ಚೆನ್ನೈ: ಹಾಡು ನಿಲ್ಲಿಸಿದ ಗಾನಗಾರುಡಿಗ ಎಸ್.ಪಿ ಬಾಲಸುಬ್ರಮಣ್ಯಂ ಅಂತ್ಯಸಂಸ್ಕಾರಕ್ಕೆ ಸಕಲ ಸಿದ್ದತೆ ನಡೆದಿದೆ.
ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ತಾಮರೈಪಾಕಂನಲ್ಲಿರುವ ರೆಡ್‍ಹಿಲ್ಸ್ ಫಾರ್ಮ್‍ಹೌಸ್‍ನಲ್ಲಿ ಎಸ್.ಪಿ ಬಾಲಸುಬ್ರಮಣ್ಯಂ ಅಂತ್ಯಸಂಸ್ಕಾರ ನಡೆಯಲಿದೆ.
ಎಸ್‍ಪಿಬಿ ಅವರ ಕನಸಿನ 16 ಎಕರೆ ವಿಶಾಲವಾದ ಫಾರ್ಮಹೌಸ್‍ನ ಮಧ್ಯಭಾಗದಲ್ಲಿ 11 ಗಂಟೆಯಿಂದ ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಸಂಸ್ಕಾರದ ವಿಧಿವಿಧಾನಗಳು ನಡೆಯಲಿವೆ.
ಈ ಕಾರ್ಯಕ್ಕಾಗಿ ಹೈದರಾಬಾದ್‍ನಿಂದ ಚೆನ್ನೈಗೆ ಬಂದ ಪುರೋಹಿತರ ತಂಡದಿಂದ ಅಂತಿಮ ವಿಧಿವಿಧಾನ ಪ್ರಕ್ರಿಯೆಗಳು ಜರುಗಲಿವೆ.
ಅಂತ್ಯಸಂಸ್ಕಾರ ನಡೆಯುವ ಸ್ಥಳದಲ್ಲಿ ನೂಕುನುಗ್ಗಲು ಆಗದಂತೆ ನೋಡಿಕೊಳ್ಳಲು 500 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಸಂಪೂರ್ಣವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು, ಎಲ್ಲರಿಗೂ ಮಾಸ್ಕ್ ನೀಡಿ ಕೋವಿಡ್ ಮಾರ್ಗಸೂಚಿಗಳಂತೆ ಅಂತ್ಯಸಂಸ್ಕಾರ ನಡೆಸಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ. ಪದ್ಮ ಪುರಸ್ಕøತ ಎಸ್.ಪಿ ಬಾಲಸುಬ್ರಮಣ್ಯಂಗೆ ತಮಿಳುನಾಡು ಪೊಲೀಸರಿಂದ ಸಕಲ ಸರ್ಕಾರಿ ಗೌರವ ಸಲ್ಲಿಕೆ ನಡೆಯಲಿದೆ. ಸರ್ಕಾರಿ ಗೌವರ ಸಲ್ಲಿಕೆ ಬಳಿಕ ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಸಂಸ್ಕಾರದ ವಿಧಿವಿಧಾನ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಅಂತ್ಯಕ್ರಿಯೆಯಲ್ಲಿ ಸೂಪರ್‍ಸ್ಟಾರ್ ರಜನಿಕಾಂತ್, ಮೆಗಾಸ್ಟಾರ್ ಚಿರಂಜೀವಿ, ತಮಿಳುನಾಡಿನ ಪ್ರಮುಖ ರಾಜಕಾರಣಿಗಳು ಸೇರಿದಂತೆ ಆಪ್ತರು ಪಾಲ್ಗೊಳ್ಳಲಿದ್ದಾರೆ.
ರಾಜ್ಯದ ರೈತರಿಗೆ ಗುಡ್ ನ್ಯೂಸ್:’ಮೊಬೈಲ್’ಮೂಲಕವೇ ‘ಜಮೀನಿನ ಪೋಡಿ ನಕ್ಷೆ’ Download ಮಾಡಿ
ರಾಜ್ಯದ ರೈತರಿಗೆ ಗುಡ್ ನ್ಯೂಸ್:'ಮೊಬೈಲ್'ಮೂಲಕವೇ 'ಜಮೀನಿನ ಪೋಡಿ ನಕ್ಷೆ' Download ಮಾಡಿಕೊಳ್ಳಿ ಹೇಗೆ ತಿಳಿಯೋಣ ಬನ್ನಿ.. ಪೋಡಿ ಎಂದರೇನು? “ಪೋಡಿ” ಎಂಬ ಪದವು ಬಹು ಮಾಲೀಕರ ನಡುವೆ...