ಕಳ್ಳತನಕ್ಕೆ ಯತ್ನಿಸಿರುವ ಖದೀಮರು ವಿವಿಧ ರೀತಿಗಳಲ್ಲಿ ವಿವಿಧ ಕಾರಣಗಳು ತಪ್ಪಿನಿಂದ ಸಿಕ್ಕಿಬಿದ್ದಿರುವ ಪ್ರಕರಣಗಳನ್ನ ನಾವು ನೋಡಿದ್ದೇವೆ. ಕಳ್ಳತನ ಮಾಡಲು ಹೋಗಿ ರೆಡ್ ಆಗಿ ಸಿಕ್ಕಿಬಿದ್ದಿರು ಖದೀಮರ ಬಗ್ಗೆ ಕೇಳಿದ್ದೇವೆ. ಆದ್ರೆ ಇಲ್ಲೊಬ್ಬ ಖದೀಮ ಕಳ್ಳತನ ಮಾಡಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆದ್ರೆ ಆತ ಸಿಕ್ಕಿಬಿದ್ದಿದ್ದು ಹೇಗೆ ಎಂದು ಕೇಳಿದ್ರೆ ವಿಚಿತ್ರ ಹಾಗೂ ಹಾಸ್ಯಾಸ್ಪದ ಅನ್ನಿಸುತ್ತೆ.
ಹೌದು..! ಮನೆಯೊಂದರಲ್ಲಿ ಕಳ್ಳತನ ಮಾಡಲು ನುಗ್ಗಿದ ಖದೀಮ ಆರಾಮಾಗಿ ನಿದ್ದೆ ಹೊಡೆದಿದ್ದಾನೆ. ಬಳಿಕ ಕಣ್ಬಿಟ್ಟು ನೋಡಿದಾಗ ಆತನ ಎದುರಿಗೆ ಪೊಲಿಸರು ಇದ್ದದ್ದನ್ನು ನೋಡಿ ಬೆಸ್ತು ಬಿದ್ದಿದ್ದಾನೆ. ಈ ಘಟನೆ ಆಂಧ್ರದ ಪೂರ್ವ ಗೋದಾವರಿಯಲ್ಲಿ ನಡೆದಿದೆ.
ಮುಂಜಾನೆ 4 ಗಂಟೆಗೆ ಮನೆಯ ಲಾಕ್ ಮುರಿದು ಒಳನುಸುಳಿದ್ದ ಖದೀಮ ಕೋಣೆಯೊಂದಕ್ಕೆ ಪ್ರವೇಶಿಸಿದ್ದ. ಈ ವೇಳೆ ಮನೆ ಮಾಲೀಕ ವೆಂಕಟರೆಡ್ಡಿ ನಿದ್ರೆಗೆ ಜಾರಿದ್ದರು. ಕಳ್ಳತನಕ್ಕೂ ಮುಂಚೆ ಈ ಖದೀಮ ಮನೆಯವರ ಎಲ್ಲಾ ಚಟುವಟಿಕೆಗಳ ಬಗ್ಗೆ ತಿಳಿದುಕೊಂಡಿದ್ದ. ಬಳಿಕ ಕಳ್ಳತನಕ್ಕೆ ನುಗ್ಗಿದ್ದ ಆಸಾಮಿ ಎಸಿಯ ತಣ್ಣನೆಯ ಗಾಳಿಗೆ ರಾಜನಂತೆ ನಿದ್ರಿಸಿದ್ದಾನೆ. ಇನ್ನೂ ಕಳ್ಳನ ಗೊರಕೆಯ ಶಬ್ಧ ಕೇಳಿ ಎಚ್ಚರಗೊಂಡ ಮನೆ ಮಾಲೀಕರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಗೋಕಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಖದೀಮನನ್ನ ವಶಕ್ಕೆ ಪಡೆಯಲಾಗಿದೆ.
fifa wolrd cup 2026- ಫಿಫಾ ವಿಶ್ವಕಪ್ನ ಮುಕುಟವಿಲ್ಲದ ಫುಟ್ಬಾಲ್ ಜಗತ್ತಿನ ಚಕ್ರವರ್ತಿಕ್ರಿಸ್ಟಿಯಾನೊ ರೊನಾಲ್ಡೊ… 🐍⚽🔥..!
ಫಿಫಾ ವಿಶ್ವಕಪ್ನ ಮುಕುಟವಿಲ್ಲದ ಫುಟ್ಬಾಲ್ ಜಗತ್ತಿನ ಚಕ್ರವರ್ತಿಕ್ರಿಸ್ಟಿಯಾನೊ ರೊನಾಲ್ಡೊ..! ಆ ಒಂದು ಸೋಲು..! ಆ ಒಂದು ಪಂದ್ಯ..! ತನ್ನ ಪಾಲಿನ ಫಿಫಾ ವಿಶ್ವಕಪ್ನ ಕೊನೆಯ ಪಂದ್ಯವಾಗಿರಲಿಲ್ಲ. ಅದು...








