13 ನೇ ಆವೃತ್ತಿಯ ಐಪಿಎಲ್ ನಲ್ಲಿ ಇಂದು ಕೊಲ್ಕತ್ತಾ ನೈಟ್ ರೈಡರ್ಸ್ ತಮ್ಮ ಮೊದಲ ಪಂದ್ಯದಲ್ಲಿ ಬಲಿಷ್ಠ ಮುಂಬೈ ತಂಡವನ್ನು ಎದುರಿಸಲಿದೆ.
ಈಗಾಗಲೇ ಮೊದಲ ಪಂದ್ಯದಲ್ಲಿ ಸೋತಿರುವ ಮುಂಬೈ ಈ ಪಂದ್ಯ ಗೆದ್ದು ಗೆಲುವಿನ ಖಾತೆ ಆರಂಭಿಸಲು ಪ್ಲಾನ್ ಮಾಡಿದೆ. ಇತ್ತ ಕೊಲ್ಕತ್ತಾ ಮೊದಲ ಪಂದ್ಯ ಗೆದ್ದು ಟೂರ್ನಿಯಲ್ಲಿ ಶುಭಾರಂಭ ಮಾಡುವ ತವಕದಲ್ಲಿದೆ.
ತಂಡಗಳ ಬಲಾಬಲ
ಕೊಲ್ಕತ್ತಾ ನೈಟ್ ರೈಡರ್ಸ್
ಈಗಾಗಲೇ ಎರಡು ಬಾರಿ ಚಾಂಪಿಯನ್ ಆಗಿರುವ ಕೆಕೆಆರ್, ಈ ಬಾರಿ ಟ್ರೋಫಿ ಹೊಡೆಯುವ ವಿಶ್ವಾಸದಲ್ಲೇ ಮೈದಾನಕ್ಕೆ ಇಳಿಯುತ್ತಿದೆ.
ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಲು ಸಾಕಷ್ಟು ತಾಲೀಮು ನಡೆಸಿರುವ ಕೊಲ್ಕತ್ತಾಗೆ ಆಲ್ ರೌಂಡರ್ ಗಳೇ ಆನೆಬಲ. ಇದು ತಂಡದ ವೀಕ್ನೆಸ್ ಕೂಡ.
ಬ್ಯಾಟಿಂಗ್ ವಿಭಾಗದಲ್ಲಿ ಇಯಾನ್ ಮಾರ್ಗನ್, ನಾಯಕ ದಿನೇಶ್ ಕಾರ್ತಿಕ್, ಶುಭ್ ಮನ್ ಗೀಲ್ ತಂಡವನ್ನು ಗೆಲ್ಲಿಸುವ ಸಾಮಥ್ರ್ಯ ಹೊಂದಿದ್ದಾರೆ.
ಬೌಲಿಂಗ್ ನಲ್ಲಿ ಪಾಟ್ ಕಮ್ಮಿನ್ಸ್, ಪ್ರಸಿದ್ಧ್ ಕೃಷ್ಣ, ಕುಲದೀಪ್ ಯಾದವ್ ಕೆಕೆಆರ್ ನ ಪ್ರಮುಖ ಅಸ್ತ್ರಗಳಾಗಿದ್ದಾರೆ. ಇವರು ಮಿಂಚಿದರೇ ಎದುರಾಳಿಗಳು ಸೈಲಂಟ್ ಆಗೋದು ಪಕ್ಕಾ.
ಮುಖ್ಯವಾಗಿ ಕೆಕೆಆರ್ ತಂಡ ನಿಂತಿರೋದೇ ಆಲ್ ರೌಂಡರ್ ಗಳಾದ ಸುನೀಲ್ ನರೈನ್, ಆಂಡ್ರ್ಯು ರಸೆಲ್ ಆಟದ ಮೇಲೆ, ಇವರ ಮೈದಾನದಲ್ಲಿ ಘರ್ಜಿಸಿದರೆ ಕೊಲ್ಕತ್ತಾ ತಂಡದ ಗೆಲುವು ಖಚಿತ.
ಮುಂಬೈ ಇಂಡಿಯನ್ಸ್
ತಂಡದ ತುಂಬೆಲ್ಲಾ ಸ್ಟಾರ್ ಆಟಗಾರರು, ಬೆಸ್ಟ್ ಫಿನಿಷರ್ಸ್, ತಂಡವನ್ನು ಸೋಲಿನ ತಡದಿಂದ ಗೆಲುವಿನತ್ತ ಕೊಂಡೊಯ್ಯಬಲ್ಲ ವೀರರು, ಕಷ್ಟಕಾಲದಲ್ಲಿ ಆಪತ್ಬಾಂಧವರಂತೆ ತಂಡದ ಪರ ನಿಲ್ಲೋ ಆಲ್ ರೌಂಡರ್ ಗಳು.
ಇವೆಲ್ಲವುದಕ್ಕೂ ಮಿಗಿಲಾಗಿ ಐಪಿಎಲ್ ನ ಮೋಸ್ಟ್ ಸಕ್ಸಸ್ ಫುಲ್ ಕ್ಯಾಪ್ಟನ್. ಬಲಿಷ್ಠ ಕೋಚಿಂಗ್ ಸ್ಟಾಪ್. ಇದು ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಬಲ.
ಪ್ರತಿ ಬಾರಿಯೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ಟೀಂ ಆಗಿ ಅಖಾಡಕ್ಕೆ ಇಳಿಯುವ ಮುಂಬೈ ಈ ಬಾರಿಯೂ ಅದೇ ಜೋಷ್ ನಲ್ಲಿ ಮೈದಾನಕ್ಕೆ ಧುಮುಕಲಿದೆ.
ಬೇರ್ಯಾವ ತಂಡಕ್ಕೂ ಸಾಧ್ಯವಾಗದ ರೀತಿಯಲ್ಲಿ ನಾಲ್ಕು ಬಾರಿ ಪ್ರಶಸ್ತಿಯನ್ನು ಗೆದ್ದಿರುವ ಘನತೆ ಮುಂಬೈ ತಂಡದ್ದು. ಬ್ಯಾಟಿಂಗ್,ಬೌಲಿಂಗ್ ಫೀಲ್ಡಿಂಗ್ ಹೀಗೆ ಎಲ್ಲಾ ವಿಭಾಗದಲ್ಲೂ ಮುಂಬೈ ಸಾಲಿಡ್ ಸ್ಟ್ರಾಂಗ್.
ತಂಡದ ಬಲಾಬಲದ ಬಗ್ಗೆ ಮಾತನಾಡೋವುದಾದರೇ ಮುಂಬೈಗೆ ಹಿಟ್ ಮ್ಯಾನ್ ಸೂಪರ್ ಹೀರೋ. ಸೀಮಿತ ಓವರ್ ಗಳ ಕ್ರಿಕೆಟ್ ನಲ್ಲಿ ರೋಹಿತ್ ಸೂಪರ್ ಸ್ಟಾರ್.
ಎದುರಾಳಿ ಬೌಲರ್ ಯಾರೇ ಆಗಿರಲಿ, ಚೆಂಡನ್ನು ಬೌಂಡರಿ ದಾಟಿಸೋ ಶರ್ಮಾ ಆಟ ಮುಂಬೈಗೆ ಬಹು ದೊಡ್ಡಬಲ. ಹೊಸ ಸುದ್ದಿಗಳನ್ನು ಇಲ್ಲಿ ಓದಿ
ಬ್ಯಾಟಿಂಗ್ ನಲ್ಲಿ ಡಿಕಾಕ್, ರೋಹಿತ್, ಕ್ರಿಸ್ ಲಿನ್, ಸೂರ್ಯ ಕುಮಾರ್ ತಂಡಕ್ಕೆ ಬಲ ತುಂಬಿದರೆ, ಹಾರ್ಧಿಕ್ ಪಾಂಡ್ಯ, ಪೊಲಾರ್ಡ್ ಆಲ್ ರೌಂಡರ್ ಗಳಾಗಿ ತಂಡವನ್ನು ಗೆಲ್ಲಿಸಿಕೊಡೋ ಸಾಮಥ್ರ್ಯ ಹೊಂದಿದ್ದಾರೆ.
ಇನ್ನು ಬೌಲಿಂಗ್ ನಲ್ಲಿ ಬೂಮ್ರಾಗೆ ಎದುರಾಳಿ ಬ್ಯಾಟ್ಸ್ ಮನ್ ಗಳು ತಲೆಬಾಗಲೇಬೇಕು. ಬೌಲ್ಟ್ ಆಗಮನ ಮುಂಬೈಗೆ ಮತ್ತಷ್ಟು ಬಲ ನೀಡಿದೆ.
ಇಂದಿನ ಪಂದ್ಯದಲ್ಲಿ ಮುಂಬೈ ಮೊದಲ ಪಂದ್ಯವಾಡಿದ ತಂಡವನ್ನೇ ಕಣಕ್ಕಿಳಿಸುವ ಸಾಧ್ಯತೆಗಳಿವೆ.








