ಹುಬ್ಬಳ್ಳಿ : ಡ್ರಗ್ಸ್ ಮಾಫಿಯಾ ಪ್ರಕರಣದಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಇಂದು ಹುಬ್ಬಳ್ಳಿಯ ಕಾಂಗ್ರೆಸ್ ಮುಖಂಡ ಗಿರೀಶ್ ಗದಿಗೆಪ್ಪಗೌಡ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಟಿ ರಾಗಿಣಿ ದ್ವಿವೇದಿ ಮೊಬೈಲ್ ನಲ್ಲಿ ಗಿರೀಶ್ ಗದಿಗೆಪ್ಪಗೌಡರ್ ಫೋಟೋ ಲಭ್ಯವಾದ ಹಿನ್ನೆಲೆ ಸಿಸಿಬಿ ಪೊಲೀಸರು ಗಿರೀಶ್ ಅವರನ್ನ ವಶಕ್ಕೆ ಪಡೆದುಕೊಂಡಿದೆ. ರಾಗಿಣಿ ಮತ್ತು ಗಿರೀಶ್ ಜೊತೆಯಾಗಿ ಗೋವಾಕ್ಕೆ ತೆರಳಿದ್ದು, ರಾಗಿಣಿ ಜೊತೆ ಗಿರೀಶ್ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ನಟಿಯ ಬಂಧನವಾಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದ ರಾಗಿಣಿ ಜೊತೆಗಿನ ಫೋಟೋಗಳನ್ನ ಡಿಲೀಟ್ ಮಾಡಿಕೊಂಡಿದ್ದರು.
ಗಿರೀಶ್ ಗೋವಾದಲ್ಲಿ ಕ್ಯಾಸಿನೋ ಟೇಬಲ್ ನ್ನು ಖರೀದಿದ್ದು, ಅಲ್ಲಿ ನಡೆಯುವ ಕ್ಯಾಸಿನೋ ಪಾರ್ಟಿಗೂ ರಾಗಿಣಿಗೂ ಲಿಂಕ್ ಇದೆ ಎಂದು ಹೇಳಲಾಗುತ್ತಿದೆ.
https://youtu.be/pDPQuy6Xvhk