ಕಾರ್ಮಿಕರ ಭವಿಷ್ಯ ನಿಧಿಗೆ ಶೇ.8.5 ಬಡ್ಡಿದರದಲ್ಲೇ ಬಡ್ಡಿ ಪಾವತಿ ಮಾಡಿದ ಇಪಿಎಫ್‌ಒ
ಹೊಸದಿಲ್ಲಿ, ಸೆಪ್ಟೆಂಬರ್10: ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) 2019-20ರ ಹಣಕಾಸು ವರ್ಷದಲ್ಲಿ 8.5% ಬಡ್ಡಿ ಪಾವತಿಯನ್ನು 8.15% ಮತ್ತು 0.35% ಎಂದು ಎರಡು ಪ್ರತ್ಯೇಕ ಕಂತುಗಳಲ್ಲಿ ನೀಡಲು ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ.
ನಿವೃತ್ತಿ ನಿಧಿ ವ್ಯವಸ್ಥಾಪಕರ ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯ ಕೇಂದ್ರ ಮಂಡಳಿಯ ಟ್ರಸ್ಟಿಗಳ (ಸಿಬಿಟಿ) ಸಭೆಯಲ್ಲಿ ಇದನ್ನು ಬುಧವಾರ ನಿರ್ಧರಿಸಲಾಯಿತು. ಮಾರ್ಚ್ನಲ್ಲಿ ಚರ್ಚಿಸಿದಂತೆ ನಿರೀಕ್ಷಿತ ಗಳಿಕೆಗಳು ಹೂಡಿಕೆಯ ಮೇಲಿನ ಆದಾಯದ ಮೇಲೆ ಕೊರೊನಾವೈರಸ್ ಸಾಂಕ್ರಾಮಿಕದ ಪರಿಣಾಮದಿಂದ ಪ್ರಭಾವಿತವಾಗಿವೆ ಎಂದು ಇಪಿಎಫ್ಒ ಮಂಡಳಿಗೆ ತಿಳಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಆದ್ದರಿಂದ, ಮೊದಲು 8.15% ಕಂತು ಚಂದಾದಾರರ ಖಾತೆಗೆ ಜಮೆಯಾಗಿದ್ದರೆ, 0.35% ಒಂದು ಡಿಸೆಂಬರ್‌ನಲ್ಲಿ ಜಮೆಯಾಗುತ್ತದೆ. ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದೆ, 8.5% ದರದಲ್ಲೇ ಪಾವತಿಸಲಾಗುವುದು. ಆದರೆ ಪ್ರಸ್ತುತ ಪರಿಸ್ಥಿತಿಯಿಂದ ಎರಡು ಕಂತುಗಳಲ್ಲಿ ಪಾವತಿಸಲು ನಿರ್ಧರಿಸಲಾಗಿದೆ. ಮಾರುಕಟ್ಟೆಯ ಕೆಟ್ಟ ಪರಿಸ್ಥಿತಿಯಿಂದಾಗಿ ನಿರೀಕ್ಷಿತ ಮೊತ್ತ ಸಂಗ್ರಹವಾಗಿಲ್ಲ. ಆದ್ದರಿಂದ ಈ ಹೊಸ ಸೂತ್ರ ಎಂದು ಕೇಂದ್ರ ಮಂಡಳಿಯ ಟ್ರಸ್ಟಿ ವರ್ಜೇಶ್ ಉಪಾಧ್ಯಾಯ ಹೇಳಿದ್ದಾರೆ.
ಮಾರ್ಚ್ ನಲ್ಲಿ ಘೋಷಿಸಲಾದ 2019-20ರ ಬಡ್ಡಿ ಪಾವತಿ ದರ 8.5%, ಇದು ಏಳು ವರ್ಷಗಳಲ್ಲಿ ಅತ್ಯಂತ ಕಡಿಮೆ. ಇದು 2018-19ರ ಹಣಕಾಸು ವರ್ಷದ ಪಾವತಿಯ ಕೆಳಗೆ 15 ಬೇಸಿಸ್ ಪಾಯಿಂಟ್‌ಗಳಿಗಿಂತ ಕಡಿಮೆಯಾಗಿದೆ.
2019-20ರಲ್ಲಿ 8.15% ಪಾವತಿಸಿದ ನಂತರ 700 ಕೋಟಿ ರೂ.ಗಳ ಉಳಿಕೆಯಾಗಿತ್ತು. 2018-19ರಲ್ಲಿ ಇದು ಸುಮಾರು 349 ಕೋಟಿ ರೂ ಆಗಿತ್ತು.








