಿ ಮತ್ತು ಸಿಎಂ ಡಿ ಕೆ ಶಿವಕುಮಾರ್ ದೋಸ್ತಿ ದುನಿಯಾ -ಕನಕಪುರ ಬಂಡೆಯ ಜೊತೆ ಕೈಜೋಡಿಸಿದ ಬೆಳಗಾವಿ ಸಾಹುಕಾರ ಸತೀಶ್ ಜಾರಕಿಹೊಳಿ: CM ಹೊಸ ಚದುರಂಗದಾಟಕ್ಕೆ ನಡುಗಿದ ವೈರಿ ಪಾಳಯ!

ಸತೀಶ್ ಜಾರಕಿಹೊಳಿ ಮತ್ತು ಸಿಎಂ ಡಿ ಕೆ ಶಿವಕುಮಾರ್ ದೋಸ್ತಿ ದುನಿಯಾ -ಕನಕಪುರ ಬಂಡೆಯ ಜೊತೆ ಕೈಜೋಡಿಸಿದ ಬೆಳಗಾವಿ ಸಾಹುಕಾರ ಸತೀಶ್ ಜಾರಕಿಹೊಳಿ: CM ಹೊಸ ಚದುರಂಗದಾಟಕ್ಕೆ ನಡುಗಿದ ವೈರಿ ಪಾಳಯ!

July 12, 2026
NPS ಗೆ ಎಳ್ಳುನೀರು OPS ಜಾರಿಗೆ ಮುಹೂರ್ತ ಫಿಕ್ಸ್- ಓಪಿಎಸ್ ಜಾರಿಯ ಐತಿಹಾಸಿಕ ಘೋಷಣೆ ಮಾಡಿದ  ಡಿಕೆ ಶಿವಕುಮಾರ್

NPS ಗೆ ಎಳ್ಳುನೀರು OPS ಜಾರಿಗೆ ಮುಹೂರ್ತ ಫಿಕ್ಸ್- ಓಪಿಎಸ್ ಜಾರಿಯ ಐತಿಹಾಸಿಕ ಘೋಷಣೆ ಮಾಡಿದ ಡಿಕೆ ಶಿವಕುಮಾರ್

July 12, 2026

ಪೃಥ್ವಿ ಶೆಟ್ಟಿ
ಈವೆಂಟ್ ಮ್ಯಾನೇಜ್‍ಮೆಂಟ್ ನಡೆಸುತ್ತಿದ್ದ ಪೃಥ್ವಿಶೆಟ್ಟಿ, ಸಂಜನಾ ಗಲ್ರಾನಿ ಆಪ್ತೆ. ಜೊತೆಗೆ ಪೃಥ್ವಿ ಶೆಟ್ಟಿ ಸಂಜನಾ ಬ್ಯುಸಿನೆಸ್ ಪಾರ್ಟನರ್. 360 ಮಾಡೆಲ್ ಮ್ಯಾನೇಜ್‍ಮೆಂಟ್ ಎಂ.ಡಿಯಾಗಿದ್ದ ಪೃಥ್ವಿ ಶೆಟ್ಟಿಯ ಎಲ್ಲಾ ವ್ಯವಹಾರಗಳೂ ಸಂಜನಾಗೆ ಗೊತ್ತಿವೆ. ಪೃಥ್ವಿ ಶೆಟ್ಟಿಯನ್ನು ಎರಡು ದಿನಗಳ ವಿಚಾರಣೆ ನಡೆಸಿದ್ದ ಸಿಸಿಬಿ ಪೊಲಿಸರು, ಆಕೆ ನೀಡಿದ ಮಾಹಿತಿ ದಾಖಲಿಸಿಕೊಂಡು ಕಳಿಸಿದ್ದಾರೆ. ಆಕೆ ನೀಡಿದ ತಪ್ಪೊಪ್ಪಿಗೆ ಹೇಳಿಕೆಯೂ ಕೂಡ ಸಂಜನಾಗೆ ಮುಳುವಾಗಿರುವ ಸಾಧ್ಯತೆ ಇದೆ.

ರಾಹುಲ್ ಭಯ್ಯಾ..
ಎಲ್ಲರಿಗಿಂತಲೂ ಸಂಜನಾ ಗಲ್ರಾನಿಗೆ ನಿಕಟ ಸಂಪರ್ಕ ಹೊಂದಿದ್ದವ ರಾಹುಲ್. ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ರಾಹುಲ್, ಕ್ಯಾಸಿನೋಗಳನ್ನು ನಡೆಸುತ್ತಿದ್ದ. ಜತೆಗೆ ಆತ ಆಯೋಜಿಸುವ ಡ್ರಗ್ಸ್ ಪಾರ್ಟಿಗಳಲ್ಲಿ ಸಂಜನಾ ಅಟ್ರಾಕ್ಷನ್ ಆಗಿದ್ದಳು.


ಮೊದಲು ರಾಹುಲ್ ಬಗ್ಗೆ ಗೊತ್ತೇ ಇಲ್ಲ ಎಂದಿದ್ದ ಸಂಜನಾ, ರಾಹುಲ್ ಜತೆಗಿನ ಫೋಟೋ, ಡ್ಯಾನ್ಸ್ ಮಾಡಿ ಕುಣಿದು ಕುಪ್ಪಳಿಸಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಆತ ಗೊತ್ತು, ನನಗೆ ತಮ್ಮನ ಸಮಾನ ಎಂದು ಹೇಳಿಕೊಂಡಿದ್ದಳು. ಈತ ಕೂಡ ತನ್ನ ಡ್ರಗ್ಸ್ ದಂಧೆಯಲ್ಲಿ ಸಂಜನಾ ಪಾತ್ರ ಇರುವ ಬಗ್ಗೆ ಹೇಳಿರುವುದು ಸಂಜನಾಗೆ ಸಂಕಷ್ಟ ತಂದೊಡ್ಡಿದೆ.

 

ಪ್ರಶಾಂತ್ ರಂಕಾ
ಪ್ರಶಾಂತ್ ರಂಕಾ ಕೂಡ ಒಬ್ಬ ಡ್ರಗ್ ಪೆಡ್ಲರ್, ವಿರೇನ್ ಖನ್ನಾ, ರಾಹುಲ್ ಜತೆ ಸೇರಿ ಪಾರ್ಟಿಗಳಲ್ಲಿ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಎನ್ನಲಾಗಿದೆ.

ವಿರೇನ್ ಖನ್ನಾ..
ವಿರೇನ್ ಖನ್ನಾ ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆಯ ಮತ್ತೊಬ್ಬ ಕಿಂಗ್‍ಪಿನ್. ಈತ ದೆಹಲಿಯವನಾಗಿದ್ದರೂ ಹೆಚ್ಚು ಇರುತ್ತಿದ್ದದ್ದು ಬೆಂಗಳೂರಿನಲ್ಲಿ. ಬೆಂಗಳೂರಿನ ಶಾಂತಿನಗರದ ಹಾಕಿ ಸ್ಟೇಡಿಯಂ ಬಳಿಯ ಅಪಾರ್ಟ್‍ಮೆಂಟ್‍ನಲ್ಲಿ ವಿರೇನ್ ಖನ್ನಾ ಮನೆ ಹೊಂದಿದ್ದಾನೆ.

ಬೆಂಗಳೂರು, ದೆಹಲಿ, ಮುಂಬೈ, ಗೋವಾ ಹಾಗೂ ವಿದೇಶಗಳಲ್ಲೂ ವಿರೇನ್ ಖನ್ನಾ ಹೈ-ಫೈ ಪಾರ್ಟಿಗಳನ್ನು ಆಯೋಸುತ್ತಿದ್ದ. ಈ ಪಾರ್ಟಿಗಳಲ್ಲಿ ಡ್ರಗ್ಸ್ ದಂಧೆ ಮಾಮೂಲಾಗಿತ್ತು. ಈತ ಕೂಡ ಸಿಸಿಬಿ ಪೊಲಿಸರ ವೇಳೆ ಸಂಜನಾ ಗಲ್ರಾನಿ ಹೆಸರು ಹೇಳಿರುವುದು ಆಕೆಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಡ್ರಗ್ಸ್ ದಂಧೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಇಂದು ಸಿಸಿಬಿ ಪೊಲೀಸರು ವಿರೇನ್ ಖನ್ನಾನ ಶಾಂತಿನಗರದ ನಿವಾಸದ ಮೇಲೆ ದಾಳಿ ಮಾಡಿದ್ದಾರೆ. ಮೊದಲು ಮನೆಯ ಬಾಗಿಲು ತೆಗೆಯಲು ಖನ್ನಾನ ಪೋಷಕರು ಕಿರಿಕ್ ಮಾಡಿದ್ದಾರೆ. ವಕೀಲರನ್ನು ಕರೆಸಿಕೊಂಡ ಬಳಿ ಸಿಸಿಪಿ ಪೊಲೀಸರ ಪರಿಶೀಲನೆ ಅವಕಾಶ ಕೊಟ್ಟಿದ್ದಾರೆ.
ಈ ಎಲ್ಲಾ ಸಂಗತಿ ನೋಡಿದರೆ ಸಂಜನಾಗೆ ಮಿತ್ರರೇ ಕಂಕಟವಾಗಿರುವುದು ಸ್ಪಷ್ಟವಾಗುತ್ತಿದೆ.  ಬಾಲಿವುಡ್ ಪಾರ್ಟಿಗಳಲ್ಲಿ ಸಂಜನಾ ಗಲ್ರಾನಿ ಭಾಗಿಯಾಗಿರುವ ಬಗ್ಗೆ ವಿರೇನ್ ಖನ್ನಾ ಬಾಯಿಬಿಟ್ಟಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

Tags: #sanjanaCCBdrugs casefreinds
ShareTweetSendShare
Join us on:

Related Posts

ಸತೀಶ್ ಜಾರಕಿಹೊಳಿ ಮತ್ತು ಸಿಎಂ ಡಿ ಕೆ ಶಿವಕುಮಾರ್ ದೋಸ್ತಿ ದುನಿಯಾ -ಕನಕಪುರ ಬಂಡೆಯ ಜೊತೆ ಕೈಜೋಡಿಸಿದ ಬೆಳಗಾವಿ ಸಾಹುಕಾರ ಸತೀಶ್ ಜಾರಕಿಹೊಳಿ: CM ಹೊಸ ಚದುರಂಗದಾಟಕ್ಕೆ ನಡುಗಿದ ವೈರಿ ಪಾಳಯ!

ಸತೀಶ್ ಜಾರಕಿಹೊಳಿ ಮತ್ತು ಸಿಎಂ ಡಿ ಕೆ ಶಿವಕುಮಾರ್ ದೋಸ್ತಿ ದುನಿಯಾ -ಕನಕಪುರ ಬಂಡೆಯ ಜೊತೆ ಕೈಜೋಡಿಸಿದ ಬೆಳಗಾವಿ ಸಾಹುಕಾರ ಸತೀಶ್ ಜಾರಕಿಹೊಳಿ: CM ಹೊಸ ಚದುರಂಗದಾಟಕ್ಕೆ ನಡುಗಿದ ವೈರಿ ಪಾಳಯ!

by Shwetha
July 12, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಶಾಶ್ವತ ಶತ್ರುಗಳೂ ಇಲ್ಲ, ಶಾಶ್ವತ ಮಿತ್ರರೂ ಇಲ್ಲ ಎಂಬ ಹಳೇ ಗಾದೆ ಮಾತು ಮತ್ತೊಮ್ಮೆ ಅಕ್ಷರಶಃ ನಿಜವಾಗಿದೆ. ರಾಜ್ಯ ರಾಜಕಾರಣ ಹಾಗೂ ಪಕ್ಷದ...

NPS ಗೆ ಎಳ್ಳುನೀರು OPS ಜಾರಿಗೆ ಮುಹೂರ್ತ ಫಿಕ್ಸ್- ಓಪಿಎಸ್ ಜಾರಿಯ ಐತಿಹಾಸಿಕ ಘೋಷಣೆ ಮಾಡಿದ  ಡಿಕೆ ಶಿವಕುಮಾರ್

NPS ಗೆ ಎಳ್ಳುನೀರು OPS ಜಾರಿಗೆ ಮುಹೂರ್ತ ಫಿಕ್ಸ್- ಓಪಿಎಸ್ ಜಾರಿಯ ಐತಿಹಾಸಿಕ ಘೋಷಣೆ ಮಾಡಿದ ಡಿಕೆ ಶಿವಕುಮಾರ್

by Shwetha
July 12, 2026
0

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಾಗಿದ್ದ ಹಳೆ ಪಿಂಚಣಿ ಯೋಜನೆ ಅಂದರೆ ಓಪಿಎಸ್ ಜಾರಿ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈಗ ಮಹತ್ವದ ಹೆಜ್ಜೆ ಇಟ್ಟಿದೆ....

ಜಮೀರ್ ಅಹ್ಮದ್ ಖಾನ್ ಗೆ ಬಿಗಿಯಾದ ಕಾನೂನು ಕುಣಿಕೆ: ರಾಜ್ಯಪಾಲರ ಒಂದು ಸಹಿ ಪ್ರಭಾವಿ ನಾಯಕನ ಭವಿಷ್ಯ ಬದಲಿಸುತ್ತಾ?- ಲೋಕಾಯುಕ್ತ ಬಲೆಯಲ್ಲಿ ಸಿಲುಕಿದರೇ ಜಮೀರ್ ಅಹ್ಮದ್?

ಜಮೀರ್ ಅಹ್ಮದ್ ಖಾನ್ ಗೆ ಬಿಗಿಯಾದ ಕಾನೂನು ಕುಣಿಕೆ: ರಾಜ್ಯಪಾಲರ ಒಂದು ಸಹಿ ಪ್ರಭಾವಿ ನಾಯಕನ ಭವಿಷ್ಯ ಬದಲಿಸುತ್ತಾ?- ಲೋಕಾಯುಕ್ತ ಬಲೆಯಲ್ಲಿ ಸಿಲುಕಿದರೇ ಜಮೀರ್ ಅಹ್ಮದ್?

by Shwetha
July 12, 2026
0

ಬೆಂಗಳೂರು: ಕಾಂಗ್ರೆಸ್ ನ ಪ್ರಭಾವಿ ನಾಯಕ ಮತ್ತು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಸಂಕಷ್ಟದ ಕಾರ್ಮೋಡ ಕವಿದಿದೆ. ಆದಾಯ ಮೀರಿ ಆಸ್ತಿ ಗಳಿಕೆ ಮಾಡಿರುವ...

ದಸರಾದಲ್ಲಿ ಕಂಬಳದ ಕಿಚ್ಚು- ಮೈಸೂರು ಪರಂಪರೆಗೆ ಧಕ್ಕೆ ತರಬೇಡಿ: ಸರ್ಕಾರದ ನಿರ್ಧಾರದ ವಿರುದ್ಧ ಸಿಡಿದೆದ್ದ ಹೆಚ್ ಡಿ ಕುಮಾರಸ್ವಾಮಿ ಮತ್ತು ಯದುವೀರ್ ಒಡೆಯರ್

ದಸರಾದಲ್ಲಿ ಕಂಬಳದ ಕಿಚ್ಚು- ಮೈಸೂರು ಪರಂಪರೆಗೆ ಧಕ್ಕೆ ತರಬೇಡಿ: ಸರ್ಕಾರದ ನಿರ್ಧಾರದ ವಿರುದ್ಧ ಸಿಡಿದೆದ್ದ ಹೆಚ್ ಡಿ ಕುಮಾರಸ್ವಾಮಿ ಮತ್ತು ಯದುವೀರ್ ಒಡೆಯರ್

by Shwetha
July 12, 2026
0

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಕರಾವಳಿಯ ಹೆಮ್ಮೆಯ ಕ್ರೀಡೆ ಕಂಬಳವನ್ನು ಆಯೋಜಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಈಗ ದೊಡ್ಡ ಮಟ್ಟದ ಸಾಂಸ್ಕೃತಿಕ ಸಂಘರ್ಷಕ್ಕೆ ನಾಂದಿ...

ನನ್ನ ಹತ್ಯೆಗೆ ಸಂಚು ನಡೆಸಿದರೆ ಇರಾನ್ ಭೂಪಟದಿಂದಲೇ ನಾಶ: ಡೊನಾಲ್ಡ್ ಟ್ರಂಪ್ ಎಚ್ಚರಿಕೆ

ನನ್ನ ಹತ್ಯೆಗೆ ಸಂಚು ನಡೆಸಿದರೆ ಇರಾನ್ ಭೂಪಟದಿಂದಲೇ ನಾಶ: ಡೊನಾಲ್ಡ್ ಟ್ರಂಪ್ ಎಚ್ಚರಿಕೆ

by Shwetha
July 12, 2026
0

ವಾಷಿಂಗ್ಟನ್: ತನ್ನ ವಿರುದ್ಧ ಹತ್ಯೆ ಅಥವಾ ಹತ್ಯೆಗೆ ಸಣ್ಣ ಪ್ರಯತ್ನ ನಡೆದರೂ ಇರಾನ್ ದೇಶವನ್ನು ಸಂಪೂರ್ಣವಾಗಿ ನಾಶಮಾಡಿ ಧ್ವಂಸಗೊಳಿಸಲಾಗುವುದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅತ್ಯಂತ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram