ಸಂಗೀತ ಲೋಕದ ಸ್ವರಮಾಂತ್ರಿಕನ ಅಗಲಿಕೆ ಚಂದನವನ ಮಾತ್ರವಲ್ಲದೇ ಸಂಗೀತಲೋಕವಷ್ಟೇ ಅಲ್ಲದೇ, ಇಡೀ ದೇಶಕ್ಕೆ ತುಂಬಲಾರದ ನಷ್ಟ.
ಎಸ್ ಪಿಬಿ ಅವರ ಅಗಲಿಕೆ ಅನೇಕ ಗಣ್ಯರು ಸಂಪಾತ ಸೂಚಿಸಿದ್ದಾರೆ.
ಅಂತೆಯೇ ಕೆಪಿಸಿಸಿ ಮಾಜಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದು “50 ವರ್ಷಗಳಿಗೂ ಹೆಚ್ಚಿನ ಕಾಲ ಬಹುಭಾಷಾ ಗಾಯಕನಾಗಿ ಅಭಿಮಾನಿಗಳನ್ನು ರಂಜಿಸಿದ ಗಾನಗಂಧರ್ವ ಎಸ್ ಪಿ ಬಾಲಸುಬ್ರಮಣ್ಯಂ ನಮ್ಮನಗಲಿ ಹೋಗಿರುವುದು ಅತ್ಯಂತ ದುಃಖದ ವಿಚಾರ.
ಕೊನೆಗೂ ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ ಫಲಿಸಲೇ ಇಲ್ಲ. ಎಸ್ ಪಿಬಿ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಎಂದು ಬೇಡಿಕೊಳ್ಳುತ್ತೇನೆ” ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.









