ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ ಮಾಫಿಯಾದ ಆರೋಪಿಗಳಾಗಿರುವ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿಗೆ ಇಂದೂ ಕೂಡ ರಿಲೀಫ್ ಸಿಕ್ಕಿಲ್ಲ.
ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್ ಮುಂದೆ ರಾಗಿಣಿ, ಸಂಜನಾ ಸೇರಿದಂತೆ 6 ಆರೋಪಿಗಳನ್ನು ಸಿಸಿಬಿ ಪೊಲೀಸರು ಹಾಜರುಪಡಿಸಿದರು.
ಸುಮಾರು 2 ಗಂಟೆಗಳ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿಗಳನ್ನು ಸೋಮವಾರದವರೆಗೆ(ಸೆ.14ರವರೆಗೆ) ಮೂರು ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ನೀಡಿ ಆದೇಶ ನೀಡಿದೆ.
ರಾಗಿಣಿ, ಸಂಜನಾ ಜತೆ ಜತೆಗೆ ಉಳಿದ ಆರೋಪಿಗಳಾದ ರಾಹುಲ್, ನಿಯಾಜ್, ಲೂಮ್ ಪೆಪ್ಪರ್ ಹಾಗೂ ರವಿಶಂಕರ್‍ನನ್ನು ಮತ್ತೆ ಮೂರು ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡಲಾಗಿದೆ.
ಡ್ರಗ್ಸ್ ಪ್ರಕರಣದ ತನಿಖೆಗೆ ಇಬ್ಬರೂ ನಟಿಯರು ಸಹಕಾರ ನೀಡುತ್ತಿಲ್ಲ. ಇವರು ಡ್ರಗ್ಸ್ ದಂಧೆಯಲ್ಲಿ ಶಾಮೀಲಾಗಿರುವ ಬಗ್ಗೆ ನಮ್ಮ ಬಳಿ ಸಾಕ್ಷ್ಯಗಳಿವೆ. ಡ್ರಗ್ ಟೆಸ್ಟ್‍ಗೂ ರಾಗಿಣಿ ಸಹಕಾರ ನೀಡಿಲ್ಲ. ಹೆಚ್ಚಿನ ತನಿಖೆಯ ಅಗತ್ಯವಿದೆ, ಹೀಗಾಗಿ ಅವರನ್ನು ಮತ್ತೆ 5 ದಿನ ಕಸ್ಟಡಿಗೆ ನೀಡುವಂತೆ ಸಿಸಿಬಿ ಪರ ವಕೀಲರು ಕೋರ್ಟ್‍ಗೆ ಮನವಿ ಮಾಡಿದ್ದಾರೆ.
ಆದರೆ, ವಿಚಾರಣೆ ನೆಪದಲ್ಲಿ ರಾಗಿಣಿ ಹಾಗೂ ಸಂಜನಾ ಅವರಿಗೆ ಕಿರುಕುಳ ನೀಡಲಾಗುತ್ತಿದೆ. ಸಿಸಿಬಿ ಬಳಿ ಯಾವುದೇ ಸಾಕ್ಷ್ಯಗಳಿಲ್ಲ. ಕೇವಲ ಅವರ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ ಎಂದು ರಾಗಿಣಿ, ಸಂಜನಾ ಪರ ವಕೀಲರು ವಾದಿಸಿದ್ದಾರೆ.
https://youtu.be/_st-YDZlTCE
ಎರಡೂ ಕಡೆಗಳ ವಾದ ಆಲಿಸಿದ ನ್ಯಾಯಾಧೀಶರು ರಾಗಿಣಿ, ಸಂಜನಾ ಸೇರಿದಂತೆ 6 ಆರೋಪಿಗಳನ್ನು ಸೋಮವಾರದವರೆಗೆ ಸಿಸಿಬಿ ಕಸ್ಟಡಿಗೆ ನೀಡುತ್ತಿರುವುದಾಗಿ ಪ್ರಕಟಿಸಿದರು.
ಮತ್ತೆ ರಂಪಾಟ ಮಾಡಿ ಡ್ರಗ್ಗಿಣಿಯರು..!
1ನೇ ಎಸಿಎಂಎಂ ಕೋರ್ಟ್ ರಾಗಿಣಿ ಹಾಗೂ ಸಮಜನಾಗೆ ಸೆ.14ರವರೆಗೆ ಸಿಸಿಬಿ ಕಸ್ಟಡಿಗೆ ವಿಸ್ತರಣೆ ಮಾಡುತ್ತಿದ್ದಂತೆ ರಂಪಾಟ ಮಾಡಿದ್ದಾರೆ.
https://youtu.be/BiO5BzHk1Oc
ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಂಜನಾ, ರಾಗಿಣಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಇಬ್ಬರನ್ನೂ ಲ್ಯಾಪ್‍ಟಾಪ್ ಮುಂದೆ ಸಿಸಿಬಿ ಪೊಲೀಸರು ಕೂರಿಸಿದ್ದರು. ನ್ಯಾಯಾಧೀಶರು ಕಸ್ಟಡಿ ವಿಸ್ತರಣೆ ಮಾಡುವುದಾಗಿ ಆದೇಶ ನೀಡುತ್ತಿದ್ದಂತೆ ರಾಗಿಣಿ, ಸಂಜನಾ ಕಿರುಚಾಡಲು ಶುರು ಮಾಡಿ ಆಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.








