ಐಪಿಎಲ್ 2020- ಬೌಲರ್ ಗಳನ್ನು ಚೆಂಡಾಡಲು ರೋಹಿತ್ ಬತ್ತಳಿಕೆಯಲ್ಲಿದೆ 9 ಬ್ಯಾಟ್ಸ್ ಗಳು
ರೋಹಿತ್ ಶರ್ಮಾ…ಮುಂಬೈ ಇಂಡಿಯನ್ಸ್ ತಂಡದ ನಾಯಕ. ಹಿಟ್ ಮ್ಯಾನ್ ಖ್ಯಾತಿ ಪಡೆದಿರುವ ರೋಹಿತ್ ಶರ್ಮಾ ಕ್ರೀಸ್‍ಗೆ ಅಂಟಿಕೊಂಡು ಬಿಟ್ರೆ ತಡೆಯುವುದು ತುಂಬಾನೇ ಕಷ್ಟ..
ಬೌಲರ್ ಗಳ ಮೇಲೆ ಸವಾರಿ ಮಾಡಿಕೊಂಡು ಆಡುವ ರೋಹಿತ್ ಅಬ್ಬರದ ಬ್ಯಾಟಿಂಗ್ ಮೂಲಕ ಬೌಲರ್ ಗಳನ್ನು ತಲ್ಲಣಗೊಳಿಸುತ್ತಾರೆ. ಕ್ಲಾಸ್ ಮತ್ತು ಮಾಸ್ ಆಟದ ಮೂಲಕ ಮಿಂಚು ಹರಿಸುವ ರೋಹಿತ್ ಶರ್ಮಾ ಈ ಬಾರಿಯ ಐಪಿಎಲ್ ಟೂರ್ನಿಗಾಗಿ ತನ್ನ ಕಿಟ್ ನಲ್ಲಿ 9 ಬ್ಯಾಟ್ ಗಳನ್ನು ಇಟ್ಟುಕೊಂಡಿದ್ದಾರೆ.
ಅರೇ 14 ಪಂದ್ಯಗಳನ್ನು ಆಡಲು 9 ಬ್ಯಾಟ್ ಗಳು ಬೇಕಾ ಅಂತ ಅಚ್ಚರಿ ವ್ಯಕ್ತಪಡಿಸಬಹುದು. ಆದ್ರೆ ರೋಹಿತ್ ತಾನು ಯಾಕೆ 9 ಬ್ಯಾಟ್‍ಗಳನ್ನು ಇಟ್ಟುಕೊಂಡಿದ್ದೇನೆ ಎಂಬುದಕ್ಕೆ ಸಮರ್ಥನೆ ಕೂಡ ನೀಡಿದ್ದಾರೆ.
ರೋಹಿತ್ ಬಳಸುವ ಬ್ಯಾಟ್ ಹೆಚ್ಚು ಉದ್ದವಾಗಿರುತ್ತದೆ. ಆದ್ರೆ ಬ್ಯಾಟ್ ನ ಆಯುಷ್ಯ ಆಟಗಾರ ಆಡುವ ಸ್ವರೂಪದ ಮೇಲಿರುತ್ತದೆ. ನಾನು ನಾಲ್ಕೈದು ತಿಂಗಳು ಬಗ್ಗೆ ಹೇಳುತ್ತಿದ್ದೇನೆ. ಆದ್ರೆ ಕೊನೆಯಲ್ಲಿ ನಾನು ಹೇಗೆ ಆಡುತ್ತಿದ್ದೇನೆ ಎಂಬುದರ ಡಿಪೆಂಡ್ ಆಗಿರುತ್ತದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಟಿ-ಟ್ವೆಂಟಿ ಪಂದ್ಯವನ್ನು ಆಡುವಾಗ ಆಟದ ಶೈಲಿಯಲ್ಲಿ ಸಾಕಷ್ಟು ಬದಲಾವಣೆಗಳು ಇರುತ್ತವೆ. ಇಲ್ಲಿ ಪವರ್ ಫುಲ್ ಆಗಿ ಹೊಡೆಯುವ ಅವಶ್ಯಕತೆಗಳು ಇರುತ್ತವೆ. ಅದೇ ರೀತಿ ನವನವೀನ ಹೊಡೆತಗಳನ್ನು ಅವಿಷ್ಕಾರ ಮಾಡಲು ಸಾಕಷ್ಟು ಅಭ್ಯಾಸಗಳನ್ನು ಮಾಡಬೇಕಾಗುತ್ತದೆ. ಹೀಗಾಗಿ ಕೆಲವೊಂದು ಬಾರಿ ಬ್ಯಾಟ್ ಮುರಿದು ಹೋಗುವ ಸಾಧ್ಯತೆಗಳೂ ಇರುತ್ತವೆ ಎಂದು ರೋಹಿತ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.
ನನ್ನ ಬ್ಯಾಟ್ ಐಪಿಎಲ್ ಅಥವಾ ಟಿ-ಟ್ವೆಂಟಿ ಮಾದರಿಯ ಕ್ರಿಕೆಟ್ ನಲ್ಲಿ ಒಂದು ಅಥವಾ ಎರಡು ತಿಂಗಳು ಬಾಳಿಕೆ ಇರುತ್ತವೆ. ಹೀಗಾಗಿ ನಮ್ಮ ಮುಂದಿರುವ ಸಮಯ ಕೂಡ ತುಂಬಾ ಕಠಿಣವಾಗಿದೆ. ಬ್ಯಾಟ್ ಬೇಕು ಅಂತ ಅನ್ನಿಸಿದಾಗ ಕೊರಿಯರ್ ಮೂಲಕ ತಮಗೆ ಸರಿಯಾದ ಸಮಯಕ್ಕೆ ಸಿಗುತ್ತದೆ ಅನ್ನೋದು ಕೂಡ ತಿಳಿಯುವುದಿಲ್ಲ. ಹಾಗಾಗಿ ನಾನು 9 ಬ್ಯಾಟ್ ಗಳನ್ನು ತೆಗೆದುಕೊಂಡು ಬಂದಿದ್ದೇನೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.








