ಕೊರೋನವೈರಸ್ ನಂತರ, ಚೀನಾದಲ್ಲಿ ಈಗ ಬ್ರೂಸೆಲೋಸಿಸ್ ಸೋಂಕು – 3300 ಪ್ರಕರಣ ಪತ್ತೆ
ಬೀಜಿಂಗ್, ಸೆಪ್ಟೆಂಬರ್19: ಕೊರೋನವೈರಸ್ ನಂತರ, ಚೀನಾದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಚೀನಾದ ಈಶಾನ್ಯ ಪ್ರದೇಶಗಳಲ್ಲಿ ಬ್ಯಾಕ್ಟೀರಿಯಾದ ಸೋಂಕಿನಿಂದ ಬಳಲುತ್ತಿರುವುದು ಕಂಡುಬಂದಿದೆ. ಬ್ಯಾಕ್ಟೀರಿಯಾದ ಲಸಿಕೆ ಉತ್ಪಾದಿಸುವ ಜೈವಿಕ ಔಷಧೀಯ ಘಟಕದಲ್ಲಿ ಸೋರಿಕೆಯಾದ ನಂತರ ಸೋಂಕಿನ ಹರಡುವಿಕೆ ಪ್ರಾರಂಭವಾಗಿದೆ. 30 ಲಕ್ಷ ಜನಸಂಖ್ಯೆಯಲ್ಲಿ ಈವರೆಗೆ ಸುಮಾರು 3,300 ಜನರು ಈಗಾಗಲೇ ಬ್ರೂಸೆಲೋಸಿಸ್ ಎಂಬ ಕಾಯಿಲೆಯಿಂದ ಸೋಂಕಿಗೆ ಒಳಗಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಬ್ಯಾಕ್ಟೀರಿಯಾದ ಸೋಂಕು ಬ್ರೂಸೆಲೋಸಿಸ್ ಹೇಗೆ ಹರಡುತ್ತದೆ
ಮಾಲ್ಟಾ ಅಥವಾ ಮೆಡಿಟರೇನಿಯನ್ ಜ್ವರ ಎಂದೂ ಕರೆಯಲ್ಪಡುವ ಈ ವೈರಸ್ ಪ್ರಾಣಿಗಳಿಂದ ಹರಡುತ್ತದೆ.
ಜ್ವರ, ತಲೆನೋವು, ಕೀಲುಗಳಲ್ಲಿ ನೋವು ಇತ್ಯಾದಿ ಬ್ರೂಸೆಲೋಸಿಸ್ ನ ಕೆಲವು ಲಕ್ಷಣಗಳಾಗಿವೆ.
ಇದು ಮಾನವನಿಂದ ಮಾನವನಿಗೆ ಹರಡುತ್ತದೆಯೇ?
ಚೀನಾದ ಅಧಿಕಾರಿಗಳ ಪ್ರಕಾರ, ಸೋಂಕು ಮನುಷ್ಯನಿಂದ ಇನ್ನೊಬ್ಬರಿಗೆ ಹರಡುವುದಿಲ್ಲ. ಇಲ್ಲಿಯವರೆಗೆ, 22,000 ಕ್ಕೂ ಹೆಚ್ಚು ಜನರನ್ನು ಸೋಂಕು ತಪಾಸಣೆಗಾಗಿ ಪರೀಕ್ಷಿಸಲಾಗಿದೆ, ಅದರಲ್ಲಿ 3,300 ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ.








