ಮುಂಗಾರು ಅಧಿವೇಶನ ಪ್ರಾರಂಭದ ಬೆನ್ನಲ್ಲೇ ಷೇರು ಮಾರುಕಟ್ಟೆ ಶುಭಾರಂಭ
ಮುಂಬೈ, ಸೆಪ್ಟೆಂಬರ್14: ದೇಶೀಯ ಇಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಸೋಮವಾರದ ಆರಂಭಿಕ ವಹಿವಾಟಿನಲ್ಲಿಯೇ ಸೆನ್ಸೆಕ್ಸ್ 39,143 ಅಂಕಗಳೊಂದಿಗೆ ವಹಿವಾಟು ಆರಂಭಿಸಿದೆ. 30 ಷೇರುಗಳ ಬಿಎಸ್‌ಇ ಸೂಚ್ಯಂಕವು 340.10 ಪಾಯಿಂಟ್‌ಗಳು ಅಥವಾ 0.88 ರಷ್ಟು ಹೆಚ್ಚಳವಾಗಿ 39,194.65 ಕ್ಕೆ ವಹಿವಾಟು ನಡೆಸುತ್ತಿದೆ. ಎನ್‌ಎಸ್‌ಇ ನಿಫ್ಟಿ 89.15 ಪಾಯಿಂಟ್ ಅಥವಾ 0.78 ರಷ್ಟು ಏರಿಕೆ ಕಂಡು 11,553.60 ಕ್ಕೆ ತಲುಪಿದೆ.
ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಎಚ್‌ಸಿಎಲ್ ಟೆಕ್ ಶೇ 5 ರಷ್ಟು ಏರಿಕೆ ಕಂಡಿದ್ದು, ಟೆಕ್ ಮಹೀಂದ್ರಾ, ಎಚ್‌ಡಿಎಫ್‌ಸಿ ಬ್ಯಾಂಕ್ & ಲೈಫ್, ರಿಲಯನ್ಸ್ ಇಂಡಸ್ಟ್ರೀಸ್, ಟಿಸಿಎಸ್, ಎಸ್‌ಬಿಐ ಮತ್ತು ಇಂಡಸ್ಇಂಡ್ ಬ್ಯಾಂಕ್ ನಂತರದ ಸ್ಥಾನದಲ್ಲಿದೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು 1,175 ರೂ.ಗಳ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ವಿನಿಮಯ ದತ್ತಾಂಶವು ತೋರಿಸಿದೆ. ಕಳೆದ ವಾರದಲ್ಲಿ ಭಾರಿ ಏರಿಳಿತ ಕಂಡಿದ್ದ ದೇಶೀಯ ಷೇರುಗಳು ಜಾಗತಿಕ ಮಾರುಕಟ್ಟೆಯ ಸಕಾರಾತ್ಮಕ ಸೂಚನೆಗಳಿಂದ ಈ ವಾರದಲ್ಲಿ ಇನ್ನಷ್ಟು ಏರಿಕೆಯ ನಿರೀಕ್ಷೆಯನ್ನು ಹೊಂದಿದೆ.
ಜೈವಿಕ ಔಷಧೀಯ ದೈತ್ಯ ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯವು ಶನಿವಾರ ಔಷಧಿಗಳ ಆರೋಗ್ಯ ನಿಯಂತ್ರಣ ಪ್ರಾಧಿಕಾರದ ಅನುಮೋದನೆಯ ಬಳಿಕ ಯುಕೆಯಲ್ಲಿ ತಮ್ಮ ಕೊರೋನವೈರಸ್ ಲಸಿಕೆಗಾಗಿ ಪ್ರಯೋಗಗಳನ್ನು ಪುನರಾರಂಭಿಸಿದ ನಂತರ ಶಾಂಘೈ, ಹಾಂಗ್ ಕಾಂಗ್, ಸಿಯೋಲ್ ಮತ್ತು ಟೋಕಿಯೊದಲ್ಲಿನ ಬೋರ್ಸ್‌ಗಳು ಮಧ್ಯ ದಿನದ ವ್ಯವಹಾರಗಳಲ್ಲಿ ಲಾಭ ಗಳಿಸುತ್ತಿವೆ.
ಕೇಂದ್ರ ಸರಕಾರದ ಆರ್ಥಿಕ ಸುಧಾರಣೆ ಕ್ರಮಗಳು ಮತ್ತು ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಿರುವ ಕಾರಣ ಕೇಂದ್ರ ಸರಕಾರ ಶೀಘ್ರದಲ್ಲೇ ಇನ್ನಷ್ಟು ಪ್ರಮುಖ ನಿರ್ಧಾರಗಳ ಕೈಗೊಳ್ಳುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಯಲ್ಲಿ ಉತ್ಸಾಹದ ವಾತಾವರಣ ಕಂಡುಬಂದಿದೆ.