ಇಂದು ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಜನ್ಮ ದಿನ ಹಿನ್ನೆಲೆ ಅನೇಕ ನಟರು, ಚಿತ್ರರಂಗದವರು, ಅಭಿಮಾನಿಗಳು ವಿಷ್ಣುದಾದನಿಗೆ ಶುಭುಕೋರಿದ್ದಾರೆ. ದಾದನ 70ನೇ ಜನ್ಮದಿನಕ್ಕೆ ಅನೇಕ ಸ್ಯಾಂಡಲ್ ವುಡ್ ನಟರು ಹಾಗೂ ಜನಪ್ರತಿನಿಧಿಗಳು ಸಹ ಸಾಮಾಜಿಕ ಜಾಲತಾಣದ ಮೂಲಕ ವಿಷ್ ಮಾಡಿದ್ದಾರೆ.
ನವರಸನಾಯಕ ಜಗ್ಗೇಶ್
ನವರಸನಾಯಕ ಜಗ್ಗೇಶ್ ಅವರು ಟ್ವೀಟ್ ಮೂಲಕ ವಿಷ್ಣುವರ್ಧನ್ ಅವರ ಬರ್ತ್ ಡೇ ಗೆ ವಿಶ್ ಮಾಡಿದ್ದಾರೆ. “ ಇದ್ದರು ಗೆದ್ದರು ಸಂತೋಷ ಹಂಚಿದರು ನೆನಪಲ್ಲಿ ಉಳಿದು ಹೋದರು… ಎಲ್ಲರಿಗು ಸಾವುಂಟು ಮರೆವುಂಟು ಸಾವಿನ ನಂತರ ಮರೆಯಲಾಗದ ನಿತ್ಯನು ಒಬ್ಬನೆ ಕಲೆಗಾರ…!! ಹುಟ್ಟುಹಬ್ಬದ ಶುಭಾಶಯಗಳು ಕನ್ನಡದ ಮರೆಯದ ಮಾಣಿಕ್ಯನಿಗೆ..” ಎಂದು ಬೆರೆದುಕೊಂಡಿದ್ದಾರೆ.
ಸಚಿವ ಡಾ. ಕೆ. ಸುಧಾಕರ್
ಸಚಿವ ಕೆ ಸುಧಾಕರ್ ಅವರು ಸಹ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೊಸ್ಟ್ ಮಾಡುವ ಮೂಲಕ ದಾದನಿಗೆ ವಿಷ್ ಮಾಡಿದ್ದಾರೆ. “ ಕನ್ನಡ ಚಿತ್ರರಂಗದ ದಿಗ್ಗಜ ನಟ. ಅಭಿನಯ ಭಾರ್ಗವ , ಸಾಹಸಿಂಹ ಡಾ. ವಿಷ್ಣುವರ್ಧನ್ ರವರ 70ನೇ ಜನ್ಮದಿನದಂದು ಅವರಿಗೆ ಬಾವಪೂರ್ಣ ನಮನಗಳು. ತಮ್ಮ ಹೃದಯವಂತಿಕೆ ಮತ್ತು ಕಲಾಸೇವೆಯಿಂದ ಡಾ. ವಿಷ್ಣುವರ್ಧನ್ ಅವರು ಕರುನಾಡಿನ ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ “ ಎಂದು ಬರೆದುಕೊಳ್ಳುವ ಮೂಲಕ ಶುಭಕೋರಿದ್ದಾರೆ.
ಡಾಲಿ ಧನಂಜಯ್
ಇನ್ನೂ “ನಮ್ಮಲ್ಲಿ ನೀವು ಎಂದಿಗೂ ಶಾಶ್ವತ” ಎಂದು ಟ್ವೀಟ್ ಮಾಡುವ ಮೂಲಕ ಡಾಲಿ ಧನಂಜಯ್ ವಿಷ್ಣುವರ್ಧನ್ ಅವರಿಗೆ ವಿಷ್ ಮಾಡಿದ್ದಾರೆ.
ಸುಮಲತಾ ಅಂಬರೀಷ್
ಇನ್ನೂ ವಿಷ್ನುವರ್ಧನ್ ಅವರ ಕುಚುಕು ಗೆಳೆಯ ದಿವಂಗತ ಸ್ಯಾಮಡಲ್ ವುಡ್ ನ ದಿಗ್ಗಜ ಅಂಬರೀಷ್ ಅವರ ಪತ್ನಿ ಹಾಗೂ ಸಂಸದೆ ಸುಮಲತಾ ಅವರು ಸಸಹ ವಿಷ್ಣುವರ್ಧನ್ ಅವರಿಗೆ ವಿಷ್ ಮಾಡಿದ್ದಾರೆ. “ ವಿಷ್ಣು ಅಂದರೆ ಸೇವೆ, ಅವರೊಂದಿಗೆ ಕಳೆದ ಪ್ರತಿಯೊಂದು ಕ್ಷಣ ಸಂತೋಷದ ಅವಿಸ್ಮರಣೀಯ ಅನುಭವ, ನಿಷ್ಕಲ್ಮಶ, ಮಗುವಿನಂತಹ ಮನಸ್ಸು ಅವರದ್ದು, ಅಂಬಿಗೆ ವಿಷ್ಣು ಕೇವಲ ಸ್ನೇಹಿತರಾಗಿರಲಿಲ್ಲ, ಅವರ ಪ್ರಾನವೇ ಆಗಿದ್ದರು. ಅವರಿಬ್ಬರೂ ಸದಾ ಅಮರ, ನಮ್ಮ ಪ್ರೀತಿಯ ವಿಷ್ಣುವಿಗೆ ಹುಟ್ಟು ಹಬ್ಬದ ಶುಭಾಷಯಗಳು “ ಎಂದಿದ್ದಾರೆ.