2020-21 ಸಾಲಿನ ಪ್ರಥಮ ವರ್ಷದ ಪದವಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (KSOU)ದಲ್ಲಿ ಪ್ರವೇಶಾತಿ ಪ್ರಾರಂಭ
ಮೈಸೂರು, ಸೆಪ್ಟೆಂಬರ್13: ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ರಾಜ್ಯದಲ್ಲಿ ದೂರ ಶಿಕ್ಷಣ ನೀಡುವ ಏಕ ಮಾತ್ರ ವಿಶ್ವವಿದ್ಯಾನಿಲಯವಾಗಿರುತ್ತದೆ. ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿನ ಶಿಕ್ಷಣ ಕ್ರಮಗಳಿಗೆ UGC 2018-19 ರಿಂದ 2022-23 ರವರೆಗೆ ಮಾನ್ಯತೆ ನೀಡಿರುತ್ತದೆ.
2020-21 ನೇ (ಜುಲೈ ಆವೃತ್ತಿ) ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ಪದವಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (KSOU)ದಲ್ಲಿ ಪ್ರವೇಶಾತಿ ಪ್ರಾರಂಭವಾಗಿದೆ.
B.A, B.Com, B.Lib.I.Sc, M.Lib.I.Sc, M.Com, M.A, (ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಇತಿಹಾಸ, ಪ್ರಾಚೀನ ಇತಿಹಾಸ ಹಾಗೂ ಪುರಾತತ್ವ ಅಧ್ಯಯನ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಸಾರ್ವಜನಿಕ ಆಡಳಿತ, ಪತ್ರಿಕೋದ್ಯಮ), MBA, M.Sc.(Biotechnology, chemistry, Biochemistry, Clinical Nutrition & Dietetics, Environmental Science, Computer Science, Geography, Information Science, Mathematics,Microbiology, Physics, Psychology), Certificate (Kannada,Panchayat Raj System, Food & Nutrition), Diploma (Kannada, Journalism, Nutrition and Health Education, Information Science, Computer Application) P.G. Diploma (English,Communicative English, Journalism and Mass Communication, Kuvempu Sathithya, Business Law, Human Resource Management, Financial Management, Business Administration, Marketing Management, Ambedkar Studies, Nutrition and Dietetics, Information Science,Computer Application) ಕೋರ್ಸ್ ಗಳಿಗೆ ಪ್ರವೇಶಾತಿ ಪ್ರಾರಂಭವಾಗಿದೆ.
ಮಹಿಳಾ ವಿದ್ಯಾರ್ಥಿಗಳು ಬಿಪಿಎಲ್ ( BPL)ಕಾರ್ಡ್ ಅನ್ನು ಹೊಂದಿದ್ದರೆ, ಬೋಧನ ಶುಲ್ಕದಲ್ಲಿ ಶೇಕಡಾ 25% ವಿನಾಯಿತಿ ನೀಡಲಾಗುತ್ತದೆ. ದಂಡ ಶುಲ್ಕವಿಲ್ಲದೆ ಅಕ್ಟೋಬರ್ 10, ರೂ. 100/- ದಂಡ ಶುಲ್ಕದೊಂದಿಗೆ ಅಕ್ಟೋಬರ್ 20, ರೂ. 200/- ದಂಡ ಶುಲ್ಕದೊಂದಿಗೆ ಅಕ್ಟೋಬರ್ 29ರ ವರೆಗೆ ಅವಕಾಶ ನೀಡಲಾಗಿದೆ. ಬಿ.ಎಡ್ ಕೋರ್ಸ್ ಗೆ ಸಿಇಟಿ ಮುಖಾಂತರ ಪ್ರವೇಶಾತಿ ನಡೆಯಲಿದೆ.
ಸರ್ಕಾರಿ ರಜಾ ದಿನಗಳಲ್ಲಿ ಸಹ ಕೇಂದ್ರ ಕಛೇರಿ ಮತ್ತು ಪ್ರಾದೇಶಿಕ ಕೇಂದ್ರಗಳು ಪ್ರವೇಶಾತಿಗಾಗಿ ಕಾರ್ಯ ನಿರ್ವಹಿಸುತ್ತವೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ – ಡಾ. ಲೋಕೇಶ ಆರ್ , ಪ್ರಾದೇಶಿಕ ನಿರ್ದೇಶಕರು, ಕರಾಮುವಿ ಮಹಿಳಾ ಪ್ರಾದೇಶಿಕ ಕೇಂದ್ರ, 13ನೇ ಅಡ್ಡ ರಸ್ತೆ, 4ನೇ ಮುಖ್ಯ ರಸ್ತೆ, ಮಲ್ಲೇಶ್ವರಂ, ಬೆಂಗಳೂರು.
☎080-23448811. 📱9844506629
Email ID: rdwrcksou@gmail.com
www.ksoumysuru.ac.in








