ಕಲಬುರಗಿ : ನಗರದಲ್ಲಿ 1200 ಕೆಜಿ ಗಾಂಜಾ ವಶ ಪ್ರಕರಣದಲ್ಲಿ ಬಂಧಿತ ಪ್ರಮುಖ ಆರೋಪಿ ಚಂದ್ರಕಾಂತ್ ಚೌವ್ಹಾಣ್ ಬಿಜೆಪಿ ಕಾರ್ಯಕರ್ತ ಎಂಬುವುದು ಖಚಿತವಾಗಿದೆ. ಚಂದ್ರಕಾಂತ್ ಬಿಜೆಪಿ ಇತರೆ ಕಾರ್ಯಕರ್ತರ ಜೊತೆ ತೆಗೆದುಕೊಂಡಿರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇದನ್ನು ಜಿಲ್ಲಾ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಅಸ್ತ್ರವಾಗಿ ಬಳಸಿಕೊಳ್ಳಲು ಸಜ್ಜಾಗಿದ್ದಾರೆ.
ಈ ಕುರಿತು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಟ್ವಿಟ್ಟರ್ ನಲ್ಲಿ ಚಂದ್ರಕಾಂತ್ ಬಿಜೆಪಿ ಕಾರ್ಯಕರ್ತ ಎಂದು ಅವನ ಫೋಟೋ ಹಾಕಿ ಬಿಜೆಪಿ ನಾಯಕರ ಕಾಲೆಳೆದಿದ್ದಾರೆ. ನಮ್ಮ ಅವಧಿಯಲ್ಲಿ ಗಾಂಜಾ, ಇಸ್ಪಿಟ್ ಕ್ಲಬ್ ಸೇರಿದಂತೆ ಅಕ್ರಮ ದಂಧೆಗಳಿಗೆ ಬ್ರೇಕ್ ಹಾಕಿದ್ದೆವು. ಆದರೆ ಬಿಜೆಪಿ ಸರ್ಕಾರ ಬರುತ್ತಿದ್ದಂತೆ ಅಕ್ರಮ ದಂಧೆಗಳ ಕೇಂದ್ರವಾಗಿ ಕಲಬುರಗಿ ಜಿಲ್ಲೆ ಮಾರ್ಪಟ್ಟಿದೆ ಎಂದು ವ್ಯಕ್ತಪಡಿಸಿದ್ದಾರೆ.
ಇನ್ನೊಂದು ಟ್ವೀಟ್ ನಲ್ಲಿ, ಬಿಜೆಪಿಯವರೇ ನಿಮ್ಮದೇ ಸರ್ಕಾರವಿದೆ. ನಿಮ್ಮ ಬಳಿ ಎಲ್ಲ ಸಂಪನ್ಮೂಲಗಳು ಇವೆ. ಅವುಗಳನ್ನು ಉಪಯೋಗಿಸಿಕೊಂಡು ಕಲಬುರಗಿಯಲ್ಲಿ ಅಕ್ರಮವಾಗಿ ಸ್ಥಾಪಿಸಿರುವ ಜೂಜು ಅಡ್ಡೆಗಳನ್ನು ಕಂಡುಹಿಡಿಯಿರಿ. ಈ ರೀತಿಯ ಕ್ಲಬ್ ಗಳನ್ನು ನಡೆಸಲು ಯಾರೂ ಅನುಮತಿ ಕೊಟ್ಟಿದ್ದಾರೆ ಎಂಬುದನ್ನು ಕಂಡುಹಿಡಿಯಿರಿ. ಯಾವು ರಾಜಕೀಯ ನಾಯಕ ರಕ್ಷಣೆಯಿಂದ ಇವರು ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಎಂದು ಸವಾಲ್ ಹಾಕಿದ್ದಾರೆ.
https://youtu.be/BiO5BzHk1Oc








