ಮೈಸೂರು ನಗರ ಹಾಗೂ ಜಿಲ್ಲೆಯಲ್ಲಿ ಕೊರೊನಾ ಕೇಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.. ನಗರ ಭಾಗದಲ್ಲೇ ಕೊವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು.. ಕೊರೊನಾ ನಿಯಂತ್ರಣಕ್ಕೆ ತುರ್ತುಕ್ರಮ ಅಗತ್ಯವಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಬಿ.ಶರತ್ ತಿಳಿಸಿದ್ದಾರೆ..
ಮೈಸೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು.. ಸೋಂಕಿತರನ್ನು ಐಸೋಲೇಟ್ ಮಾಡಿ ಚಿಕಿತ್ಸೆ ಮಾಡಬೇಕಿದೆ.. ನಮಗೆ ಪ್ರೈಮರಿ, ಸೆಕೆಂಡರಿ ಕಾಂಟ್ಯಾಕ್ಟ್ ಐಡೆಂಟಿಫಿಕೆಷನ್ ಕಂಡು ಹಿಡಿಯೋದು ಕಷ್ಟವಾಗುತ್ತಿದೆ.. ಹಾಗೇ ತಪ್ಪು ಮಾಹಿತಿ ನೀಡಿ ತಪ್ಪಿಸಿಕೊಳ್ಳೊ ಕೆಲಸ ಕೂಡ ನಡೆಯುತ್ತಿದೆ.. ಹೀಗಾಗಿ ಸೋಂಕು ನಿಯಂತ್ರಣಕ್ಕೆ ಹೆಚ್ಚಿನ ಟೆಸ್ಟ್ ಅಗತ್ಯವಿದೆ ಎಂದು ಹೇಳಿದ್ರು..
ಇನ್ನು, ಜಿಲ್ಲೆಯಲ್ಲಿ ಕೊನೆಯ ಹಂತದಲ್ಲಿ ಆಸ್ಪತ್ರೆಗೆ ತರೋದ್ರಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ.. ಇದನ್ನು ತಪ್ಪಿಸಲು ಸರ್ವೇ ಮಾಡಲಿದ್ದೇವೆ.. ಹೈಪರ್ ಟೆನ್ಷನ್ ಶುಗರ್ ಇರುವಂತವರ ಲಿಸ್ಟ್ ನಮ್ಮಲಿದೆ.. ಮೈಸೂರು ನಗರದಲ್ಲಿ ಇವರ ಬಗ್ಗೆ ಸರ್ವೇ ಮಾಡಲಿದ್ದೇವೆ.. ಸರ್ವೇಗೆ ಬರುವವರಿಗೆ ಮುಕ್ತವಾಗಿ ಸಾರ್ವಜನಿಕರು ಸಹಕರಿಸಬೇಕು.. ಸರ್ವೆಗೆ ಸ್ಪಂದಿಸದೇ ತೊಂದರೆ ನೀಡಿದ್ದಲ್ಲಿ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ರು..








