ಸೂರತ್ ನ ಒಎನ್‌ಜಿಸಿ ಘಟಕದಲ್ಲಿ ಸಂಭವಿಸಿದ ಭಾರಿ ಸ್ಫೋಟ
ಸೂರತ್, ಸೆಪ್ಟೆಂಬರ್24: ಗುಜರಾತ್‌ನ ಸೂರತ್ ಜಿಲ್ಲೆಯ ಹಜೀರಾ ಎಂಬಲ್ಲಿರುವ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ ಅನಿಲ ಸಂಸ್ಕರಣಾ ಘಟಕದಲ್ಲಿ ಗುರುವಾರ ಮುಂಜಾನೆ ಭಾರಿ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾವುದೇ ರೀತಿಯ ಸಾವು ನೋವಿನ ಬಗ್ಗೆ ವರದಿ ಬಂದಿಲ್ಲ ಎಂದು ಅವರು ಹೇಳಿದ್ದು, ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ತಿಳಿಸಿದ್ದಾರೆ.
ಕೋವಿಡ್ -19 ಸೋಂಕಿತರಿಗೆ ಮೂತ್ರಪಿಂಡ (ಕಿಡ್ನಿ)ದ ಅಪಾಯ ಹೆಚ್ಚು
ಹಜೀರಾ ಗ್ಯಾಸ್ ಸಂಸ್ಕರಣಾ ಘಟಕದಲ್ಲಿ ಇಂದು ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಯಾವುದೇ ವ್ಯಕ್ತಿಗೆ ಯಾವುದೇ ಅಪಘಾತ ಅಥವಾ ಗಾಯಗಳಿಲ್ಲ ಎಂದು ಒಎನ್‌ಜಿಸಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅಧಿಕಾರಿಗಳ ಪ್ರಕಾರ, ಒಎನ್‌ಜಿಸಿ ಸ್ಥಾವರದಲ್ಲಿ ಅನೇಕ ಸ್ಫೋಟಗಳು ನಡೆದಿದ್ದು, ಭಾರಿ ಪ್ರಮಾಣದ ಬೆಂಕಿಗೆ ಕಾರಣವಾಗಿದೆ. ಆದರೆ, ಸ್ಫೋಟಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.
ಡ್ರೈವಿಂಗ್ ಲೈಸೆನ್ಸ್ – ಆಫ್‌ಲೈನ್ ಮತ್ತು ಆನ್‌ಲೈನ್ ಮೋಡ್‌ನಲ್ಲಿ ನವೀಕರಿಸುವುದು ಹೇಗೆ – ಇಲ್ಲಿದೆ ಮಾಹಿತಿ
ಮುಂಜಾನೆ 3 ಗಂಟೆ ಸುಮಾರಿಗೆ ಒಎನ್‌ಜಿಸಿ ಹಜೀರಾ ಸ್ಥಾವರದಲ್ಲಿ ಸತತ ಮೂರು ಸ್ಫೋಟಗಳು ಸಂಭವಿಸಿದವು. ಅಗ್ನಿಶಾಮಕ ದಳದವರು ಸ್ಥಳದಲ್ಲಿದ್ದು ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ.
ಸುಮಾರು ಕಿಲೋಮೀಟರ್ ದೂರದವರೆಗೆ ಬೆಂಕಿ ಕಾಣಿಸಿದೆ ಅಲ್ಲದೆ ಗ್ಯಾಸ್ ವಾಸನೆಯು ಸುಮಾರು ದೂರದವರೆಗೆ ವ್ಯಾಪಿಸಿತ್ತು. ಸುರಕ್ಷಾ ಕ್ರಮವಾಗಿ ಸುತ್ತ ಮುತ್ತಲಿನ ಕೈಗಾರಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು ಘಟನೆ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
https://twitter.com/ANI/status/1308903952973520897?s=19








