ADVERTISEMENT
Saturday, March 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports IPL 2020

ಐಪಿಎಲ್ 2020- ಶುಬ್ಮನ್ ಗಿಲ್ ಆಟದ ಮುಂದೆ ಮಂಕಾದ ಸನ್ ರೈಸರ್ಸ್

admin by admin
September 27, 2020
in IPL 2020, Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ಐಪಿಎಲ್ 2020- ಶುಬ್ಮನ್ ಗಿಲ್ ಆಟದ ಮುಂದೆ ಮಂಕಾದ ಸನ್ ರೈಸರ್ಸ್

ಶುಬ್ಮನ್ ಗಿಲ್ ಮತ್ತು ಇಯಾನ್ ಮೊರ್ಗಾನ್ ಅವರ ಮನಮೋಹಕ ಆಟದ ನೆರವನ್ನು ಪಡೆದ ಕೊಲ್ಕತ್ತಾ ನೈಟ್ ರೈಡಸ್ ತಂಡ 2020ರ ಐಪಿಎಲ್ ಟೂರ್ನಿಯ ಎಂಟನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಬಾದ್ ತಂಡವನ್ನು ಏಳು ವಿಕೆಟ್ ಗಳಿಂದ ಪರಾಭವಗೊಳಿಸಿತು.
ಅಬುಧಾಬಿಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಸನ್ ರೈಸರ್ಸ್ ಹೈದ್ರಬಾದ್ ತಂಡ ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆರಂಭದಿಂದಲೇ ಡೇವಿಡ್ ವಾರ್ನರ್ ಮಿಂಚನ ಆಟವನ್ನಾಡಿದ್ರು. ಆದ್ರೆ ಜೋನಿ ಬೇರ್ ಸ್ಟೋವ್ 5 ರನ್ ಗಳಿಸಿ ನಿರಾಸೆ ಮೂಡಿಸಿದ್ರು. ಬಳಿಕ ಡೇವಿಡ್ ವಾರ್ನರ್ ಮತ್ತು ಮನೀಷ್ ಪಾಂಡೆ ತಂಡಕ್ಕೆ ಆಧಾರವಾದ್ರು. ಈ ಹಂತದಲ್ಲಿ ಡೇವಿಡ್ ವಾರ್ನರ್ 36 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದ್ರು.
ನಂತರ ಪಾಂಡೆ ಮತ್ತು ವೃದ್ದಿಮಾನ್ ಶಾಹ ಅವರು ತಂಡದ ರನ್ ಗತಿಯನ್ನು ಏರಿಸಲು ಮುಂದಾದ್ರು. ಬಿರುಸಿನ ಆಟವನ್ನಾಡಿದ್ದ ಮನೀಷ್ ಪಾಂಡೆ 38 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್ ಗಳ ಸಹಾಯದಿಂದ ಆಕರ್ಷಕ 51 ರನ್ ಗಳಿಸಿ ರಸೇಲ್‍ಗೆ ವಿಕೆಟ್ ಒಪ್ಪಿಸಿದ್ರು. ವೃದ್ದಿಮಾನ್ ಶಾಹ ಅವರು 30 ರನ್ ದಾಖಲಿಸಿ ರನೌಟಾದ್ರು. ಅಂತಿಮವಾಗಿ ಸನ್ ರೈಸರ್ಸ್ ಹೈದ್ರಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿತು.
ಸವಾಲನ್ನು ಬೆನ್ನಟ್ಟಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ ಆರಂಭದಲ್ಲೇ ಆಘಾತ ಅನುಭವಿಸಿತ್ತು. ಆರಂಭಿಕ ಸುನೀಲ್ ನರೇನ್ ಶೂನ್ಯ ಸುತ್ತಿದ್ರೆ, ನಿತೇಶ್ ರಾಣ 26 ರನ್ ಗಳಿಸಿ ತನ್ನ ಹೋರಾಟವನ್ನು ಮುಗಿಸಿದ್ರು. ನಾಯಕ ದಿನೇಶ್ ಕಾರ್ತೀಕ್ ಕೂಡ ಶೂನ್ಯ ಸುತ್ತಿದ್ರು.
ಈ ನಡುವೆ ಆರಂಭಿಕ ಶುಬ್ಮನ್ ಗಿಲ್ ಅವರ ಭರ್ಜರಿ ಆಟ ಸನ್ ರೈಸರ್ಸ್ ಹೈದ್ರಬಾದ್ ತಂಡದ ಗೆಲುವಿನ ಆಸೆಯನ್ನು ಕಮರಿಹೋಗುವಂತೆ ಮಾಡಿತ್ತು. ಮತ್ತೊಂದೆಡೆ ಅನುಭವಿ ಆಟಗಾರ ಇಯಾನ್ ಮೊರ್ಗಾನ್ ಜವಾಬ್ದಾರಿಯುತ ಆಟ ಪ್ರದರ್ಶಿಸಿದ್ರು. ಶುಬ್ಮನ್ ಗಿಲ್ ಮತ್ತು ಮೊರ್ಗಾನ್ ನಾಲ್ಕನೇ ವಿಕೆಟ್‍ಗೆ ಅಜೇಯ 92 ರನ್ ಕಲೆ ಹಾಕಿ ತಂಡವನ್ನು ಗೆಲುವಿನ ದಡ ಸೇರಿಸಿದ್ರು. ಕೆಕೆಆರ್ ತಂಡ 18ನೇ ಓವರ್ ನಲ್ಲಿ ಮೂರು ವಿಕೆಟ್ ಕಳೆದುಕೊಂಡು 145 ರನ್ ಗಳಿಸಿತು. ಶುಬ್ಮನ್ ಗಿಲ್ 62 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಎರಡು ಸಿಕ್ಸರ್ ಗಳ ಸಹಾಯದಿಂದ ಅಜೇಯ 70 ರನ್ ಸಿಡಿಸಿದ್ರೆ, ಮೊರ್ಗಾನ್ 29 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್ ಗಳ ನೆರವಿನಿಂದ ಅಜೇಯ 42 ರನ್ ದಾಖಲಿಸಿದ್ರು. ಶುಬ್ಮನ್ ಗಿಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು.

Related posts

ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ ಕೇಂದ್ರ ಭರವಸೆ: ಡಿಕೆ ಶಿವಕುಮಾ‌ರ್

ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ ಕೇಂದ್ರ ಭರವಸೆ: ಡಿಕೆ ಶಿವಕುಮಾ‌ರ್

March 21, 2026
ಬೆಂಗಳೂರು 2ನೇ ಏರ್‌ಪೋರ್ಟ್‌ಗೆ ಟೆಂಡರ್ ಆಹ್ವಾನ

ಬೆಂಗಳೂರು 2ನೇ ಏರ್‌ಪೋರ್ಟ್‌ಗೆ ಟೆಂಡರ್ ಆಹ್ವಾನ

March 21, 2026
Tags: #Abu Dhabi. - SCORECARD#devid warner#dinesh karthik#saakshatv.comEoin MorganIPLIPL 2020kkrKolkata Knight Ridersmanish pandeShubman GillsrhSunRisers Hyderabaduae ipl 2020
ShareTweetSendShare
Join us on:

Related Posts

ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ ಕೇಂದ್ರ ಭರವಸೆ: ಡಿಕೆ ಶಿವಕುಮಾ‌ರ್

ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ ಕೇಂದ್ರ ಭರವಸೆ: ಡಿಕೆ ಶಿವಕುಮಾ‌ರ್

by Shwetha
March 21, 2026
0

ಬೆಂಗಳೂರು ನಗರಕ್ಕೆ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲಾ ಅನುಮತಿಗಳನ್ನು ಕೇಂದ್ರ ಸರ್ಕಾರ ನೀಡಲಿದೆ ಎಂದು ಡಿ. ಕೆ. ಶಿವಕುಮಾರ್ ತಿಳಿಸಿದ್ದಾರೆ. ಕೇಂದ್ರ ವಿಮಾನಯಾನ ಸಚಿವರನ್ನು...

ಬೆಂಗಳೂರು 2ನೇ ಏರ್‌ಪೋರ್ಟ್‌ಗೆ ಟೆಂಡರ್ ಆಹ್ವಾನ

ಬೆಂಗಳೂರು 2ನೇ ಏರ್‌ಪೋರ್ಟ್‌ಗೆ ಟೆಂಡರ್ ಆಹ್ವಾನ

by Shwetha
March 21, 2026
0

ಬೆಂಗಳೂರು ನಗರದ ಎರಡನೇ ವಿಮಾನ ನಿಲ್ದಾಣ ನಿರ್ಮಾಣದ ದಿಶೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಟೆಂಡರ್ ಆಹ್ವಾನಿಸಿದೆ. ಈ ಕುರಿತು ಎಮ್. ಬಿ. ಪಾಟೀಲ್ ಪ್ರತಿಕ್ರಿಯಿಸಿ,...

ಮಧ್ಯಪ್ರಾಚ್ಯದಲ್ಲಿ ಮಹಾ ಸಂಘರ್ಷ: ಹಾರ್ಮುಜ್‌ ಜಲಸಂಧಿಯಲ್ಲಿ ಹಡಗು ಸಾಗಿಸಲು ಇರಾನ್ ವಿಧಿಸಿದೆ 18 ಕೋಟಿ ರೂಪಾಯಿ ಟೋಲ್!.

ಮಧ್ಯಪ್ರಾಚ್ಯದಲ್ಲಿ ಮಹಾ ಸಂಘರ್ಷ: ಹಾರ್ಮುಜ್‌ ಜಲಸಂಧಿಯಲ್ಲಿ ಹಡಗು ಸಾಗಿಸಲು ಇರಾನ್ ವಿಧಿಸಿದೆ 18 ಕೋಟಿ ರೂಪಾಯಿ ಟೋಲ್!.

by Shwetha
March 21, 2026
0

ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಭೀಕರ ಯುದ್ಧದ ಕಾರ್ಮೋಡದ ನಡುವೆಯೇ ಇರಾನ್ ಜಗತ್ತಿನ ಪ್ರಮುಖ ವಾಣಿಜ್ಯ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ. ಇದು ಜಾಗತಿಕ...

ಗ್ಯಾಸ್ ಬುಕ್ಕಿಂಗ್ ನಿಯಮದಲ್ಲಿ ಭಾರಿ ಬದಲಾವಣೆ ಇನ್ಮುಂದೆ ದಿನದ 24 ಗಂಟೆಯೂ ಬುಕ್ ಮಾಡುವಂತಿಲ್ಲ : ಗ್ಯಾಸ್ ಬುಕ್ ಮಾಡುವ ಮುನ್ನ ಈ ಸುದ್ದಿ ಓದಿ ಹೊಸ ಟೈಮಿಂಗ್ಸ್ ಮಿಸ್ ಆದ್ರೆ ಸಿಲಿಂಡರ್ ಸಿಗಲ್ಲ!

ಗ್ಯಾಸ್ ಬುಕ್ಕಿಂಗ್ ನಿಯಮದಲ್ಲಿ ಭಾರಿ ಬದಲಾವಣೆ ಇನ್ಮುಂದೆ ದಿನದ 24 ಗಂಟೆಯೂ ಬುಕ್ ಮಾಡುವಂತಿಲ್ಲ : ಗ್ಯಾಸ್ ಬುಕ್ ಮಾಡುವ ಮುನ್ನ ಈ ಸುದ್ದಿ ಓದಿ ಹೊಸ ಟೈಮಿಂಗ್ಸ್ ಮಿಸ್ ಆದ್ರೆ ಸಿಲಿಂಡರ್ ಸಿಗಲ್ಲ!

by Shwetha
March 21, 2026
0

ಬೆಂಗಳೂರು: ಅಡುಗೆ ಅನಿಲ ಗ್ರಾಹಕರಿಗೆ ತೈಲ ಕಂಪನಿಗಳು ಮಹತ್ವದ ಸುದ್ದಿಯೊಂದನ್ನು ನೀಡಿದ್ದು ಸಿಲಿಂಡರ್ ಬುಕ್ಕಿಂಗ್ ಪ್ರಕ್ರಿಯೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ನೀವು ಇದುವರೆಗೆ ನಿಮಗೆ ಇಷ್ಟ ಬಂದ...

ಸಾಲದ ಶೂಲದಲ್ಲಿ ರಾಜ್ಯವಿದ್ದರೂ ಹೈಕಮಾಂಡ್ ಪಾಲಿಗೆ ಕರ್ನಾಟಕವೇ ಕಾಮಧೇನು ಡಿಕೆಶಿ ವಿರುದ್ಧ ಐಶ್ವರ್ಯ ಅನಂತಕುಮಾರ್ ನೇರ ವಾಗ್ದಾಳಿ

ಸಾಲದ ಶೂಲದಲ್ಲಿ ರಾಜ್ಯವಿದ್ದರೂ ಹೈಕಮಾಂಡ್ ಪಾಲಿಗೆ ಕರ್ನಾಟಕವೇ ಕಾಮಧೇನು ಡಿಕೆಶಿ ವಿರುದ್ಧ ಐಶ್ವರ್ಯ ಅನಂತಕುಮಾರ್ ನೇರ ವಾಗ್ದಾಳಿ

by Shwetha
March 21, 2026
0

ಬೆಂಗಳೂರು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ಕರ್ನಾಟಕವನ್ನು ಕೇವಲ ತನ್ನ ಪಕ್ಷದ ಹೈಕಮಾಂಡ್‌ಗೆ ಹಣ ಒದಗಿಸುವ ಮೂಲವನ್ನಾಗಿ ಮಾಡಿಕೊಂಡಿದೆ ಎಂದು ದಿವಂಗತ ಕೇಂದ್ರ ಸಚಿವ ಹಾಗೂ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram