ಬೆಂಗಳೂರು: ಸ್ಯಾಮಡಲ್ ವುಡ್ ಡ್ರಗ್ಸ್ ಪ್ರಕರಣ ಬಗೆದಷ್ಟು ದೊಡ್ಡದಾಗುತ್ತಿದೆ. ದಿನೇ ದಿನೇ ಹೊಸ ಹೊಸ ಮಾಹಿತಿಗಳು ಬಹಿರಂಗವಾಗುತ್ತಿದೆ. ಈಗಾಗಲೇ ಇಬ್ಬರು ನಟಿಯರಾದ ಸಂಜನಾ ಹಾಗೂ ರಾಗಿಣಿಯನ್ನೂ ಬಂಧಿಸಲಾಗಿದೆ.
ಇನ್ನೂ ಹಲವು ತಾರೆಯರ ಹೆಸರು ಈ ಪ್ರಕರಣದಲ್ಲಿ ಕೇಳಿಬರುತ್ತಿದ್ದು, ಇದೀಗ ದಿಗಂತ್ ಹಾಗೂ ಐಂದ್ರತಾಗೂ ಸಂಕಷ್ಟ ಎದುರಾಗಿದೆ. ನಟ ದಿಗಂತ್ ಹಾಗೂ ನಟಿ ಐಂದ್ರಿತಾ ರೈಗೆ ಸಿಸಿಬಿ ನೋಟಿಸ್ ನೀಡಿದೆ. 
ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಬನ್ನಿ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಇನ್ನೂ ರಾಗಿಣಿಗೆ ಐಂದ್ರಿತಾ ಆಪ್ತೆಯಾಗಿದ್ರು.. ಹೀಗಾಗಿ ರಾಗಿಣಿ ಜೊತೆಗಿನ ಆತ್ಮೀಯತೆಯೇ ಐಂದ್ರಿತಾಗೆ ಮುಳುವಾಯ್ತಾ ಎಂಬ ಮಾತುಗಳು ಕೇಳಿಬರ್ತಿವೆ.
ನಾಳೆ ವಿಚಾರಣೆಗೆ ಹಾಜರಾಗುವಂತೆ ದಿಗಂತ್ ಹಾಗೂ ಐಂದ್ರತಾ ದಂಪತಿಗೆ ಸಿಸಿಬಿ ಸೂಚಿಸಿದೆ. 








