ಬಳ್ಳಾರಿ: ಭೂ ಸುಧಾರಣಾ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಸೋಮವಾರ ಕರ್ನಾಟಕ ಬಂದ್ ಗೆ ರೈತರು ತೀರ್ಮಾನಿಸಿದ್ದಾರೆ. ಈ ಹಿನ್ನೆಲೆ ಗಣಿನಾಡು ಬಳ್ಳಾರಿಯಲ್ಲಿ ರೈತರು ಸಭೆ ನಡೆಸಿ ಈ ಬಗ್ಗೆ ಚರ್ಚೆ ನಡೆಸಿದ್ದಾರೆ.
ಬಳ್ಳಾರಿ ಬಂದ್ ಮಾಡುವುದರ ಬಗ್ಗೆ ರೈತರು ಚರ್ಚೆ ನಡೆಸಿದ್ದಾರೆ. ನಾನಾ ರೈತ ಸಂಘಟನೆಗಳು ವಿದ್ಯಾರ್ಥಿಗಳು, ಕೃಷಿಕೂಲಿಕಾರರು, ಕಾರ್ಮಿಕರು, ಕನ್ನಡಪರ ಸಂಘಟನೆಗಳು ಬಂದ್ ಗೆ ಬೆಂಬಲ ಸೂಚಿಸಿವೆ. ಪ್ರತಿಭಟನೆಯ ರೂಪರೇಷುಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿ ರೈತರು ತೀರ್ಮಾನ ಕೈಗೊಂಡಿದ್ದಾರೆ.








