ಇತ್ತೀಚೆಗಷ್ಟೇ ನಮ್ಮನೆಲ್ಲ ಅಗಲಿದ ನಟ ಚಿರು ಸರ್ಜಾ ಅವರ ಸಾವಿನ ದುಃಖದಿಂದ ಇನ್ನೂವರೆಗೂ ಕುಟುಂಬಸ್ಥರು ಹಾಗೂ ಅವರ ಅಭಿಮಾನಿಗಳು ಹೊರಬಂದಿಲ್ಲ. ಆದರೆ ಇದೀಗ ಅಭಿಮಾನಿಗಳಿಗೆ ಹಾಗೂ ಚಿರುಕುಟುಂದವರಿಗೆ ಗುಡ್ ನ್ಯೂಸ್ ಒಂದು ಸಿಕ್ಕಿದೆ. ಚಿರು ಸರ್ಜಾ ಅವರು ನಿಧನ ಹೊಂದಿದಾಗ ಮೇಘನಾ ಸುಂದರ್ ರಾಜ್ ಅದಾಗಲೇ 6 ತಿಂಗಳ ಗರ್ಭಿಣಿ ಆಗಿದ್ದರು. ಅಂತಹ ಪರಿಸ್ಥಿತಿಯಲ್ಲಿ ಪತಿಯನ್ನು ಕಳೆದುಕೊಂಡ ಮೇಘನಾ ಅವರು ಕಣ್ಣೀರಿಟ್ಟಿದ್ದ ದೃಷ್ಯ ನೆನೆಸಿಕೊಂಡರೆ ಎಂಥಹ ಕಟುಕರ ಮನಕಲುವಂತೆ ಮಾಡುತ್ತೆ. ಚಿರು ನಿಧನದ ಬಳಿಕ ನೋವಿನಲ್ಲೇ ಚಿರು ನೆನಪಿನಲ್ಲೇ ದಿನಗಳೆಯುತ್ತಿರುವ ಮೇಘನಾ ರಾಜ್ ಅವರು ಶೀಘ್ರವೇ ಮಗುವಿಗೆ ಜನ್ಮ ನೀಡಲಿದ್ದಾರೆ. ಈ ಮೂಲಕ ಮತ್ತೆ ಚಿರು ಕುಟುಂಬದಲ್ಲಿ ಸಂತಸ ಮನೆ ಮಾಡಲಿದ್ದು, ಚಿರು ಅಗಲಿಕೆಯ ನೋವು ಕೊಂಚ ಕಡಿಮೆಯಾಗಲಿದೆ.
ಅಕ್ಟೋಬರ್ ಮೊದಲ ವಾರ ಅಥವ 2ನೇ ವಾರದಲ್ಲಿ ಡೆಲಿವರಿ ಡೇಟ್ ನೀಡಲಾಗಿದ್ದು, ಶೀಘ್ರವೇ ಚಿರು ಮನೆಗೆ ಪುಟ್ಟ ಕಂದಮ್ಮ ಅಂದ್ರೆ ಜ್ಯೂನಿಯರ್ ಚಿರು ಆಗಮನವಾಗಲಿದೆ. ಇನ್ನೂ ಒಂದು ವಿಚಾರ ಎಂದ್ರೆ ಮೇಘನಾ ರಾಜ್ ಗೆ ಗಂಡು ಮಗುವಾಗಲಿದೆ ಎಂಬ ಚರ್ಚೆಗಳು ಪ್ರಾರಂಭವಾಗಿದೆ. ಅದಕ್ಕೆ ಕಾರಣವೂ ಇದೆ. ಇತ್ತೀಚೆಗಷ್ಟೇ ನೋವಿನಲ್ಲಿದ್ದ ಮೇಘನಾಗೆ ಸಮಾದಾನ ಮಾಡಲು, ಅವರ ಮನೆಗೆ ಹಿರಿಯ ನಟಿಯರಾದ ಮಾಳವಿಕ , ಶ್ರುತಿ, ಸುದಾರಣಿ ಟೀಂ ಹೋಗಿದ್ದರು. ಈ ವೇಳೆ ನಟಿಯರು ಮೇಘನಾ ಅವರ ಹಾವ ಭಾವ ದೇಹಾಕಾರ ಗಮನಿಸಿ ಗಂಡು ಮಗು ಆಗಬಹುದು ಎಂದು ಹೇಳಿದ್ದಾರೆ. ಚಿರು ನಿನ್ನನ್ನು ಬಿಟ್ಟು ಎಲ್ಲೂ ಹೋಗಿಲ್ಲ. ನಿನ್ನೊಂದಿಗೆ ಇದ್ದಾರೆ ಎಂದು ಸಮಾಧಾನಪಡಿಸಿ ಮೇಘನಾ ಮೊಗದಲ್ಲಿ ನಗು ಮೂಡಿಸಿದ್ದಾರೆ.








