2018ಲ್ಲೇ ಮತಾಂತರ, ಮದುವೆಗಾಗಿ ಆದ್ರಾ ಮತಾಂತರ..?
ನನಗೆ ಮದುವೆ ಆಗಿಲ್ಲ ಎಂದು ಡ್ರಾಮಾ ಮಾಡಿದ್ದ ಸಂಜನಾ..
ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುದ್ದೆ ಮುರಿಯುತ್ತಿರುವ ನಟಿ ಸಂಜನಾ ಗಲ್ರಾನಿ ನೌಟಂಕಿ ಆಟಗಳು ಒಂದೊಂದಾಗಿ ಹೊರಬರುತ್ತಿವೆ.
ಸಂಜನಾ ಗಲ್ರಾನಿ ಹಿಂದೂ ಧರ್ಮದಿಂದ ಇಸ್ಲಾಂ ಧರ್ಮಕ್ಕೆ 2018ರಲ್ಲೇ ಮತಾಂತರಗೊಂಡಿರುವ ಸಂಗತಿ ಬಹಿರಂಗವಾಗಿದೆ.
ಬೆಂಗಳೂರಿನ ಟ್ಯಾನರಿ ರಸ್ತೆಯಲ್ಲಿರುವ ದಾರುಲ್ ಉಲೂಮ್ ಶಾ ವಲಿವುಲ್ಲಾ ಮಸೀದಿಯಲ್ಲಿ 2018ರ ಅಕ್ಟೋಬರ್ 9ರಂದು ಸಂಜನಾ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ತಾನು ಸ್ವಇಚ್ಛೆಯಿಂದ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುತ್ತಿದ್ದೇನೆ. ಇದಕ್ಕೆ ಯಾರ ಒತ್ತಡವೂ ಇಲ್ಲ ಎಂದು ಕೋರ್ಟ್ ಅಫಿಡವಿಟ್ ಸಲ್ಲಿಸುವ ಮೂಲಕ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.
ಸಂಜನಾ ಗಲ್ರಾನಿ ಮೂಲ ಹೆಸರು ಅರ್ಚನಾ ಗಲ್ರಾನಿ. ಚಿತ್ರರಂಗಕ್ಕೆ ಪ್ರವೇಶ ಮಾಡಿದ ನಂತರ ತಮ್ಮ ಹೆಸರನ್ನು ಸಂಜನಾ ಗಲ್ರಾನಿ ಎಂದು ಬದಲಾಯಿಸಿಕೊಂಡಿದ್ದಾರೆ. ಇದೀಗ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಬಳಿಕ ಸಂಜನಾ ಗಲ್ರಾನಿ ಹೆಸರನ್ನು ಮಾಹಿರಾ ಎಂದು ಬದಲಾಯಿಸಲಾಗಿದೆ.
ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಸಂಜನಾ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿರುವ ವಿಚಾರವನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಮಾಹಿತಿಯ ಬೆನ್ನು ಹತ್ತಿದಾಗ ಸಂಜನಾ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ದಾಖಲೆಗಳು ಲಭ್ಯವಾಗಿವೆ. ಹಾಗಾದರೆ ಸಂಜನಾ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡ ವಿಚಾರವನ್ನು ಮುಚ್ಚಿಟ್ಟಿದ್ದೇಕೆ ಎಂಬ ಪ್ರಶ್ನೆ ಎದುರಾಗಿದೆ.

2018ರ ಅಕ್ಟೋಬರ್ 9ರಂದೇ ಸಂಜನಾ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಮತಾಂತರಗೊಂಡ ಬಳಿಕ ವೈದ್ಯ ಡಾ. ಅಜೀಜ್ ಪಾಷಾ ಜೊತೆ ಮದುವೆ ಆಗಿದ್ದಾರೆ ಎನ್ನಲಾಗಿದೆ. ಡಾ.ಅಜೀಜ್ ಪಾಷಾ ಪರಿಚಯವಾದ ಬಳಿಕ ಪ್ರೇಮಪಾಶಕ್ಕೆ ಸಿಲುಕಿದ ಸಂಜನಾ ಮದುವೆ ಆಗಲು ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರ ಆಗಿದ್ದಾರೆ ಎನ್ನಲಾಗಿದೆ.
ಮದುವೆಯಾದ ಬಳಿಕ ವೈದ್ಯ ಡಾ.ಅಜೀಜ್ ಪಾಷಾ ಜತೆ ಸಂಜನಾ ವಾಸವಿದ್ದರು. ಆದರೆ ಸಂಜನಾ, ಅಜೀಜ್ ಜತೆ ವೈಮನಸ್ಸು ಉಂಟಾದ ಕಾರಣ 7 ತಿಂಗಳ ಹಿಂದೆಯಷ್ಟೇ ದೂರವಾಗಿದ್ದರು. ಹೀಗಾಗಿಯೇ ತಮ್ಮ ಮದುವೆ ಹಾಗೂ ಮತಾಂತರಗೊಂಡ ವಿಚಾರವನ್ನು ಮುಚ್ಚಿಟ್ಟದ್ದರು ಎನ್ನಲಾಗಿದೆ.
ಸಿಸಿಬಿ ಪೊಲೀಸರಿಂದ ಅರೆಸ್ಟ್ ಆಗುವ ಎರಡು ದಿನಗಳ ಹಿಂದಷ್ಟೇ ನಾನಿನ್ನೂ ಮದುವೆಯಾಗಿಲ್ಲ. ನನಗೆ 31 ವರ್ಷ, ಪ್ರಶಾಂತ್ ಸಂಬರಗಿ ನನ್ನ ಹೆಸರು ಹಾಳು ಮಾಡುತ್ತಿದ್ದಾನೆ. ನನ್ನ ಹೆಸರು ಹಾಳಾದ್ರೆ ಯಾರು ನನ್ನನ್ನು ಮದುವೆಯಾಗುತ್ತಾರೆ ಎಂದು ಸಂಜನಾ ಕಣ್ಣೀರು ಹಾಕಿದ್ದರು. ಹಾಗಾದರೆ ಅಂದು ಸಂಜನಾ ಮಾಡಿದ್ದು ಡ್ರಾಮಾನಾ ಎಂಬ ಪ್ರಶ್ನೆ ಎದುರಾಗಿದೆ.

2018ರಲ್ಲಿ ತೆಲುಗು ಚಾಲೆನ್ವೊಂದರ ಸಂದರ್ಶನದಲ್ಲಿ ವೈದ್ಯರೊಬ್ಬರನ್ನು ಪ್ರೀತಿಸುವುದಾಗಿ ಹೇಳಿದ್ದ ಸಂಜನಾ, ಆತ ನನ್ನ ಕುಟುಂಬದವರಿಗೂ ಪರಿಚಯವಿದೆ, ಆಸ್ಪತ್ರೆಗೆ ಹೋದಾಗ ಅವರ ಪರಿಚಯವಾಗಿತ್ತು. ಮೊದಲ ನೋಟದಲ್ಲೇ ಅವರ ಮೇಲೆ ಪ್ರೀತಿ ಮೂಡಿತ್ತು ಎಂದು ಸಂಜನಾ ಹೇಳಿದ್ದರು.
ಸಂಜನಾ ಸಿಸಿಬಿ ಅರೆಸ್ಟ್ ಆದ ಮಾರನೇ ದಿನವೇ ಆಕೆ ಡಾ.ಅಜೀಜ್ ಪಾಷಾ ಜತೆ ಮದುವೆಯಾಗಿದ್ದ ಫೋಟೋ ವೈರಲ್ ಆಗಿತ್ತು. ಮದುವೆ ಫೋಟೋ ವೈರಲ್ ಆಗುತ್ತಿದ್ದಂತೆ ಡಾ.ಅಜೀಜ್ ಪಾಷಾ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.








