16 ಭಾಷೆಗಳಲ್ಲಿ 40 ಸಾವಿರ ಹಾಡುಗಳನ್ನು ಹಾಡಿದ ಗಾನ ಕೋಗಿಲೆ ಎಸ್ ಪಿಬಿ ಇಂದು ಅಸ್ತಂಗತವಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಎಸ್ ಪಿ ಬಿ ಅವರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, “ಭಾರತದ ಪ್ರತಿ ಮನೆ, ಮನಗಳಲ್ಲಿ ಹೆಸರಾದವರ ಎಸ್ಪಿ ಬಾಲಸುಬ್ರಹ್ಮಣ್ಯಂ.
ದಶಕಗಳ ಕಾಲ ತಮ್ಮ ಸುಮಧರ ಕಂಠದಿಂದ ರಂಜಿಸಿದವರು. ಅವರ ಈ ವಿದಾಯ ನೋವು ನೀಡಿದೆ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ನೀಡಲಿ” ಎಂದಿದ್ದಾರೆ.