ಬೆಂಗಳೂರು : ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ತ್ಯಾಪೆ ಕೆಲಸ ಮಾಡಬೇಡಿ.
ವಿಚಾರಣೆಯನ್ನ ಕೇವಲ ನೆಪವಾಗಿ ಮಾಡಬೇಡಿ. ರಾಜಕೀಯ ಪಕ್ಷದ ಮಕ್ಕಳನ್ನ ವಿಚಾರಣೆಗೆ ಕರೆಸಿ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಒತ್ತಾಯಿಸಿದ್ದಾರೆ.
ಡ್ರಗ್ಸ್ ಮಾಫಿಯಾಗೆ ಸಂಬಂಧಿಸಿದಂತೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಇಂದ್ರಜಿತ್, ನನಗೆ ಗೊತ್ತಿರುವ ವಿಚಾರವನ್ನು ಸಿಸಿಬಿ ಮುಂದೆ ಹೇಳಿದ್ದೇನೆ.
ಈ ಮೂಲಕ ಇಡೀ ಕರ್ನಾಟಕಕ್ಕೆ, ವಿದ್ಯಾರ್ಥಿಗಳಿಗೆ, ಯುವಕರಿಗೆ ಡ್ರಗ್ಸ್ ಸೇವನೆ ಮಾಡುವುದು ತಪ್ಪು ಎಂಬ ಸಂದೇಶ ಹೋಗಿದೆ.
ಆದರೆ ನಾನು ಸಿಸಿಬಿಗೆ ಮಾಹಿತಿ ಕೊಟ್ಟ ನಂತರ ಆದ ಬೆಳವಣಿಗೆ ಅಷ್ಟು ನನಗೆ ಖುಷಿ, ಸಂತೋಷ ಕೊಟ್ಟಿಲ್ಲ.
ಏನು ಆಗಬೇಕಿತ್ತೋ ಅದು ಇನ್ನೂ ಹೆಚ್ಚಾಗಿ ಆಗಬೇಕಿತ್ತು. ನಮ್ಮ ಪೊಲೀಸರು ಕೆಲಸ ಮಾಡುತ್ತಿದ್ದರೂ ಎಲ್ಲೋ ಒಂದುಕಡೆ ಕೈ ಕಟ್ಟಿ ಹಾಕಿರುವಾಗಿದೆ ಎಂದು ಬೇಸರ ಹೊರಹಾಕಿದರು. ಹೊಸ ಸುದ್ದಿಗಳನ್ನು ಇಲ್ಲಿ ಓದಿ
ಡ್ರಗ್ಸ್ ಮಾಫಿಯಾದಲ್ಲಿ ನಟಿಯಷ್ಟೇ ಅಲ್ಲ ನಟರು, ರಾಜಕಾರಣಿಗಳ ಮಕ್ಕಳು, ಹಿರಿಯ ನಿರ್ದೇಶಕರ ಮಕ್ಕಳು ಇದ್ದಾರೆ.
ಆದರೆ ಇಲ್ಲಿ ಇಬ್ಬರೂ ನಟಿಯನ್ನು ಮಾತ್ರ ಅರೆಸ್ಟ್ ಮಾಡಲಾಗಿದೆ.
ಅಲ್ಲದೆ ಪ್ರಕರಣದಲ್ಲಿ ಇಲ್ಲದೆ ಇರುವವರನ್ನು ಕರೆದುಕೊಂಡು ಬಂದು ನಾಮಕಾವಸ್ಥೆಗೆ ಮಾಡಿದಂತೆ ಇದೆ.
ಯಾವುದೇ ರಾಜಕೀಯ ವ್ಯಕ್ತಿಗಳ ಒತ್ತಡವಿಲ್ಲದೆ, ಯಾರ್ಯಾರು ದೊಡ್ಡ ವ್ಯಕ್ತಿಗಳಿದ್ದಾರೆ, ನಟರ ಮಕ್ಕಳು, ರಾಜಕಾರಣಿಗಳ ಮಕ್ಕಳು, ಹಿರಿಯ ನಿರ್ದೇಶಕರ ಮಕ್ಕಳನ್ನು ಕರೆಸಿ ಕೂಲಂಕುಶವಾಗಿ ವಿಚಾರಣೆ ಮಾಡಬೇಕು.
ಆಗ ನಿಮ್ಮ ಬಗ್ಗೆ ನಮಗೆ ಗೌರವ ಹೆಚ್ಚಾಗುತ್ತದೆ. ಆಗ ಇಡೀ ಕರ್ನಾಟಕಕ್ಕೆ ಒಂದು ಸಂದೇಶ ಕೊಟ್ಟದಂತಾಗುತ್ತದೆ ಎಂದು ಮನವಿ ಮಾಡಿದರು.
ಆದಿತ್ಯ ಆಳ್ವಾನ ಇನ್ನೂ ಬಂಧಿಸಿಲ್ಲ. ಎ1 ಆರೋಪಿಯನ್ನ ಬಂಧಿಸಿಲ್ಲ. 12 ದಿನಗಳ ಬಳಿಕ ಒಂದಿಬ್ಬರನ್ನ ಬಂಧಿಸಿದ್ದಾರೆ. ಹೊಸ ಸುದ್ದಿಗಳನ್ನು ಇಲ್ಲಿ ಓದಿ
ಆದರೆ ನಟರ ಮಕ್ಕಳು, ರಾಜಕಾರಣಿ ಮಕ್ಕಳನ್ನ ಇನ್ನೂ ಯಾಕೆ ವಿಚಾರಣೆಗೆ ಕರೆಸಿಲ್ಲ ಎಂದು ಪ್ರಶ್ನಿಸಿದ ಇಂದ್ರಜಿತ್, ಡ್ರಗ್ ಮಾಫಿಯಾ ಸಣ್ಣ ವಿಷಯ ಅಲ್ಲ.
ರಾಜಕಾರಣಿ ಪುತ್ರ ಎಂದು ಆಳ್ವಾನನ್ನು ಅರೆಸ್ಟ್ ಮಾಡಿಲ್ಲ. ಸರ್ಕಾರದಲ್ಲಿ ಕೆಲಸ ಮಾಡುತ್ತಿರುವ ನಿರ್ದೇಶಕನ ಪುತ್ರ ಇದ್ದಾನೆ.
ಅವನು ಪೆಡ್ಲರ್, ಅವನನ್ನ ಯಾಕೆ ಕರೆದು ವಿಚಾರಣೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ತ್ಯಾಪೆ ಕೆಲಸ ಮಾಡಬೇಡಿ. ವಿಚಾರಣೆಯನ್ನ ಕೇವಲ ನೆಪವಾಗಿ ಮಾಡಬೇಡಿ.
ರಾಜಕೀಯ ಪಕ್ಷದ ಮಕ್ಕಳನ್ನ ಕರೆಸಬೇಕು. ಹಳೆಯ ಡ್ರಗ್ ಪ್ರಕರಣಗಳನ್ನ ಕೆದಕಿದರೆ ಇನ್ನೂ ಸಾಕಷ್ಟು ಪ್ರಕರಣ ಬಯಲಿಗೆ ಬರುತ್ತೆ.
ಆದರೆ ಈಗ ಪ್ರಕರಣದ ತನಿಖೆ ಬೇರೆ ಸ್ವರೂಪವನ್ನು ಪಡೆದುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.