ADVERTISEMENT
Thursday, May 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports IPL 2020

ಐಪಿಎಲ್ 2020- ಪೃಥ್ವಿ ಶಾ ಮಿಂಚು.. ಧೋನಿ ಪಡೆಗೆ ಮತ್ತೊಂದು ಸೋಲು

admin by admin
September 26, 2020
in IPL 2020, Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ಐಪಿಎಲ್ 2020- ಪೃಥ್ವಿ ಶಾ ಮಿಂಚು.. ಧೋನಿ ಪಡೆಗೆ ಮತ್ತೊಂದು ಸೋಲು

2020ರ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸತತ ಎರಡನೇ ಗೆಲುವು ದಾಖಲಿಸಿದೆ. ಇತ್ತ ಚೆನ್ನೈ ಸೂಪರ್ ಕಿಂಗ್ಸ್ ಸತತ ಎರಡನೇ ಸೋಲು ಅನುಭವಿಸಿದೆ. ಟೂರ್ನಿಯ ಏಳನೇ ಪಂದ್ಯದಲ್ಲಿ ಪೃಥ್ವಿ ಶಾ ಅವರ ಅಮೋಘ ಅರ್ಧಶತಕ ಹಾಗೂ ಶಿಸ್ತು ಬದ್ಧ ಬೌಲಿಂಗ್ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 44 ರನ್ ಗಳಿಂದ ಧೋನಿ ಪಡೆಯನ್ನು ಪರಾಭವಗೊಳಿಸಿದೆ.
ದುಬೈ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಮತ್ತೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದ್ರೆ ಧೋನಿಯ ಲೆಕ್ಕಚಾರಗಳನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕರು ಬುಡಮೇಲು ಮಾಡಿದ್ರು. ಪೃಥ್ವಿ ಶಾ ಮತ್ತು ಶಿಖರ್ ಧವನ್ ಮೊದಲ ವಿಕೆಟ್ ಗೆ 94 ರನ್ ಗಳನ್ನು ಪೇರಿಸಿದ್ರು. ಸ್ಟೈಲೀಶ್ ಆಟಗಾರ ಪೃಥ್ವಿ ಶಾ ತಮ್ಮ ಕ್ಲಾಸ್ ಮತ್ತು ಮಾಸ್ ಆಟದ ಮೂಲಕ ಧೋನಿಯ ಗೇಮ್ ಪ್ಲಾನ್ ಗಳನ್ನು ಉಲ್ಟಾಪಲ್ಟಾ ಮಾಡಿದ್ರು. ಇನ್ನೊಂದೆಡೆ ಶಿಖರ್ ಧವನ್ 25 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 35 ರನ್ ಗಳಿಸಿದ್ರು.
ಹಾಗೇ ಪೃಥ್ವಿ ಶಾ ತಮ್ಮ ನೈಜ ಆಟದಿಂದಲೇ ಗಮನ ಸೆಳೆದ್ರು. ಸಚಿನ್, ರಿಕಿ ಪಾಂಟಿಂಗ್ ಮತ್ತು ಸೆಹ್ವಾಗ್ ಆಟದ ಶೈಲಿಯ ಮೂಲಕ ಮಿಂಚು ಹರಿಸಿದ್ದ ಪೃಥ್ವಿ ಶಾ 43 ಎಸೆತಗಳಲ್ಲಿ 9 ಬೌಂಡರಿ ಮತ್ತು ಒಂದು ಸಿಕ್ಸರ್ ನ ಸಹಾಯದಿಂದ ಆಕರ್ಷಕ 64 ರನ್ ದಾಖಲಿಸಿದ್ರು.
ಬಳಿಕ ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಮೂರನೇ ವಿಕೆಟ್‍ಗೆ 58 ರನ್ ಕಲೆ ಹಾಕಿದ್ರು. ಶ್ರೇಯಸ್ ಅಯ್ಯರ್ 26 ರನ್ ಗಳಿಸಿದ್ರೆ, ರಿಷಬ್ ಪಂತ್ 25 ಎಸೆತಗಳಲ್ಲಿ ಆರು ಬೌಂಡರಿಗಳ ಮೂಲಕ ಅಜೇಯ 37 ರನ್ ಸಿಡಿಸಿದ್ರು. ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತ್ತು.
ಗೆಲ್ಲಲು 176 ರನ್ ಗಳ ಸವಾಲನ್ನು ಸ್ವೀಕರಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲರ್ ಗಳು ಮಾರಕವಾಗಿ ಕಾಡಿದ್ರು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಲಯ ಬದ್ಧವಾದ ಬೌಲಿಂಗ್ ದಾಳಿಗೆ ಸಿಎಸ್‍ಕೆ ಬ್ಯಾಟ್ಸ್ ಮೆನ್ ಗಳು ರನ್ ಗಳಿಸಲು ಒದ್ದಾಟ ನಡೆಸಿದ್ರು. ಹೀಗಾಗಿ ಆರಂಭಿಕ ಶೇನ್ ವಾಟ್ಸನ್ 14 ರನ್‍ಗೆ ಸುಸ್ತಾದ್ರೆ, ಮುರಳಿ ವಿಜಯ್ 10 ರನ್ ಗೆ ಸೀಮಿತವಾದ್ರು. ಫಾಫ್ ಡುಪ್ಲೇಸಸ್ ಏಕಾಂಗಿ ಹೋರಾಟ ನಡೆಸಿದ್ರು. ಇನ್ನುಳಿದಂತೆ ಋತುರಾಜ್ ಗಾಯಕ್ವಾಡ್ 5 ರನ್ ಗಳಿಸಿ ರನೌಟಾದ್ರೆ, ಕೇದಾರ್ ಜಾಧವ್ 26 ರನ್ ಗೆ ತನ್ನ ಹೋರಾಟವನ್ನು ಮುಗಿಸಿದ್ರು.
ಮತ್ತೊಮ್ಮೆ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ಧೋನಿ ಮತ್ತೆ ಟೀಕೆಗೆ ಗುರಿಯಾದ್ರು. ಫಾಫ್ ಡುಪ್ಲೇಸಸ್ 43 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದ್ರು. ಹಾಗೇ ಧೋನಿ 15 ರನ್ ಗೆ ತನ್ನ ಹೋರಾಟವನ್ನು ಸೀಮಿತಗೊಳಿಸಿದ್ರು. ರವೀಂದ್ರ ಜಡೇಜಾ 12 ರನ್ ಗಳಿಸಿದ್ರು. ಅಂತಿಮವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 20 ಓವರ್ ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 131 ರನ್ ಗಳಿಸಿತ್ತು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಕಾಗಿಸೊ ರಬಾಡ 26ಕ್ಕೆ ಮೂರು ವಿಕೆಟ್ ಪಡೆದ್ರೆ, ಆನ್ರಿಚ್ ನೊರ್ಟೆಜೆ 21ಕ್ಕೆ ಎರಡು ವಿಕೆಟ್ ಕಬಳಿಸಿದ್ರು. ಮನಮೋಹಕ ಆಟವನ್ನಾಡಿದ್ದ ಪೃಥ್ವಿ ಶಾ ಅವರು ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು.

Related posts

ಯುವಜನತೆಯನ್ನು ಜಿರಳೆ ಎಂದು ಅವಮಾನಿಸಿದ ಸುಪ್ರೀಂ ಜಡ್ಜ್: ತಿರುಗಿಬಿದ್ದ ನಿರುದ್ಯೋಗಿಗಳಿಂದ ಕಾಕ್ರೋಚ್ ಜನತಾ ಪಾರ್ಟಿ ಉದಯ

ಯುವಜನತೆಯನ್ನು ಜಿರಳೆ ಎಂದು ಅವಮಾನಿಸಿದ ಸುಪ್ರೀಂ ಜಡ್ಜ್: ತಿರುಗಿಬಿದ್ದ ನಿರುದ್ಯೋಗಿಗಳಿಂದ ಕಾಕ್ರೋಚ್ ಜನತಾ ಪಾರ್ಟಿ ಉದಯ

May 21, 2026
ಬಿಜೆಪಿಯಲ್ಲಿ ಶುರುವಾಯ್ತು ರಾಜ್ಯಾಧ್ಯಕ್ಷ ಪಟ್ಟಕ್ಕಾಗಿ ಬಿಗ್ ಫೈಟ್: ವಿಜಯೇಂದ್ರ ಅವಧಿ ಮುಗಿಯುವ ಮುನ್ನವೇ ಶ್ರೀರಾಮುಲು ರಣತಂತ್ರ ಶುರು!

ಬಿಜೆಪಿಯಲ್ಲಿ ಶುರುವಾಯ್ತು ರಾಜ್ಯಾಧ್ಯಕ್ಷ ಪಟ್ಟಕ್ಕಾಗಿ ಬಿಗ್ ಫೈಟ್: ವಿಜಯೇಂದ್ರ ಅವಧಿ ಮುಗಿಯುವ ಮುನ್ನವೇ ಶ್ರೀರಾಮುಲು ರಣತಂತ್ರ ಶುರು!

May 21, 2026
Tags: #Faf du Plessis#Kagiso Rabada#Murali Vijay#Prithvi Shaw#Rishabh Pant.#saakshatv.com#Shane Watson.chennai super kingsCricketcskdelhi capitalsIndian Premier LeagueIPLIPL 2020mMahendra Singh Dhonis.dhoniShikhar DhawanShreyas Iyer.t-20 cricket
ShareTweetSendShare
Join us on:

Related Posts

ಯುವಜನತೆಯನ್ನು ಜಿರಳೆ ಎಂದು ಅವಮಾನಿಸಿದ ಸುಪ್ರೀಂ ಜಡ್ಜ್: ತಿರುಗಿಬಿದ್ದ ನಿರುದ್ಯೋಗಿಗಳಿಂದ ಕಾಕ್ರೋಚ್ ಜನತಾ ಪಾರ್ಟಿ ಉದಯ

ಯುವಜನತೆಯನ್ನು ಜಿರಳೆ ಎಂದು ಅವಮಾನಿಸಿದ ಸುಪ್ರೀಂ ಜಡ್ಜ್: ತಿರುಗಿಬಿದ್ದ ನಿರುದ್ಯೋಗಿಗಳಿಂದ ಕಾಕ್ರೋಚ್ ಜನತಾ ಪಾರ್ಟಿ ಉದಯ

by Shwetha
May 21, 2026
0

ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳು ಕೇವಲ ಮನರಂಜನೆಯ ತಾಣಗಳಾಗಿ ಉಳಿದಿಲ್ಲ. ಅವು ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತುವ ಶಕ್ತಿಯುತ ಅಸ್ತ್ರಗಳಾಗಿ ಬದಲಾಗಿವೆ. ಇತ್ತೀಚೆಗೆ ಸುಪ್ರೀಂ ಕೋರ್ಟ್...

ಬಿಜೆಪಿಯಲ್ಲಿ ಶುರುವಾಯ್ತು ರಾಜ್ಯಾಧ್ಯಕ್ಷ ಪಟ್ಟಕ್ಕಾಗಿ ಬಿಗ್ ಫೈಟ್: ವಿಜಯೇಂದ್ರ ಅವಧಿ ಮುಗಿಯುವ ಮುನ್ನವೇ ಶ್ರೀರಾಮುಲು ರಣತಂತ್ರ ಶುರು!

ಬಿಜೆಪಿಯಲ್ಲಿ ಶುರುವಾಯ್ತು ರಾಜ್ಯಾಧ್ಯಕ್ಷ ಪಟ್ಟಕ್ಕಾಗಿ ಬಿಗ್ ಫೈಟ್: ವಿಜಯೇಂದ್ರ ಅವಧಿ ಮುಗಿಯುವ ಮುನ್ನವೇ ಶ್ರೀರಾಮುಲು ರಣತಂತ್ರ ಶುರು!

by Shwetha
May 21, 2026
0

ರಾಜ್ಯ ಬಿಜೆಪಿಯಲ್ಲಿ ಈಗ ಸದ್ದಿಲ್ಲದೆ ರಾಜ್ಯಾಧ್ಯಕ್ಷ ಸ್ಥಾನದ ಬದಲಾವಣೆ ಕುರಿತಾದ ಚರ್ಚೆಗಳು ಮುನ್ನೆಲೆಗೆ ಬಂದಿವೆ. ಹಾಲಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ಅಧಿಕಾರ ಅವಧಿ ಮುಕ್ತಾಯಗೊಳ್ಳಲು ಇನ್ನೂ...

FIR ಬಳಿಕ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್ ಗಂಭೀರ ಆರೋಪ

FIR ಬಳಿಕ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್ ಗಂಭೀರ ಆರೋಪ

by Shwetha
May 21, 2026
0

ಎಚ್. ವಿಶ್ವನಾಥ್ ವಿರುದ್ಧ ಮೈಸೂರಿನ ದೇವರಾಜ ಠಾಣೆಯಲ್ಲಿ FIR ದಾಖಲಾಗಿರುವ ಪ್ರಕರಣ ಇದೀಗ ಹೊಸ ರಾಜಕೀಯ ತಿರುವು ಪಡೆದುಕೊಂಡಿದೆ. ಸಾಲದ ಹಣ ವಾಪಸ್ ಕೇಳಲು ಹೋದ ವ್ಯಕ್ತಿಯ...

ರಾಜ್ಯಕ್ಕೆ ₹6,000 ಕೋಟಿ ಹೂಡಿಕೆ.. 74 ಸಾವಿರ ಉದ್ಯೋಗ ಸೃಷ್ಟಿ: ಎಂಬಿ ಪಾಟೀಲ್

ರಾಜ್ಯಕ್ಕೆ ₹6,000 ಕೋಟಿ ಹೂಡಿಕೆ.. 74 ಸಾವಿರ ಉದ್ಯೋಗ ಸೃಷ್ಟಿ: ಎಂಬಿ ಪಾಟೀಲ್

by Shwetha
May 21, 2026
0

ಎಂಬಿ ಪಾಟೀಲ್ ಅವರು ರಾಜ್ಯದಲ್ಲಿ ಭಾರೀ ಮಟ್ಟದ ಹೂಡಿಕೆ ಹಾಗೂ ಉದ್ಯೋಗ ಸೃಷ್ಟಿ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ. ಬೆಂಗಳೂರು ಮೂಲದ ಆ್ಯಕ್ಸಿಸ್‌ಕೇಡ್ಸ್ ಸಂಸ್ಥೆ ಕರ್ನಾಟಕದಲ್ಲಿ ಸುಮಾರು...

ಮೋದಿ ಹಾವಾಡಿಗನಲ್ಲ ಭಾರತದ ಗತ್ತಿನ ಸಂಕೇತ: ನಾರ್ವೆ ಪತ್ರಿಕೆಯ ಜನಾಂಗೀಯ ಕುಚೇಷ್ಟೆಗೆ ಭಾರೀ ಆಕ್ರೋಶ

ಮೋದಿ ಹಾವಾಡಿಗನಲ್ಲ ಭಾರತದ ಗತ್ತಿನ ಸಂಕೇತ: ನಾರ್ವೆ ಪತ್ರಿಕೆಯ ಜನಾಂಗೀಯ ಕುಚೇಷ್ಟೆಗೆ ಭಾರೀ ಆಕ್ರೋಶ

by Shwetha
May 21, 2026
0

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಾರ್ವೆ ಪ್ರವಾಸವು ಸಾಂಸ್ಕೃತಿಕ ಮತ್ತು ರಾಜತಾಂತ್ರಿಕ ಸಂಬಂಧಗಳಿಗಿಂತ ಹೆಚ್ಚಾಗಿ ಪಾಶ್ಚಿಮಾತ್ಯ ಮಾಧ್ಯಮಗಳ ಹಳೆಯ ಚಾಳಿ ಮತ್ತು ಪೂರ್ವಾಗ್ರಹ ಪೀಡಿತ ಧೋರಣೆಗಳಿಂದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram