13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಇಂದು ಕನ್ನಡಗರ ಕಾಳಗ ನಡೆಯಲಿದೆ. ಕನ್ನಡಿಗರಿಂದಲೇ ತುಂಬಿರುವ ಕಿಂಗ್ಸ್ 11 ಪಂಜಾಬ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.
ಈಗಾಗಲೇ ಮೊದಲ ಪಂದ್ಯ ಗೆದ್ದು ಟೂರ್ನಿಯಲ್ಲಿ ಶುಭಾರಂಭ ಮಾಡಿರುವ ಆರ್ ಸಿಬಿ ಇಂದಿನ ಪಂದ್ಯ ಗೆದ್ದು ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ತವಕದಲ್ಲಿದೆ.
ಇತ್ತ ಮೊದಲ ಪಂದ್ಯದಲ್ಲಿ ಅಂಪೇರ್ ಗಳ ಎಡವಟ್ಟು ಪ್ಲನ್ ಅನ್ ಲಕ್ಕಿಯಿಂದ ಮೊದಲ ಪಂದ್ಯವನ್ನು ಸೋತಿರುವ ಪಂಜಾಬ್ ಇಂದಿನ ಪಂದ್ಯ ಗೆದ್ದು ಗೆಲುವಿನ ಖಾತೆ ತೆರೆಯುವ ಕಾತರದಲ್ಲಿದೆ.
ತಂಡಗಳ ಬಲಾಬಲ ಇಂತಿದೆ
ಇತ್ತಂಡಗಳಿಗೂ ಬ್ಯಾಟಿಂಗ್ ಪ್ರಮುಖ ಬಲವಾಗಿದ್ದು, ಕೊಹ್ಲಿ, ಎಬಿಡಿ, ಫಿಂಚ್, ಪಡಿಕ್ಕಲ್ ಅವರಂತಹ ಆಟಗಾರರೊಂದಿಗೆ ಆರ್‍ಸಿಬಿ ಬಲವಾದ ಬ್ಯಾಟಿಂಗ್ ಲೈನ್ ಹೊಂದಿದೆ.
ಚಹಲ್ ಯಾವುದೇ ಸಂದರ್ಭದಲ್ಲಿ ವಿಕೆಟ್ ಪಡೆಯುವ ಸಾಮಥ್ರ್ಯ ಹೊಂದಿದ್ದು, ಸ್ಟೈನ್, ಸೈನಿ, ಯಾದವ್ ಯಶಸ್ಸು ಕಾಣಬೇಕಿದೆ.
ಇನ್ನು ಆಲ್ ರೌಂಡರ್ ಶಿವಂ ದುಬೆ ಸಾಮಥ್ರ್ಯಕ್ಕೆ ತಕ್ಕಂತೆ ಪ್ರದರ್ಶನ ನೀಡಬೇಕಿದೆ. ಕಳೆದ ಪಂದ್ಯದಲ್ಲಿ ಆರ್ ಸಿಬಿ ಮಿಸ್ ಫೀಲ್ಡಿಂಗ್ ಮಾಡಿದ್ದು, ಈ ಪಂದ್ಯದಲ್ಲಿ ಸುಧಾರಿಸಬೇಕಿದೆ.
ಇತ್ತ ಪಂಜಾಬ್ ತಂಡ ಕೂಡ ರಾಹುಲ್, ಮಯಾಂಕ್, ನಾಯರ್, ಪೂರನ್, ಮ್ಯಾಕ್ಸ್ ವೆಲ್ ರಂತಹ ಆಟಗಾರರೊಂದಿಗೆ ಉತ್ತಮ ಬ್ಯಾಟಿಂಗ್ ಲೈನಪ್ ಹೊಂದಿದೆ.
ವೇಗಿ ಶಮಿ, ಯುವ ಆಟಗಾರ ರವಿ ಬಿಷ್ನೋಯಿ ಉತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದಾರೆ.
ಮುಂದುವರಿಯುತ್ತಾ ಆರ್ ಸಿಬಿ ದರ್ಬಾರ್
ಐಪಿಎಲ್ ನಲ್ಲಿ ಉಭಯ ತಂಡಗಳು ಇದುವರೆಗೂ 24 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಎರಡೂ ತಂಡಗಳೂ ತಲಾ 12 ಪಂದ್ಯಗಳನ್ನು ಗೆದ್ದಿವೆ.
ಆದ್ರೆ ಕಳೆದ 10 ಮ್ಯಾಚ್ ಗಳಲ್ಲಿ ಬೆಂಗಳೂರು ತಂಡ 7 ಪಂದ್ಯಗಳನ್ನು ಗೆದ್ದು ದರ್ಬಾರ್ ನಡೆಸಿದೆ. ಅದರಲ್ಲೂ ಕಳೆದ 2 ಸೀಸನ್ ಗಳಲ್ಲಿ ಪಂಜಾಬ್ ವಿರುದ್ಧ ಬೆಂಗಳೂರು ಒಂದೂ ಮ್ಯಾಚ್ ಕೂಡ ಸೋತಿಲ್ಲ.
ಇಂದಿನ ಪಂದ್ಯದ ಗುರು ಶಿಷ್ಯರ ಕಾಳಗವೂ ಹೌದು..! ಪಂಜಾಬ್ ನ ನಾಯಕ ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್ ಸಿಬಿ, ಟೀಂ ಇಂಡಿಯಾದಲ್ಲಿ ಮಿಂಚು ಹರಿಸಿದ್ದಾರೆ.
ಇನ್ನು ಮಯಾಂಕ್ ಅಗರ್ ವಾಲ್ ಕೂಡ ಕೊಹ್ಲಿ ನಾಯಕತ್ವದಲ್ಲಿ ಆರ್ ಸಿಬಿ ಪರವಾಡಿದ್ದಾರೆ.
ಇದೆಲ್ಲಾ ಏನೇ ಇರಲಿ ಆದ್ರೆ ಇಂದಿನ ಪಂದ್ಯ ಬಿಗ್ ಮ್ಯಾಚ್ ಆಗುವುದರಲ್ಲಿ ಡೌಟೇ ಇಲ್ಲ. ಎರಡೂ ಕಡೆ ಹೊಡಿಬಡಿ ದಾಂಡಿಗರೇ ಇರುವುದರಿಂದ ದೊಡ್ಡ ಮೊತ್ತದ ಮ್ಯಾಚ್ ಆಗಲಿದೆ.
ಇನ್ನು ಪಿಚ್ ವಿಚಾರಕ್ಕೆ ಬಂದ್ರೆ ಇಂದಿನ ಪಂದ್ಯ ದುಬೈನಲ್ಲಿ ನಡೆಯಲಿದ್ದು, ಇದು ಸ್ಪರ್ಧಾತ್ಮಕವಾಗಿದ್ದು, ಸ್ಪೀನ್ ಬೌಲರ್ ಗಳಿಗೆ ಹೆಚ್ಚಿನ ಲಾಭ ಸಿಗಲಿದೆ. ಇಲ್ಲಿ ಚೇಸ್ ಮಾಡೋರು ಗೆಲ್ಲುವ ಅವಕಾಶಗಳು ಹೆಚ್ಚಿವೆ.
ಸಂಭಾವ್ಯ ತಂಡ:
ಬೆಂಗಳೂರು: ಆರೋನ್ ಫಿಂಚ್, ದೇವದತ್ ಪಡಿಕ್ಕಲ್, ಕೊಹ್ಲಿ (ನಾಯಕ), ಎಬಿ ಡಿ ವಿಲಿಯರ್ಸ್, ಶಿವಂ ದುಬೆ, ಜೋಶ್ವಾ ಫಿಲಿಪಿ, ವಾಷಿಂಗ್ಟನ್ ಸುಂದರ್, ಸೈನಿ, ಉಮೇಶ್ ಯಾದವ್, ಸೈನ್, ಚಹಲ್.
ಪಂಜಾಬ್: ಕೆಎಲ್ ರಾಹುಲ್ (ನಾಯಕ), ಮಯಾಂಕ್, ಕರುಣ್ ನಾಯರ್, ಪೂರನ್, ಮ್ಯಾಕ್ಸ್ ವೆಲ್, ಸರ್ಫರಾಜ್ ಖಾನ್, ಕೆ.ಗೌತಮ್, ಕ್ರಿಸ್ ಜೋರ್ಡನ್, ಶಮಿ, ಶೆಲ್ಡನ್ ಕಾರ್ಟೆಲ್, ರವಿ ಬಿಷ್ನೋಯಿ.








