ಹುಬ್ಬಳ್ಳಿ : ಕ್ಯಾಸಿನೋಗಳಿಗೆ ಹೋಗುವುದು ತಪ್ಪಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿ, ಸಿದ್ದರಾಮಯ್ಯನವರು ಜವಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ ಮಾತನಾಡಬಾರದು ಎಂದು ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶೆಟ್ಟರ್, ಕ್ಯಾಸಿನೊ ಎನ್ನುವುದು ಇಸ್ಪೀಟ್ ಅಡ್ಡೆ ಇದ್ದ ಹಾಗೆ. ಇಸ್ಪೀಟ್ ಅಡ್ಡೆಗಳಿಗೆ ಹೋಗುವುದು ತಪ್ಪಿಲ್ಲ ಎನ್ನುವುದು ಸಿದ್ದರಾಮಯ್ಯನವರ ಮಾತು ಯುವ ಜನಾಂಗದ ಮೇಲೆ ದುಷ್ಪರಿಣಾಮ ಬೀಳುತ್ತದೆ. ಸಿದ್ದರಾಮಯ್ಯನವರು ಜವಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ ಮಾತನಾಡಬಾರದು, ತಮ್ಮ ಶಾಸಕರನ್ನ ರಕ್ಷಣೆ ಮಾಡಲು ಈ ರೀತಿಯ ಹೇಳಿಕೆಯನ್ನು ಕೊಡಬಾರದು ಎಂದರು.
ಇದೇ ವೇಳೆ ತಮ್ಮ ದೆಹಲಿ ಭೇಟಿ ಬಗ್ಗೆ ಮಾತನಾಡಿದ ಶೆಟ್ಟರ್, ನನ್ನ ಇಲಾಖೆಯ ಬಗ್ಗೆ ಚರ್ಚೆ ಮಾಡಲು ನಾನು ದೆಹಲಿಗೆ ಹೋಗಿದ್ದೆ. ರಾಜ್ಯಪಾಲರನ್ನು ಭೇಟಿಯಾಗಿದ್ದೇನೆ ಹೊರತು ಬೇರೆ ಏನು ಇಲ್ಲ. ಮಾಧ್ಯಮದವರು ಏನೇನೂ ಕಲ್ಪಿಸಬೇಡಿ. ದೆಹಲಿ ಭೇಟಿ ವೇಳೆ ನೀತಿ ಆಯೋಗ ಮತ್ತು ಅಲ್ಲಿಯ ಪ್ರಮುಖ ನಾಯಕರನ್ನು ಭೇಟಿ ಮಾಡಿ ಬಂದಿದ್ದೇನೆ. ಮಂತ್ರಿಗಳು ದೆಹಲಿಗೆ ಹೋಗುವುದು ಸಾಮಾನ್ಯ. ಇದಕ್ಕೆ ಬೇರೆ ಅರ್ಥ ಕಲ್ಪಿಸಬಾರದು. ಕುಮಾರಸ್ವಾಮಿಯವರು ಸಿ.ಎಂ ಅವರನ್ನು ಭೇಟಿ ಮಾಡಿದ್ದು ತಮ್ಮ ಕ್ಷೇತ್ರದ ಕೆಲಸಕ್ಕಾಗಿ, ಬೇರೆ ಏನು ಇಲ್ಲ ಎಂದರು.
https://youtu.be/TpNkhtiYjNs?list=UUJKHM6z4CpcN_F-SuK2wPDw