ಬೆಂಗಳೂರು : ಭಾರತದಲ್ಲಿ ಕೊರೊನಾ ಅಬ್ಬರ ಮುಂದುವರಿದಿದ್ದು, ಇದುವರೆಗೂ 59,03,933 ಮಂದಿಗೆ ಹೆಮ್ಮಾರಿ ಸೋಂಕು ವಕ್ಕರಿಸಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಒಟ್ಟು 85,362 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 1,089 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಭಾರತದ ಒಟ್ಟಾರೆ ಕೋವಿಡ್
ಪ್ರಕರಣಗಳ ಸಂಖ್ಯೆ 59,03,933ಕ್ಕೆ 93,379 ಮಂದಿ ಮಹಾಮಾರಿಗೆ ಜೀವತೆತ್ತಂತಾಗಿದೆ.
ನಿಗರ್ವಿ, ಹಮ್ಮು ಬಿಮ್ಮುಗಳಿಲ್ಲದ ಎಸ್ಪಿಬಿ ಜೊತೆಗಾರರನ್ನು ಸ್ಮರಿಸಿಕೊಳ್ಳುತ್ತಿದ್ದರು; ದೇವರು ಮೋಸಮಾಡಿಬಿಟ್ಟ
ಇನ್ನು ಒಟ್ಟು 59,03,933 ಸೋಂಕು ಪ್ರಕರಣಗಳ ಪೈಕಿ ದೇಶದಲ್ಲಿನ್ನು 9,60,969 ಪ್ರಕರಣಗಳು ಸಕ್ರಿಯವಾಗಿದ್ದು, 48,49,585 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.
ಕಳೆದ ಒಂದು ದಿನದ ಅವಧಿಯಲ್ಲಿ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ(ಐಸಿಎಂಆರ್) 13,41,535 ಮಾದರಿಗಳನ್ನು ಪರೀಕ್ಷೆ ನಡೆಸಿದೆ. ಈ ವರೆಗೆ 7,02,69,975 ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ.








