ನಿರೂಪಕಿಯಾಗಿ ಬಳಿಕ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟು ಖ್ಯಾತಿ ಪಡೆದಿದ್ದ ಶೀತಲ್ ಶೆಟ್ಟಿ ಅವರು ಮೊದಲಿಗೆ ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟಿದ್ದರು.
ಇದೀಗ ನಿರ್ದೇಶಕಿಯಾಗಿರುವ ಶೀತಲ್ ಶೆಟ್ಟಿ ಅವರು “ವಿಂಡೋಸೀಟ್” ಗೆ ಆಕ್ಷನ್ ಕಟ್ ಹೇಳ್ತಿದ್ದಾರೆ.
ಸ್ಯಾಂಡಲ್ ವುಡ್ ಹೊಸ ಚಿತ್ರವಾದ “ವಿಂಡೋಸೀಟ್” ಗೆ ಶೀತಲ್ ಶೆಟ್ಟಿ ಅವರೇ ನಿರ್ದೇಶನ ಮಾಡುತ್ತಿದ್ದು ಒಂದೆಡೆಯಾದ್ರೆ, ಚಿತ್ರದ ಕಥೆ, ಚಿತ್ರಕಥೆಯನ್ನೂ ಅವರೇ ಬರೆದಿರೋದು ವಿಶೇಷ.
ಇದೀಗ “ವಿಂಡೋಸೀಟ್” ಚಿತ್ರದ ಫಸ್ಟ್ಲುಕ್ ಮತ್ತು ಶಾರ್ಟ್ ವಿಡಿಯೋ ಕ್ಲಿಪ್ ಬಿಡುಗಡೆ ಆಗಿದ್ದು, ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ.
ಟ್ರೇಲರ್ ಗೆ ಸಿನಿಪ್ರಿಯರು ಫಿದಾ ಆಗಿದ್ದಾರೆ.
ಈ ವಿಡಿಯೋ ಕ್ಲಿಪ್ ನಲ್ಲಿ ಕಾಣದ ಹುಡುಗಿಯೊಬ್ಬರ ನೆರಳಿದ್ದು, ರೈಲಿನ ಕಿಟಕಿಯಿಂದ ಆಕೆಯನ್ನ ನಾಯಕ ನೋಡುತ್ತಿದ್ದು, ಹಿನ್ನೆಲೆಯಲ್ಲಿ ಮಧುರವಾದ ಸಂಗೀತದ ಸೊಗಸಿದೆ.
ಹೀಗಾಗಿ ಈ ಚಿತ್ರ ಪಕ್ಕಾ ಲವ್ ಸ್ಟೋರಿ ಕಥಾ ಹಂದರ ಹೊಂದಿದೆ ಎಂಬ ಚರ್ಚೆಗಳು ಆರಂಭವಾಗಿದೆ.
ಚಿತ್ರದಲ್ಲಿ ನಿರೂಪ್ ಭಂಡಾರಿ ನಾಯಕನಾಗಿದ್ರೆ, ಈ ಚಿತ್ರದಲ್ಲಿ ಸಂಜನಾ ಆನಂದ್ ಮತ್ತು ಅಮೃತಾ ಅಯ್ಯಂಗಾರ್ ನಾಯಕಿಯರಾಗಿದ್ದಾರೆ.
ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದೆ. ಇಂಪಾದ ಸಂಗೀತಕ್ಕೆ ವಿಜಯ್ ಪ್ರಕಾಶ್ ಧ್ವನಿಯಾಗಿದ್ದು, ಹಾಡಿಗೆ ಜೀವ ತುಂಬಿದ್ದಾರೆ.
ಚಿತ್ರಕ್ಕೆ ಜಾಕ್ ಮಂಜು ಅವರು ಬಂಡವಾಳ ಹೂಡಿದ್ದಾರೆ.
ಇನ್ನೂ ಕಿಚ್ಚ ಕ್ರಿಯೇಷನ್ ಯೂಟ್ಯೂಬ್ ಚಾನೆಲ್ನಲ್ಲಿ ಫಸ್ಟ್ ಲುಕ್ ರಿಲೀಸ್ ಆಗಿದೆ.
ಸ್ವತಃ ಸುದೀಪ್ ಅವರೇ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಫಸ್ಟ್ಲುಕ್ ಹಂಚಿಕೊಂಡಿದ್ದಾರೆ.









