ಪೇಟಿಎಂ ಬಳಸಿ ವಿದ್ಯುತ್ ಬಿಲ್ ಪಾವತಿ - ಇಲ್ಲಿದೆ ಮಾಹಿತಿ
ಮಂಗಳೂರು, ಸೆಪ್ಟೆಂಬರ್11: ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಆನ್ಲೈನ್ನಲ್ಲಿ ವಿದ್ಯುತ್ ಬಿಲ್ ಪಾವತಿಸುವುದು ಅತ್ಯಂತ ಸಹಾಯಕವಾದ ಆಯ್ಕೆಯಾಗಿದೆ. ಇದರಿಂದ ನೀವು ಮನೆಯಲ್ಲೇ ಕುಳಿತು ಗಡುವಿನ ಅವಧಿ ದಾಟುವ ಮೊದಲೇ ಬಿಲ್ ಪಾವತಿ ಮಾಡಬಹುದಾಗಿದೆ. ಅದಕ್ಕೆ ನೀವು ಮಾಡಬೇಕಿರುವುದು ಪೇಟಿಎಂ ಆನ್ಲೈನ್ ಪಾವತಿ ಸೇವೆಗಳನ್ನು ಬಳಸುವುದು.
ಇದರಲ್ಲಿ ನೀವು ವಿದ್ಯುತ್ ಬಿಲ್ ಮಾತ್ರವಲ್ಲದೇ ನೀರು, ಗ್ಯಾಸ್ ಪೈಪ್ಲೈನ್ಗಳು, ಕ್ರೆಡಿಟ್ ಕಾರ್ಡ್ಗಳು (Credit Cards), ಕೇಬಲ್ ಟಿವಿ ಇತ್ಯಾದಿಗಳನ್ನು ಸಹ ಪಾವತಿ ಮಾಡಬಹುದಾಗಿದೆ. ಮೊಬೈಲ್, ಲ್ಯಾಪ್ಟಾಪ್, ಟ್ಯಾಬ್ಲೆಟ್ ಅಥವಾ ಇನ್ನಾವುದೇ ಸಾಧನದಿಂದ ಪೇಟಿಎಂ ಆನ್ಲೈನ್ ಪಾವತಿ ಮಾಡಬಹುದಾಗಿದೆ.
ವಿದ್ಯುತ್ ಬಿಲ್ ಅನ್ನು ಪೇಟಿಎಂ ಅಪ್ಲಿಕೇಶನ್ ಬಳಸಿ ಹೇಗೆ ಪಾವತಿಸುವುದು ಎಂದು ಇಲ್ಲಿ ವಿವರಿಸಲಾಗಿದೆ.
– ಪೇಟಿಎಂ ಅಪ್ಲಿಕೇಶನ್ಗೆ ಲಾಗಿನ್ ಆಗಿ ಮತ್ತು ಪೇ ರೀಚಾರ್ಜ್ ಮತ್ತು ಪೇ ಬಿಲ್ಗಳ ಐಕಾನ್ ಆಯ್ಕೆಮಾಡಿ.
– ಇದರ ನಂತರ ವಿದ್ಯುತ್ ಆಯ್ಕೆಯನ್ನು ಆರಿಸಿ ಮತ್ತು ನಿಮ್ಮ ರಾಜ್ಯ ಮಂಡಳಿ ಅಥವಾ ಅಪಾರ್ಟ್ಮೆಂಟ್ ಹೆಸರು ಸೇರಿದಂತೆ ಅಲ್ಲಿ ಕೇಳಲಾಗಿರುವ ಕೆಲವು ಸಂಬಂಧಿತ ಮಾಹಿತಿಯನ್ನು ಭರ್ತಿ ಮಾಡಿ.
– ನಂತರ ಪೇಟಿಎಂ ಯುಪಿಐ, ಪೇಟಿಎಂ ವ್ಯಾಲೆಟ್, ಕಾರ್ಡ್ ಮತ್ತು ನೆಟ್ ಬ್ಯಾಂಕ್ ಸೇರಿದಂತೆ ನಿಮ್ಮ ಆದ್ಯತೆಯ ಪಾವತಿ ಮೋಡ್ ಬಳಸಿ ವ್ಯವಹಾರವನ್ನು ಮುಂದುವರಿಸಿ ಮತ್ತು ಪೂರ್ಣಗೊಳಿಸಿ.
ಯಾವುದೇ ಪ್ರಶ್ನೆಗಳಿದ್ದರೆ 24X7 ಗ್ರಾಹಕರನ್ನು ಸಂಪರ್ಕಿಸಬಹುದಾಗಿದೆ.








