ದೇಶದಲ್ಲಿ ಕೊರೊನಾ ಆತಂಕ ದಿನೇ ದಿನೇ ಹೆಚ್ಚುತ್ತಲೇ ಇದೆ. ಇದರ ನಡುವೆಯೂ ಇದೀಗ ದೇಶದ 6 ರಾಜ್ಯಗಳಲ್ಲಿ ಶಾಲೆಗಳ ಪುನರಾರಂಭವಾಗಿವೆ.
ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ 9 ರಿಂದ 12ನೇ ತರಗತಿಗಳನ್ನು ತೆರೆಯಲು ಅನುಮತಿಸಲಾಗಿತ್ತು.
ಕೇಂದ್ರದ ಮಾರ್ಗಸೂಚಿಯಂತೆ ಸೆ. 21ರಿಂದ 6 ರಾಜ್ಯಗಳಲ್ಲಿ ಶಾಲೆಗಳು ಪುನರಾರಂಭವಾಗಿವೆ.
ಕೋವಿಡ್ ಕ್ರಮಗಳನ್ನು ಅನುಸರಿಸಿ 9 ರಿಂದ 12ನೇ ತರಗತಿಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ಅನುಮತಿಸಿದೆ.
ಆದ್ರೆ ಕರ್ನಾಟಕದಲ್ಲಿ ಸದ್ಯಕ್ಕೆ ಶಾಲೆಗಳು ತೆರೆಯುವುದಿಲ್ಲ ಎಂದು ಈಗಾಗಲೇ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸ್ಪಷ್ಟ ಪಡಿಸಿದ್ದಾರೆ.
ಇನ್ನೂ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಆಂಧ್ರಪ್ರದೇಶ, ಮೇಘಾಲಯ, ಹಿಮಾಚಲ ಪ್ರದೇಶ, ಹರಿಯಾಣ ಮತ್ತು ನಾಗಲ್ಯಾಂಡ್ ಗಳಲ್ಲಿ ಈಗಾಗಲೇ ಶಾಲೆಗಳನ್ನು ಪುನಾರಾಂಭಗೊಳಿಸಲಾಗಿದೆ.
ಇನ್ನೂ ಶಾಲೆಗಳ ತೆರವಿಗೆ ಅವಕಾಶ ನೀಡಿದ್ರೂ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಲೇಬೇಕೆಂದು ಕಡ್ಡಾಯಗೊಳಿಸಲಾಗಿಲ್ಲ.
ಅಷ್ಟೇ ಅಲ್ಲದೇ ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು- ಕಾಶ್ಮೀರದಲ್ಲೂ ಶಾಲೆಗಳು ಪುನರಾರಂಭಗೊಂಡಿದೆ.