ಮುಂಬೈ: ಟಿವಿ ಸುದ್ದಿಗಳನ್ನು ರಾಜ್ಯ ಸರ್ಕಾರವು ಏಕೆ ನಿಯಂತ್ರಿಸಬಾರದು ಎಂದು ಮಹಾರಾಷ್ಟ್ರ ಹೈಕೋರ್ಟ್ ಪ್ರಶ್ನೆ ಮಾಡಿದೆ. ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಜಿ.ಎಸ್. ಕುಲಕರ್ಣಿ ನೇತೃತ್ವದ ನ್ಯಾಯಪೀಠವು ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಹೈ ಕೋರ್ಟ್‍ಗೆ ಸಲ್ಲಿಸಲಾದ ವಿವಿಧ ಅರ್ಜಿಗಳ ವಿಚಾರಣೆ ನಡೆಸಿತು.
ಈ ವೇಳೆ ಸುಶಾಂತ್ ಸಾವು ಪ್ರಕರಣ ಸಂಬಂಧ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿಗಳ ಮೇಲೆ ಸರ್ಕಾರ ಏಕೆ ನಿಯಂತ್ರಣ ಹೇರಬಾರದು ಎಂದು ಕೋರ್ಟ್ ಪ್ರಶ್ನಿಸಿದೆ. ಅಲ್ಲದೆ ಈ ವಿಚಾರವಾಗಿ ಸುದ್ದಿ ಪ್ರಸಾರಕ್ಕೆ ಸಂಬಂಧಿಸಿದಂತೆ ರಾಜ್ಯದ ಮೇಲಿನ ನಿಯಂತ್ರಣದ ವ್ಯಾಪ್ತಿಯ ಬಗ್ಗೆ ಸೂಕ್ತ ಪ್ರತಿಕ್ರಿಯೆಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಹೈಕೋರ್ಟ್ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವಕ್ಕೆ ನಿರ್ದೇಶನ ನೀಡಿದೆ. ಮುಖ್ಯವಾಗಿ ತುಂಬಾ ಪರಿಣಾಮಕಾರಿಯಾಗಿರುವ ಸುದ್ದಿಗಳ ಬಗ್ಗೆ ವಿಶೇಷವಾಗಿ ಗಮನಿಸುವಂತೆ ಕೋರ್ಟ್ ಸೂಚಿಸಿದೆ.








