ಇತ್ತೀಚೆಗಷ್ಟೇ ಅಂದ್ರೆ ಸೆ. 18 ರಂದು ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದ ರಿಯಲ್ ಸ್ಟಾರ್ ಉಪೇಂದ್ರ ಅವರ ಅಭಿಮಾನಿಗಳಿಗೆ ಇದೀಗ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಉಪ್ಪಿ ಅವರ ಬರ್ತ್ ಡೇ ಪ್ರಯುಕ್ತ ‘ಬುದ್ದಿವಂತನ’ ನಟನೆಯ ಹೊಸ ಚಿತ್ರ ಕಬ್ಜದ ಥೀಮ್ ಪೋಸ್ಟರ್ ರಿಲೀಸ್ ಮಾಡಿತ್ತು ಚಿತ್ರತಂಡ. ಇನ್ನೂ ಪೋಸ್ಟರ್ ರಿಲೀಸ್ ಆಗಿ ಈಗಾಗಲೇ ಉತ್100 ಕೋಟಿ ಸಿನೆಮಾಗೆ ಉಪ್ಪಿ ನಾಯಕ..!ತಮ ರೆಸ್ಪಾನ್ಸ್ ಪಡೆದುಕೊಳ್ತಿದೆ. ಇದರ ಬೆನ್ನಲ್ಲೇ ಉಪ್ಪಿ ಬರ್ತ್ ಡೇ ಪ್ರಯುಕ್ತ ಮತ್ತೊಂದು ಸುದ್ದಿ ಹೊರಬಿದ್ದಿದ್ದು, ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.
ಉಪೇಂದ್ರ ಅವರ ಮತ್ತೊಂದು ಹೊಸ ಚಿತ್ರ ಘೋಷಣೆಯಾಗಿದೆ. ಆದ್ರೆ ಚಿತ್ರ ಅನೌನ್ಸ್ ಆಗಿರೋದು ಬಿಟ್ರೆ ಮತ್ತೆ ಹೆಚ್ಚಾಗಿ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇನ್ನೂ ಈ ಚಿತ್ರಕ್ಕೆ ಟೈಟಲ್ ಕೂಡ ಫಿಕ್ಸ್ ಆಗಿಲ್ಲ. ಚಿತ್ರಕ್ಕೆ ಮಂಜು ಮಾಂಡವ್ಯ ಹಾಗೂ M ಚಂದ್ರಶೇಖರ್ ಅವರು ಬಂಡವಾಳ ಹೂಡುತ್ತಿದ್ದಾರೆ.
ಇನ್ನೂ ವಿಶೇಷ ಎಂದ್ರೆ ಈ ಚಿತ್ರಕ್ಕೆ ಬರೋಬ್ಬರಿ 100 ಕೋಟಿ ಬಜೆಟ್ ನಲ್ಲಿ ಮೂಡಿಬರಲಿದ್ದು, ಬಿಗ್ ಬಜೆಟ್ ಚಿತ್ರದ ಬಗ್ಗೆ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗಿದೆ. ಇನ್ನೂ ಕಬ್ಜ ಸೇರಿದಂತೆ ಇನ್ನೂ 3 – 4 ಚಿತ್ರಗಳಲ್ಲಿ ಬ್ಯುಸಿಯಾಗಿರುವ ಉಪೇಂದ್ರ ಅವರು ಇತ್ತೀಚೆಗಷ್ಟೇ ಮರಳಿ ಡೈರೆಕ್ಷನ್ ಗೆ ಬರುತ್ತಿರುವ ಬಗ್ಗೆ ಘೋಷಣೆ ಮಾಡಿದ್ದರು. ಇದೆಲ್ಲದರ ನಡುವೆ ಮತ್ತೊಂದು ಸಿನೆಮಾದಲ್ಲಿ ಉಪ್ಪಿ ಕಾಣಿಸಿಕೊಳ್ತಿರುವ ಅಭಿಮಾನಿಗಳ ಖುಷಿ ದುಪ್ಪಟ್ಟಾಗಿದೆ.